ವಿಡಿಯೋ ನೋಡಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ದರ್ಶನಕ್ಕೆ ಮೊದಲ ದಿನ ಹೇಗಿತ್ತು ಭಕ್ತರ ರೆಸ್ಪಾನ್ಸ್?

ವಿಡಿಯೋ ನೋಡಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ದರ್ಶನಕ್ಕೆ ಮೊದಲ ದಿನ ಹೇಗಿತ್ತು ಭಕ್ತರ ರೆಸ್ಪಾನ್ಸ್?

Ganapathi Sharma
|

Updated on:Jan 23, 2024 | 8:59 AM

ಅಯೋದ್ಯೆಯ ರಾಮ ಮಂದಿರವು ಇಂದು (ಜನವರಿ 23) ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಬಂದಿದ್ದು, ಜನಸಂದಣಿ ಹೆಚ್ಚಾಗಿತ್ತು. ಮೊದಲ ದಿನ ಭಕ್ತರ ಪ್ರವಾಹ ಹೇಗಿತ್ತೆಂಬುದನ್ನು ಇಲ್ಲಿ ನೋಡಿ.

ಅಯೋಧ್ಯೆ, ಜನವರಿ 23: ಅಯೋಧ್ಯೆಯ ಭವ್ಯವಾದ ರಾಮ ಮಂದಿರವು (Ayodhya Ram Mandir) ಉದ್ಘಾಟನೆಯ ಒಂದು ದಿನದ ನಂತರ, ಮಂಗಳವಾರ ಬೆಳಿಗ್ಗೆ ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಂಡಿದೆ. ಈ ವೇಳೆ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದು, ನೂಕುನುಗ್ಗಲು ಪರಿಸ್ಥಿತಿ ಉಂಟಾಯಿತು. ಬೆಳಗಿನ ಜಾವ 3 ಗಂಟೆಯಿಂದಲೇ ದೇವಾಲಯದ ದ್ವಾರಗಳ ಹೊರಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾದು ಕುಳಿತಿರುವುದು ಕಂಡುಬಂದಿತು. ಬೆಳಗ್ಗೆ 6.30ಕ್ಕೆ ರಾಮ ಲಲ್ಲಾ ಶೃಂಗಾರ ಆರತಿಗಾಗಿ ದೇವಾಲಯದ ದ್ವಾರಗಳನ್ನು ತೆರೆದ ತಕ್ಷಣ, ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು, ಇದು ಕಾಲ್ತುಳಿತದಂತಹ ಪರಿಸ್ಥಿತಿಯನ್ನು ಸೃಷ್ಟಿಸಿತು.

ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಪ್ರಾಣ ಪ್ರತಿಷ್ಠೆ ನೆರವೇರಿಸಿದ ನಂತರ ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ದೇವಾಲಯವನ್ನು ಮುಕ್ತವಾಗಿಸಲಾಗಿದೆ ಎಂದು ಘೋಷಿಸಲಾಯಿತು. ಮರು ದಿನವೇ ಭಗವಾನ್ ರಾಮನ ದರ್ಶನಕ್ಕಾಗಿ ದೇವಾಲಯ ಪ್ರವೇಶಿಸಲು ಭಕ್ತರು ಮುಗಿಬಿದ್ದಿದ್ದು ಕಾಲ್ತುಳಿತ ರೀತಿಯ ಪರಿಸ್ಥಿತಿ ಉಂಟಾಗಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.

ಭಕ್ತರು ಮುಂಜಾನೆ 3 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಿದ್ದರು.

ಅಯೋಧ್ಯೆಯ ರಾಮ ಮಂದಿರದಲ್ಲಿ ದರ್ಶನ ಸಮಯ ಯಾವುವು?

  • ಬೆಳಿಗ್ಗೆ – 7 ರಿಂದ 11.30 ರವರೆಗೆ
  • ಮಧ್ಯಾಹ್ನ – ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ

ಅಯೋಧ್ಯೆಯ ರಾಮ ಲಲ್ಲಾ ದೇವಸ್ಥಾನದಲ್ಲಿ ಆರತಿ ಸಮಯ ಯಾವುವು?

  • ಜಾಗರಣ್ ಅಥವಾ ಶೃಂಗಾರ ಆರತಿ- ಬೆಳಗ್ಗೆ 6.30
  • ಸಂಧ್ಯಾ ಆರತಿ – ಸಂಜೆ 7.30

ಆರತಿಗಾಗಿ ಉಚಿತ ಪಾಸ್‌ಗಳನ್ನು ಪಡೆಯುವುದು ಹೇಗೆ?

ಅಯೋಧ್ಯೆಯ ರಾಮಮಂದಿರದಲ್ಲಿ ಆರತಿಗಾಗಿ ಉಚಿತ ಪಾಸ್‌ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ವೆಬ್‌ಸೈಟ್‌ನ ಪ್ರಕಾರ, ಆಫ್‌ಲೈನ್ ಪಾಸ್‌ಗಳನ್ನು ಶ್ರೀರಾಮ ಜನ್ಮಭೂಮಿಯಲ್ಲಿರುವ ಶಿಬಿರ ಕಚೇರಿಯಿಂದ ಸಂಗ್ರಹಿಸಬಹುದು. ಪಾಸ್‌ಗಳನ್ನು ಪಡೆಯಲು ಭಕ್ತರು ಸರ್ಕಾರ ನೀಡಿದ ಐಡಿ ಪುರಾವೆಗಳನ್ನು ಸಲ್ಲಿಸಬೇಕು.

ಇದನ್ನೂ ಓದಿ: ಕರ್ನಾಟಕದಿಂದ ಅಯೋದ್ಯೆಗೆ ಆರು ವಿಶೇಷ ರೈಲು: ಶೀಘ್ರದಲ್ಲೇ ಬುಕಿಂಗ್ ಶುರು, ಇಲ್ಲಿದೆ ಪೂರ್ಣ ವಿವರ

ದೀಪಾವಳಿ ರೀತಿಯ ಸಂಭ್ರಮ

ಸೋಮವಾರದ ಪ್ರಾಣ ಪ್ರತಿಷ್ಠೆಯ ನಂತರ ಸಂಜೆಯ ವೇಳೆ ರಾಮ ಮಂದಿರದ ಆವರಣದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಯಿತು. ದೇವಸ್ಥಾನದ ಪಟ್ಟಣದಲ್ಲಿ ರಾತ್ರಿ ಆಕಾಶವು ಪಟಾಕಿಗಳ ಮಿಂಚಿನಿಂದ ತುಂಬಿ ದೀಪಾವಳಿಯಂತೆ ಭಾಸವಾಯಿತು. ರಾಮ ಲಲ್ಲಾ ಮೂರ್ತಿಯನ್ನು ಸೋಮವಾರ ಮಧ್ಯಾಹ್ನ ದೇವಾಲಯದಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಸಮಾರಂಭ ನಡೆಯಿತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್​ಎಸ್​ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ನೂರಾರು ಗಣ್ಯರು ಹಾಜರಿದ್ದರು.

ರಾಮ ಮಂದಿರ ಕುರಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ಮಾಡಿ

Published on: Jan 23, 2024 08:55 AM