ಒಂಚೂರು ಭಯ ಇಲ್ಲದೆ ವಿನಯ್ಗೆ ಸೆಡ್ಡು ಹೊಡೆದ ಪ್ರತಾಪ್
ವಿನಯ್ ಹಾಗೂ ಪ್ರತಾಪ್ ಅನೇಕ ಬಾರಿ ಮುಖಾಮುಖಿ ಆಗಿದ್ದಿದೆ. ಈಗ ಪ್ರತಾಪ್ ಅವರು ಮತ್ತೊಮ್ಮೆ ಎದುರು ಬದರು ಆಗಿದ್ದಾರೆ. ಪ್ರತಾಪ್ ಮಾತುಗಳು ಗಮನ ಸೆಳೆದಿವೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ವಿನಯ್ ಗೌಡ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಕಿರಿಕ್ಗಳು ಸಾಮಾನ್ಯ. ವಿನಯ್ ಜೋರು ಧ್ವನಿಯಲ್ಲಿ ಮಾತನಾಡಿದಾಗ ಪ್ರತಾಪ್ ಒಮ್ಮೊಮ್ಮೆ ಹೆದರಿದ್ದಿದೆ. ಆದರೆ, ಫಿನಾಲೆ ವೀಕ್ನಲ್ಲಿ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ವಿನಯ್ಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಎಪಿಸೋಡ್ ಇಂದು (ಜನವರಿ 23) ಪ್ರಸಾರ ಕಾಣಲಿದೆ. 24 ಗಂಟೆ ಜಿಯೋ ಸಿನಿಮಾದಲ್ಲಿ ಲೈವ್ ನೋಡೋಕೆ ಅವಕಾಶ ಇದೆ. ಜನವರಿ 27 ಹಾಗೂ 28ರಂದು ಬಿಗ್ ಬಾಸ್ (Bigg Boss) ಫಿನಾಲೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos