Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಿಂದ ಅಯೋಧ್ಯೆಗೆ ಆರು ವಿಶೇಷ ರೈಲು: ಶೀಘ್ರದಲ್ಲೇ ಬುಕಿಂಗ್ ಶುರು, ಇಲ್ಲಿದೆ ಪೂರ್ಣ ವಿವರ

Karnataka to Ayodhya special trains: ಅಯೋಧ್ಯೆಗೆ ಹೋಗಬೇಕೆಂಬ ಬಯಕೆ ಹೊಂದಿರುವ ಕರ್ನಾಟಕದ ಭಕ್ತರಿಗೆ ನೈಋತ್ಯ ರೈಲ್ವೆ ಶುಭ ಸುದ್ದಿ ನೀಡಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಂದ ಅಯೋಧ್ಯೆಗೆ 6 ವಿಶೇಷ ರೈಲುಗಳು ಸಂಚರಿಸಲಿದ್ದು, ಅವುಗಳ ವೇಳಾಪಟ್ಟಿ, ನಿಲುಗಡೆ ಇತ್ಯಾದಿ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದಿಂದ ಅಯೋಧ್ಯೆಗೆ ಆರು ವಿಶೇಷ ರೈಲು: ಶೀಘ್ರದಲ್ಲೇ ಬುಕಿಂಗ್ ಶುರು, ಇಲ್ಲಿದೆ ಪೂರ್ಣ ವಿವರ
ಕರ್ನಾಟಕದಿಂದ ಅಯೋದ್ಯೆಗೆ ಆರು ವಿಶೇಷ ರೈಲು: ಶೀಘ್ರದಲ್ಲೇ ಬುಕಿಂಗ್ ಶುರು, ಇಲ್ಲಿದೆ ಪೂರ್ಣ ವಿವರ
Follow us
Ganapathi Sharma
|

Updated on:Jan 23, 2024 | 9:36 AM

ಬೆಂಗಳೂರು, ಜನವರಿ 23: ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿದ್ದು, ಇಂದಿನಿಂದ ಸಾರ್ವಜನಿಕರೂ ಬಾಲ ರಾಮನ ದರ್ಶನ ಪಡೆಯಬಹುದಾಗಿದೆ. ಇದರೊಂದಿಗೆ, ವಿವಿಧ ರಾಜ್ಯಗಳಿಂದ ಅಯೋಧ್ಯೆಗೆ ತೆರಳುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಕರ್ನಾಟಕದಿಂದಲೂ (Karnataka) ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆ ಇದೆ. ಕರ್ನಾಟಕ ಮತ್ತು ಗೋವಾವನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸಲು ನೈಋತ್ಯ ರೈಲ್ವೆ (SWR) ‘ಆಸ್ತಾ ಸ್ಪೆಷಲ್ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳನ್ನು ಓಡಿಸಲಿದೆ.

ಎರಡು ರೈಲುಗಳು ಮೈಸೂರಿನಿಂದ (ಎಸ್​ಎಂವಿಟಿ ಬೆಂಗಳೂರು ಮೂಲಕ), ಮತ್ತು ಎಸ್​ಎಂವಿಟಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ (ಧಾರವಾಡ ಮತ್ತು ಹುಬ್ಬಳ್ಳಿ ಮೂಲಕ) ಮತ್ತು ವಾಸ್ಕೋಡಗಾಮಾ (ರತ್ನಗಿರಿ ಮತ್ತು ಪನ್ವೇಲ್) ಮೂಲಕ ತಲಾ ಒಂದು ರೈಲು ಅಯೋಧ್ಯೆಗೆ ಸಂಚರಿಸಲಿದೆ.

ಪ್ರಯಾಣಿಕರು ಇಂಡಿಯನ್ ರೈಲ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್​ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್) ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ ಎಂದು ನೈಋತ್ಯ ರೈಲ್ವೆ ಈಗಾಗಲೇ ತಿಳಿಸಿದೆ.

ಈ ರೈಲುಗಳು ಸೀಮಿತ ಟ್ರಿಪ್​ಗಳನ್ನು ಹೊಂದಿದ್ದರೂ, ರೈಲ್ವೆ ಮಂಡಳಿಯು ಬೇಡಿಕೆಯ ಆಧಾರದ ಮೇಲೆ ಅವುಗಳನ್ನು ವಿಸ್ತರಿಸಲು ನಿರ್ಧರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಕಿಂಗ್ ಮತ್ತು ದರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 06203

ಇದು ತುಮಕೂರನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸುತ್ತದೆ. ಈ ರೈಲು ಬುಧವಾರ (ಫೆಬ್ರವರಿ 7 ಮತ್ತು 21) ತುಮಕೂರಿನಿಂದ ಮತ್ತು ಫೆಬ್ರವರಿ 10 ಮತ್ತು 24 ರಂದು ಅಯೋಧ್ಯಾಧಾಮದಿಂದ ಹೊರಡಲಿದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2,726 ಕಿಮೀ ಏಕಮುಖ ಸಂಚಾರ ಇದರದ್ದಾಗಿರಲಿದೆ.

ರೈಲು ಸಂಖ್ಯೆ 06204

ಇದು ಭಾನುವಾರ (ಫೆಬ್ರವರಿ 11 ಮತ್ತು 25) ಚಿತ್ರದುರ್ಗದಿಂದ ಮತ್ತು ಬುಧವಾರದಂದು (ಫೆಬ್ರವರಿ 14 ಮತ್ತು 28) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2,483 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06205

ಇದು ವಾಸ್ಕೋಡಗಾಮಾವನ್ನು ದರ್ಶನ್ ನಗರದೊಂದಿಗೆ (ಅಯೋಧ್ಯೆಯ ಸಮೀಪವಿರುವ ರೈಲು ನಿಲ್ದಾಣ) ಸಂಪರ್ಕಿಸುತ್ತದೆ. ರೈಲು ಸೋಮವಾರ (ಫೆಬ್ರವರಿ 12 ಮತ್ತು 26) ವಾಸ್ಕೋಡಗಾಮಾದಿಂದ ಮತ್ತು ಶುಕ್ರವಾರ (ಫೆಬ್ರವರಿ 16 ಮತ್ತು ಮಾರ್ಚ್ 1) ದರ್ಶನ್ ನಗರದಿಂದ ಹೊರಡಲಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಕಡೆಯಿಂದ ಅಯೋಧ್ಯೆಗೆ 11 ವಿಶೇಷ ರೈಲು

ಇದು ಮಜೋರ್ಡಾ, ಮಡಗಾಂವ್, ಕರ್ಮಾಲಿ, ರತ್ನಗಿರಿ, ಪನ್ವೇಲ್, ವಾಪಿ, ಕೋಟಾ, ತುಂಡ್ಲಾ, ಪ್ರಯಾಗ್‌ರಾಜ್ ಮತ್ತು ಮಿರ್ಜಾಪುರ ಮೂಲಕ ಹಾದುಹೋಗುತ್ತದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2,791 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06206

ಇದು ಮೈಸೂರನ್ನು ಅಯೋಧ್ಯೆಯೊಂದಿಗೆ ಸಂಪರ್ಕಿಸುತ್ತದೆ ಮತ್ತು ತಲಾ ಒಂದು ಪ್ರವಾಸವನ್ನು ಮಾಡಲಿದೆ. ಇದು ಶನಿವಾರ (ಫೆಬ್ರವರಿ 17) ಮೈಸೂರಿನಿಂದ ಮತ್ತು ಮಂಗಳವಾರ (ಫೆಬ್ರವರಿ 20) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಚಿತ್ರದುರ್ಗ, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಬಿಜಾಪುರ, ಕಲಬುರಗಿ, ವಾಡಿ, ಬಲ್ಹರ್ಷಾ, ನಾಗಪುರ, ಜಬಲ್‌ಪುರ ಮತ್ತು ಪ್ರಯಾಗರಾಜ್ ಮೂಲಕ ಹಾದು ಹೋಗಲಿದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 3,004 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06207

ಇದು ಶನಿವಾರ (ಫೆಬ್ರವರಿ 17) ಬೆಳಗಾವಿಯಿಂದ ಮತ್ತು ಮಂಗಳವಾರ (ಫೆಬ್ರವರಿ 20) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ, ಸಿಕಂದರಾಬಾದ್, ಬಲ್ಹರ್ಷಾ ಮತ್ತು ಪ್ರಯಾಗರಾಜ್ ಮೂಲಕ ಚಲಿಸುತ್ತದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2462 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:29 am, Tue, 23 January 24

ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ