ಸಂಗೀತಾ ಒಬ್ಬರನ್ನು ತುಳಿದು ಮೇಲೆ ಹೋಗ್ತಿದ್ದಾರೆ: ತನಿಷಾ
Sangeetha-Tanisha: ಬಿಗ್ಬಾಸ್ ಮನೆಯಲ್ಲಿ ಸಂಗೀತಾ ಹಾಗೂ ತನಿಷಾ ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಕೊನೆಗೆ ವೈರಿಗಳಾಗಿಬಿಟ್ಟರು. ಹೊರಗೆ ಬಂದಮೇಲೂ ತನಿಷಾ, ಸಂಗೀತಾ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ.
ತನಿಷಾ ಕುಪ್ಪಂಡ (Tanisha Kuppanda) ಬಿಗ್ಬಾಸ್ ಮನೆಯಿಂದ ಕಳೆದ ವಾರ ಮಧ್ಯವಾರದಲ್ಲೇ ಹೊರಗೆ ಬಂದರು. ಹೊರಗೆ ಬರಬೇಕಾದರೆ ಮನೆಯ ಸದಸ್ಯರ ಮೇಲೆ ಕೋಪ ಮಾಡಿಕೊಂಡು ಹೊರಗೆ ಬಂದಿದ್ದರು. ಅದರಲ್ಲಿಯೂ ಸಂಗೀತಾ ಮೇಲಂತೂ ತುಸು ಹೆಚ್ಚು ಖಾರವಾಗಿಯೇ ಮಾತನಾಡಿದ್ದರು. ಇದೀಗ ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಸಂಗೀತಾ ಮೇಲೆ ಕೋಪ ಹೊರಹಾಕಿದ್ದಾರೆ. ಸಂಗೀತಾ ಒಬ್ಬರನ್ನು ತುಳಿದು ಮೇಲೆ ಬರುತ್ತಿದ್ದಾರೆ. ಅವರು ಹಗ್ ಮಾಡಲಿಲ್ಲ, ನನಗೂ ಸಹ ಅದು ಬೇಕಾಗಿರಲಿಲ್ಲ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos