ಬೆಂಗಳೂರಲ್ಲಿ ರಾಮಮಂದಿರ ಉದ್ಘಾಟಿಸಿದ ಬಳಿಕ ಹಣೆಗೆ ತಿಲಕವಿಡಲು ಮಹಿಳೆಯರು ಮುಂದಾದಾಗ ಸಿದ್ದರಾಮಯ್ಯ ನಿರಾಕರಿಸಲಿಲ್ಲ
ಮಹಿಳೆಯರು ಅವರಿಗೆ ಮಾತ್ರವಲ್ಲದೆ, ಸಿದ್ದರಾಮಯ್ಯ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ನಗಾರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಮಾಜಿ ಸಚಿವ ಹೆಚ್ ಎಂ ರೇವಣ್ಣ ಮೊದಲಾದವರ ಹಣೆಗೂ ತಿಲಕವಿಡುತ್ತಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಪೂರ್ವ ತಾಲ್ಲೂಕಿನ ಹಿರಂಡಗಹಳ್ಳಿಯಲ್ಲಿ ಶ್ರೀರಾಮ ದೇವಸ್ಥಾನವನ್ನು (Sritam temple) ಉದ್ಘಾಟಿಸಿದರು. ನಂತರ ಪೂಜೆ ನೆರವೇರಿಸಿದ ಮಹಿಳೆಯರು ಹಣೆಗೆ ತಿಲಕವಿಡಲು (tilak) ಆರತಿ ತಟ್ಟೆಯೊಂದಿಗೆ ತಮ್ಮಲ್ಲಿಗೆ ಬಂದಾಗ ಸಿದ್ದರಾಮಯ್ಯ ನಿರಾಕರಿಸಲಿಲ್ಲ. ನಿರಾಕರಿಸಲಿಲ್ಲ ಅಂತ ಯಾಕೆ ಹೇಳಬೇಕಾಗಿದೆಯೆಂದರೆ, ಹಿಂದೆ ಅವರು ಹಾಗೆ ಮಾಡಿದ ಉದಾಹರಣೆಗಳಿವೆ. ಬಿಡಿ, ಅ ವಿಚಾರ ಈಗ ಬೇಡ. ಮಹಿಳೆಯರು ಆರತಿ ಬೆಳಗಿ ಹಣೆಗೆ ತಿಲವಿಟ್ಟಾಗ ತಮ್ಮ ಜೇಬಿನಿಂದ ಹಣ ತೆಗೆದು ಮಹಿಳೆಯರಿಗೆ ನೀಡುವ ಮುಖ್ಯಮಂತ್ರಿ ತಮ್ಮ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬರ ಹಣೆಗೂ ತಿಲಕವಿಡುವಂತೆ ಹೇಳುತ್ತಾರೆ. ಮಹಿಳೆಯರು ಅವರಿಗೆ ಮಾತ್ರವಲ್ಲದೆ, ಸಿದ್ದರಾಮಯ್ಯ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ನಗಾರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಮಾಜಿ ಸಚಿವ ಹೆಚ್ ಎಂ ರೇವಣ್ಣ ಮೊದಲಾದವರ ಹಣೆಗೂ ತಿಲಕವಿಡುತ್ತಾರೆ. ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯದಲ್ಲಿ ಹಲವಾರು ರಾಮ ಮಂದಿರಗಳಿವೆ ಮತ್ತು ತಮ್ಮೂರಲ್ಲಿ ತಾನು ಸಹ ಒಂದನ್ನು ಕಟ್ಟಿಸಿದ್ದಾಗಿ ಹೇಳಿದರು. ರಾಮನ ದೇವಸ್ಥಾನದಲ್ಲಿ ರಾಮನೊಬ್ಬನೇ ಇರಬಾರದು, ರಾಮನ ಜೊತೆ ಸೀತೆ, ಲಕ್ಷ್ಮಣ ಮತ್ತು ಹನುಮ ಇದ್ದಾಗಲೇ ಆ ಮಂದಿರ ಪರಿಪೂರ್ಣ ಅನಿಸಿಕೊಳ್ಳ್ಳುತ್ತದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ