ಜನವರಿ 22, 2024 ಒಂದು ನೂತನ ಕಾಲಚಕ್ರ ಉದ್ಭವಿಸಿದನ್ನು ಸೂಚಿಸುವ ದಿನವಾಗಿದೆ: ಪ್ರಧಾನಿ ನರೇಂದ್ರ ಮೋದಿ
ರಾಮ ಕೇವಲ ಒಂದುಪಕ್ಷದವರಿಗೆ ಸೀಮಿತವಾಗಿದ್ದಾನೆ ಯಾರೂ ಭಾವಿಸಬಾರದು, ರಾಮ ಎಲ್ಲರಿಗೂ ಸೇರಿದವನಾಗಿದ್ದಾನೆ, ರಾಮನ ಮಹಿಮೆ ಕೇವಲ ವರ್ತಮಾನ ಕಾಲಕ್ಕೆ ಸಂಬಂಧಿಸಿದ್ದಲ್ಲ ಅದು ಅನಂತಕಾಲದವರೆಗೆ, ನಿರಂತರ ಮತ್ತು ಶಾಶ್ವತವಾಗಿ ಇರುವಂಥದ್ದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಅಯೋಧ್ಯೆ: ರಾಮಮಂದಿರ ಪ್ರಾಣ ಪ್ರತಿಷ್ಠೆಯ ಸಕಲ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೆರೆದಿದ್ದ ಸಾಧು ಸಂತರು, ಗಣ್ಯರಲ್ಲದೆ ಸಮಸ್ತ ರಾಮಭಕ್ತರನ್ನು ಉದ್ದೇಶಿಸಿ ಮಾತಾಡಿದರು. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ನಿಸ್ವಾರ್ಥ ಮನೋಭಾವ ಮತ್ತು ಸಂಕಲ್ಪದೊಂದಿಗೆ (dedication) ತೊಡಗಿಸಿಕೊಂಡ ಎಲ್ಲ ಕರಸೇವಕರು ಮತ್ತು ರಾಮಭಕ್ತರಿಗೆ ಇಡೀ ದೇಶವೇ ಚಿರಋಣಿಯಾಗಿದೆ (indebted) ಎಂದು ಹೇಳಿದ ಪ್ರಧಾನಿ ಮೋದಿ, ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿಪೂಜೆಯ ದಿನದಿಂದ ದೇಶದೆಲ್ಲೆಡೆ ರಾಮಮಂದಿರ ಬಗ್ಗೆ ನಿರೀಕ್ಷೆ ದಿನೇದಿನೆ ಹೆಚ್ಚುತಿತ್ತು ಮತ್ತು ಅದರೊಟ್ಟಿಗೆ ಅವರ ಜನರ ವಿಶ್ವಾಸವೂ ಬಲಗೊಳ್ಳುತ್ತಿತ್ತು ಎಂದರು. ಕ್ಯಾಲೆಂಡರ್ ಗಳಲ್ಲಿ ಕಾಣುವ ಜನವರಿ 22, 2024 ರ ದಿನ ಇತರ ದಿನಗಳ ಹಾಗೆ ಒಂದು ಸಾಮಾನ್ಯ ದಿನವಲ್ಲ, ಅದು ಒಂದು ನೂತನ ಕಾಲಚಕ್ರ ಉದ್ಭವಿಸಿದನ್ನು ಸೂಚಿಸುವ ದಿನವಾಗಿದೆ, ಜನವರಿ 22 ರ ಸೂರ್ಯ ಒಂದು ಅದ್ಭುತವಾದ ಅನುಭೂತಿಯೊಂದಿಗೆ ಉದಯಿಸಿದ್ದಾನೆ ಎಂದು ಪ್ರಧಾನ ಮಂತ್ರಿ ಹೇಳಿದರು. ಅವರ ಪೂರ್ತಿ ಭಾಷಣ ಈ ವಿಡಿಯೋದಲ್ಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ