2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಜನರು ಇದಕ್ಕೆ ಉತ್ತರಿಸುತ್ತಾರೆ: ಸಿಸೋಡಿಯಾ ಬಂಧನ ಖಂಡಿಸಿ ಅಖಿಲೇಶ್ ಟ್ವೀಟ್

ದೆಹಲಿಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮನೀಶ್ ಸಿಸೋಡಿಯಾ ಜಿ ಅವರನ್ನು ಬಂಧಿಸುವ ಮೂಲಕ ಬಿಜೆಪಿಯು ಶಿಕ್ಷಣದ ವಿರುದ್ಧ ಮಾತ್ರವಲ್ಲದೆ ದೆಹಲಿಯ ಮಕ್ಕಳ ಭವಿಷ್ಯದ ವಿರುದ್ಧ ಎಂಬುದು ಸಾಬೀತಾಗಿದೆ

2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಜನರು ಇದಕ್ಕೆ ಉತ್ತರಿಸುತ್ತಾರೆ: ಸಿಸೋಡಿಯಾ ಬಂಧನ ಖಂಡಿಸಿ ಅಖಿಲೇಶ್ ಟ್ವೀಟ್
ಅಖಿಲೇಶ್ ಯಾದವ್

Updated on: Feb 27, 2023 | 7:00 PM

ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಬಂಧನಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಸೋಮವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ(Delhi) ಜನರು 2024 ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಪ್ರತಿಕ್ರಿಯಿಸುತ್ತಾರೆ’ ಎಂದಿದ್ದಾರೆ ಅಖಿಲೇಶ್. ದೆಹಲಿಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮನೀಶ್ ಸಿಸೋಡಿಯಾ ಜಿ ಅವರನ್ನು ಬಂಧಿಸುವ ಮೂಲಕ ಬಿಜೆಪಿಯು ಶಿಕ್ಷಣದ ವಿರುದ್ಧ ಮಾತ್ರವಲ್ಲದೆ ದೆಹಲಿಯ ಮಕ್ಕಳ ಭವಿಷ್ಯದ ವಿರುದ್ಧ ಎಂಬುದು ಸಾಬೀತಾಗಿದೆ. ದೆಹಲಿಯ ಜನರು ಮುಂದಿನ ಲೋಕಸಭೆ ಚುನಾವಣೆಯಲ್ಲಿ (ದೆಹಲಿಯ ಲೋಕಸಭಾ ಸ್ಥಾನಗಳನ್ನು ಉಲ್ಲೇಖಿಸಿ) ಎಲ್ಲಾ ಏಳು ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಪ್ರತಿಕ್ರಿಯಿಸುತ್ತಾರೆ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.


ಸಿಸೋಡಿಯಾ ಅವರ ಬಂಧನವು ಬೆಲೆ ಏರಿಕೆ ಮತ್ತು ನಿರುದ್ಯೋಗ ಸೇರಿದಂತೆ ನಿರ್ಣಾಯಕ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರ ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ.


“ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಾರ್ವಜನಿಕ ಆಸ್ತಿಗಳ ಮಾರಾಟದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು, ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಬಂಧಿಸುತ್ತಿದೆ. ದಬ್ಬಾಳಿಕೆಯ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಯಸುತ್ತದೆ ಎಂದು ಪಕ್ಷ ಹೇಳಿದೆ.

ಇದನ್ನೂ ಓದಿ: Manish Sisodia: ಮಾರ್ಚ್ 4ರವರೆಗೆ ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿಗೆ

ದೆಹಲಿಯಲ್ಲಿ ಅಬಕಾರಿ ನೀತಿಯಲ್ಲಿನ ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದಂತೆ ಎಂಟು ಗಂಟೆಗಳ ವಿಚಾರಣೆಯ ನಂತರ ಸಿಸೋಡಿಯಾ ಅವರನ್ನು ಭಾನುವಾರ ಸಿಬಿಐ ಬಂಧಿಸಿದೆ. ಕೇಂದ್ರೀಯ ಸಂಸ್ಥೆ – ಬಿಜೆಪಿಯ ಪ್ರತಿಸ್ಪರ್ಧಿ ರಾಜಕಾರಣಿಗಳನ್ನು ಗುರಿಯಾಗಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಮನೀಶ್ ಅಮಾಯಕ. ಅವರ ಬಂಧನವು ಕೊಳಕು ರಾಜಕೀಯ” ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್,ಸಿಸೋಡಿಯಾ ಬಂಧನದ ನಂತರ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ