Kannada News National ದೇವರ ಮೊಸಳೆ ಬಬಿಯಾ.. ಕಲ್ಯಾಣಿಯಿಂದ ಹೊರಬಂದು ಅನಂತ ಪದ್ಮನಾಭನ ಗರ್ಭಗುಡಿ ಬಳಿ ಪ್ರತ್ಯಕ್ಷ!
ದೇವರ ಮೊಸಳೆ ಬಬಿಯಾ.. ಕಲ್ಯಾಣಿಯಿಂದ ಹೊರಬಂದು ಅನಂತ ಪದ್ಮನಾಭನ ಗರ್ಭಗುಡಿ ಬಳಿ ಪ್ರತ್ಯಕ್ಷ!
ತಿರುವನಂತಪುರಂ: ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿರುವ ಬಬಿಯಾ ಎಂಬ ಮೊಸಳೆ ಇಂದು ದೇಗುಲದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಅನಂತ ಪದ್ಮನಾಭ ದೇವಸ್ಥಾನವನ್ನು ಸುತ್ತುವರಿದಿರುವ ಕಲ್ಯಾಣಿಯಲ್ಲಿ ವಾಸವಿರುವ ದೇವರ ಮೊಸಳೆ ಬಬಿಯಾ ನಿನ್ನೆ ರಾತ್ರಿ ಗರ್ಭಗುಡಿಯ ಬಳಿ ಆಗಮಿಸಿ ಭಕ್ತರಲ್ಲಿ ಕುತೂಹಲ ಮೂಡಿಸಿದೆ. ಹಲವಾರು ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿ ವಾಸವಿರುವ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸಲಾಗುತ್ತದೆ. ಹೀಗೆ, ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಆದರೆ, […]
Follow us on
ತಿರುವನಂತಪುರಂ: ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿರುವ ಬಬಿಯಾ ಎಂಬ ಮೊಸಳೆ ಇಂದು ದೇಗುಲದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಅನಂತ ಪದ್ಮನಾಭ ದೇವಸ್ಥಾನವನ್ನು ಸುತ್ತುವರಿದಿರುವ ಕಲ್ಯಾಣಿಯಲ್ಲಿ ವಾಸವಿರುವ ದೇವರ ಮೊಸಳೆ ಬಬಿಯಾ ನಿನ್ನೆ ರಾತ್ರಿ ಗರ್ಭಗುಡಿಯ ಬಳಿ ಆಗಮಿಸಿ ಭಕ್ತರಲ್ಲಿ ಕುತೂಹಲ ಮೂಡಿಸಿದೆ.
ಹಲವಾರು ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿ ವಾಸವಿರುವ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸಲಾಗುತ್ತದೆ. ಹೀಗೆ, ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಆದರೆ, ಇಷ್ಟು ದಿನ ಕೆರೆಯಲ್ಲೇ ನೈವೇದ್ಯ ಪಡೆಯುತ್ತಿದ್ದ ಬಬಿಯಾ ಇದೀಗ ಕಲ್ಯಾಣಿಯಿಂದ ಹೊರಬಂದು ದೇವಾಲಯದಲ್ಲಿ ಕಾಣಿಸಿಕೊಂಡಿರೋದು ಎಲ್ಲರಿಗೂ ಆಶ್ಚರ್ಯ ತಂದಿದೆ.