ಹತ್ರಾಸ್​ ಪೈಶಾಚಿಕ ಕೃತ್ಯ ವಿರೋಧಿಸಿ 236 ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾದ್ರು

ಲಕ್ನೋ: ನಿರ್ಭಯಾ ಪ್ರಕರಣದ ನಂತರ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ ಪ್ರಕರಣವೆಂದರೆ ಅದು ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಅಮಾನವೀಯವಾಗಿ ಕೊಲೆಗೈದಿದ್ದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ದಲಿತ ಸಮುದಾಯದ ಕೆಲವರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ. ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ದಲಿತ ಸಮುದಾಯಕ್ಕೆ ಸೇರಿದ್ದ 236 ಜನರು ಅಕ್ಟೋಬರ್​ 14ರಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಡಾ. ಬಿ.ಆರ್​. ಅಂಬೇಡ್ಕರ್​ರ […]

ಹತ್ರಾಸ್​ ಪೈಶಾಚಿಕ ಕೃತ್ಯ ವಿರೋಧಿಸಿ 236 ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾದ್ರು
ಹತ್ರಾಸ್​ನಲ್ಲಿ ಬಾಲಕಿ ಶವ ಸುಟ್ಟ ಪೊಲೀಸ್ ಅಧಿಕಾರಿಗಳು (ಸಂಗ್ರಹ ಚಿತ್ರ)
Follow us
KUSHAL V
|

Updated on:Oct 21, 2020 | 7:13 PM

ಲಕ್ನೋ: ನಿರ್ಭಯಾ ಪ್ರಕರಣದ ನಂತರ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ ಪ್ರಕರಣವೆಂದರೆ ಅದು ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಅಮಾನವೀಯವಾಗಿ ಕೊಲೆಗೈದಿದ್ದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ದಲಿತ ಸಮುದಾಯದ ಕೆಲವರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ.

ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ದಲಿತ ಸಮುದಾಯಕ್ಕೆ ಸೇರಿದ್ದ 236 ಜನರು ಅಕ್ಟೋಬರ್​ 14ರಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಡಾ. ಬಿ.ಆರ್​. ಅಂಬೇಡ್ಕರ್​ರ ಕುಟುಂಬದವರಾದ ರಾಜರತನ್​ ಅಂಬೇಡ್ಕರ್​ರ ನೇತೃತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಇವರೆಲ್ಲಾ ಮತಾಂತರಗೊಂಡರು. ಅಂದ ಹಾಗೆ, ಸುಮಾರು 60 ವರ್ಷಗಳ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ರವರು ಇದೇ ದಿನದಂದು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು.

ಹತ್ರಾಸ್​ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ಬೇಸತ್ತು ನಾವು ಮತಾಂತರಗೊಂಡೆವು. ಮೃತ ಯುವತಿಯ ಕುಟುಬಂಸ್ಥರನ್ನು ಜಿಲ್ಲಾಡಳಿತ ನಡೆಸಿಕೊಂಡ ರೀತಿ ನಮ್ಮನ್ನು ಜರ್ಜರಿತಗೊಳಿಸಿದೆ ಎಂದು ಮತಾಂತರಗೊಂಡ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ಬೇರೆ ಧರ್ಮವನ್ನು ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ. ನಮ್ಮ ಹಳೇ ಸಂಪ್ರದಾಯಗಳನ್ನು ಬಿಡೋದ್ದಕ್ಕೆ ಸಹ ಮನಸ್ಸು ಒಪ್ಪುವುದಿಲ್ಲ. ಆದರೆ, ಇದೀಗ ನಮಗೆ ಸಾಕಾಗಿ ಹೋಗಿದೆ. ಮೇಲ್ಜಾತಿಯವರ ತಾರತಮ್ಯದಿಂದ ಬೇಸತ್ತಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು. ಇದಲ್ಲದೆ, ಕರ್ನಾಟಕದ ಉಡುಪಿಯಲ್ಲಿ ದಲಿತ ಸಮುದಾಯದ ಸುಮಾರು 50 ಸದಸ್ಯರು ಅಕ್ಟೋಬರ್​ 18ರಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ತಿಳದುಬಂದಿದೆ.

Published On - 7:11 pm, Wed, 21 October 20