ಸಾಕು ನಾಯಿಯೊಂದು ಮಹಿಳಾ ವೈದ್ಯರ ಮೇಲೆ ದಾಳಿ ನಡೆಸಿರುವ ಘಟನೆ ನೋಯ್ಡಾದಲ್ಲಿ ನಡೆದಿದ್ದು, ನಾಯಿಯ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ವರದಿಗಳ ಪ್ರಕಾರ ಮಹಿಳಾ ವೈದ್ಯೆಯ ಮುಖಕ್ಕೆ ನಾಯಿ ಕಚ್ಚಿದೆ. ಆಕೆಗೆ ಗಂಭೀರ ಗಾಯಗಳಾಗಿವೆ. ಆಕೆ ಕೂಡಲೇ ನಾಯಿಯ ಮಾಲೀಕರಿಗೆ ದೂರು ನೀಡಿದರೂ ಅವರು ಯಾವುದೇ ಪ್ರಶ್ಚಾತಾಪವನ್ನು ತೋರಿಸಲಿಲ್ಲ, ವಾಸ್ತವವಾಗಿ ಅವರು ತುಂಬಾ ದುರಹಂಕಾರದಿಂದ ವರ್ತಿಸಿದರು ಎಂದು ವೈದ್ಯರು ದೂರಿದ್ದಾರೆ.
ವೈದ್ಯರು ನಾಯಿಯ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ, ಸದ್ಯ ನೋಯ್ಡಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸೆಕ್ಟರ್ 46 ರಲ್ಲಿ ನೋಯ್ಡಾದ ಗಾರ್ಡನ್ ಗ್ಲೋರಿ ಸೊಸೈಟಿಯಿಂದ ಈ ಘಟನೆ ವರದಿಯಾಗಿದೆ. ಈ ಪ್ರದೇಶವು ಸೆಕ್ಟರ್ 39 ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಮತ್ತು ಅವರು ಸಂಪೂರ್ಣ ವಿಷಯವನ್ನು ತನಿಖೆ ನಡೆಸುತ್ತಿದ್ದಾರೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಇತ್ತೀಚೆಗೆ ದೆಹಲಿ-ಎನ್‌ಸಿಆರ್‌ನಲ್ಲಿ ನಾಯಿಗಳ ದಾಳಿ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಕರೆದೊಯ್ಯುವ ಬಗ್ಗೆ ವಿವಾದ ಹುಟ್ಟುಹಾಕಿದ್ದರು, ಮಹಿಳೆ ಮೇಲೆ ಕೈ ಮಾಡಿದ್ದರು.ಈ ಘಟನೆಯು ಅಕ್ಟೋಬರ್‌ನಲ್ಲಿ ನೋಯ್ಡಾದ ಸೆಕ್ಟರ್ 108 ರಲ್ಲಿ ಪಾರ್ಕ್ಸ್ ಲಾರೆಟ್ ಸೊಸೈಟಿಯಲ್ಲಿ ನಡೆದಿದೆ.
ಮತ್ತಷ್ಟು ಓದಿ: ನೋಯ್ಡಾ: ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಕರೆದೊಯ್ದಿದ್ದಕ್ಕೆ ವಾಗ್ವಾದ, ಮಹಿಳೆಗೆ ಕಪಾಳಮೋಕ್ಷ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ
ಮತ್ತೊಂದು ಘಟನೆಯಲ್ಲಿ, ನಾಯಿಗಳ ದಾಳಿಯಿಂದ 6 ವರ್ಷದ ಮಗು ಗಾಯಗೊಂಡಿದೆ.ಬೀದಿ ನಾಯಿಗಳು ಮಕ್ಕಳ ಮೇಲೆ ಮತ್ತು ವೃದ್ಧರ ಮೇಲೆ ದಾಳಿ ಮಾಡಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸೆಪ್ಟೆಂಬರ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಬೀದಿ ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಘಟನೆ ವರದಿಯಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Sun, 26 November 23