ನೋಯ್ಡಾ: ಲಿಫ್ಟ್ನಲ್ಲಿ ಸಾಕು ನಾಯಿಯನ್ನು ಕರೆದೊಯ್ದಿದ್ದಕ್ಕೆ ವಾಗ್ವಾದ, ಮಹಿಳೆಗೆ ಕಪಾಳಮೋಕ್ಷ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ
ಸಾಕು ನಾಯಿಯನ್ನು ಲಿಫ್ಟ್ನಲ್ಲಿ ಕರೆದೊಯ್ಯುವ ವಿಚಾರವಾಗಿ ನಡೆದ ವಾಗ್ವಾದದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ನಿವೃತ್ತ ಐಎಎಸ್ ಅಧಿಕಾರಿ ಆರ್‌ಪಿ ಗುಪ್ತಾ ಸೆಕ್ಟರ್ 108 ರ ಪಾರ್ಕ್ ಲಾರೇಟ್ ಸೊಸೈಟಿಯ ನಿವಾಸಿ.
ಸಾಕು ನಾಯಿಯನ್ನು ಲಿಫ್ಟ್ನಲ್ಲಿ ಕರೆದೊಯ್ಯುವ ವಿಚಾರವಾಗಿ ನಡೆದ ವಾಗ್ವಾದದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ನಿವೃತ್ತ ಐಎಎಸ್ ಅಧಿಕಾರಿ ಆರ್‌ಪಿ ಗುಪ್ತಾ ಸೆಕ್ಟರ್ 108 ರ ಪಾರ್ಕ್ ಲಾರೇಟ್ ಸೊಸೈಟಿಯ ನಿವಾಸಿ.
ಮಹಿಳೆಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್ನಲ್ಲಿ ತೆರಳಲು ಬಂದಿದ್ದರು, ಆದರೆ ಗುಪ್ತಾ ಅವರು ಮಹಿಳೆಗೆ ನಾಯಿಯೊಂದಿಗೆ ಲಿಫ್ಟ್ನಲ್ಲಿ ಬಾರದಂತೆ ತಡೆದಿದ್ದಾರೆ, ಆಗ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಆ ಸಂದರ್ಭದಲ್ಲಿ ಮಹಿಳೆ ಗುಪ್ತಾ ಅವರ ಮೊಬೈಲ್ನ್ನು ಲಿಫ್ಟ್ನಿಂದ ಹೊರಗೆಸೆದಾಗ ಕೋಪದಿಂದ ಮಹಿಳೆ ಮೇಲೆ ಕೈಮಾಡಿದ್ದಾರೆ, ನೋಯ್ಡಾ ಪೊಲೀಸರಿಗೆ ಔಪಚಾರಿಕ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇಡೀ ಘಟನೆಯನ್ನು ನಾವು ಕಾಣಬಹುದು. ವೀಡಿಯೊವನ್ನು ರೆಕಾರ್ಡ್ ಮಾಡದಂತೆ ಗುಪ್ತಾ ಮಹಿಳೆಯನ್ನು ತಡೆಯಲು ಯತ್ನಿಸಿದ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮಹಿಳೆಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.
ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಮಹಿಳೆ ಕೂಡ ನಿವೃತ್ತ ಐಎಎಸ್ ಅಧಿಕಾರಿಯ ಹೊಡೆತ ತಡೆಯಲು ತನ್ನ ಕೈಯನ್ನು ಬಳಸಿದ್ದನ್ನು ನೀವು ಕಾಣಬಹುದು.
NOIDA :- नोएडा मे फिर लिफ्ट मे कुत्ते को लेकर विवाद, रिटार्ड IAS नें महिला को जड़े ताबड़तोड़ कई थप्पड़, महिला को कुत्ते के साथ जाने पर रोका,महिला के लिफ्ट से बाहर नहीं निकलने पर रिटार्ड IAS हुए आग -बबूला,PARK LAUREATE सोसायटी सेक्टर 108 का मामला @noidapolice @CP_Noida @Uppolice pic.twitter.com/os0T6NDxIT
— Ankit Kaushik {ABP NEWS} (@ankitka96062636) October 30, 2023
ಕೆಲವು ವರದಿಗಳ ಪ್ರಕಾರ ಮಹಿಳೆಯ ಪತಿ ನಂತರ ಸ್ಥಳಕ್ಕೆ ಆಗಮಿಸಿ ಗುಪ್ತಾ ಅವರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರ ನಡುವೆ ಮಾರಾಮಾರಿ ನಡೆದಿದೆ, ಸಿಸಿಟಿವಿಯನ್ನು ಪರಿಶೀಲಿಸಲಾಗುತ್ತಿದೆ, ತನಿಖೆಯ ನಂತರ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರೇಟ್ ಗೌತಮ್ ಬುದ್ಧನಗರದ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಪಿಇಟಿ ನೀತಿ ಏನು ಹೇಳುತ್ತದೆ? ನಾಯಿಯನ್ನು ನೋಂದಣಿ ಮಾಡದಿದ್ದರೆ 500 ರೂ. ದಂಡ ತೆರಬೇಕಾಗುತ್ತದೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಶ್ವಾನ ನೀತಿಯನ್ನು ಜಾರಿಗೆ ತಂದಾಗ ಮೊಬೈಲ್ ಅಪ್ಲಿಕೇಶನ್ ಸಹ ಕಲ್ಪಿಸಲಾಗಿತ್ತು. ಜನರು ಅಲ್ಲಿಗೆ ಹೋಗಿ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಿಕೊಳ್ಳಬೇಕಾಗಿತ್ತು. ನೋಂದಣಿಗೆ ಕೊನೆಯ ದಿನಾಂಕ ಮಾರ್ಚ್ 30 ಆಗಿತ್ತು.
ಅದರ ನಂತರ, ಸಾಕುಪ್ರಾಣಿಗಳನ್ನು ನೋಂದಾಯಿಸಿದರೆ ರೂ 500 ದಂಡ ವಿಧಿಸಲಾಗುತ್ತದೆ. ಎಲ್ಲಾ ಸಾಕುಪ್ರಾಣಿ ಮಾಲೀಕರಿಗೆ ಇದು ಕಡ್ಡಾಯವಾಗಿದೆ ಎಂದು ಇಂದು ಪ್ರಕಾಶ್ ಸಿಂಗ್ ಒತ್ತಿ ಹೇಳಿದ್ದಾರೆ.
ಮತ್ತಷ್ಟು ಓದಿ: ಇಂದೋರ್ನಲ್ಲಿ ಸಾಕು ನಾಯಿ ವಿಚಾರವಾಗಿ ಜಗಳ, ಕೋಪದಲ್ಲಿ ಗುಂಡಿಕ್ಕಿ ಇಬ್ಬರ ಹತ್ಯೆ, 6 ಮಂದಿಗೆ ಗಾಯ
ನೋಂದಣಿ ಹೇಗೆ? ಇದರಿಂದ ನಾಯಿಗಳ ಡೇಟಾಬೇಸ್ ನಿರ್ವಹಣೆ ಸುಲಭವಾಗಲಿದ್ದು, ಎಣಿಕೆ ಕೂಡ ನಿಖರವಾಗಿ ಮುಂದುವರಿಯಲಿದೆ ಎಂದು ಒಎಸ್ ಡಿ ಇಂದು ಪ್ರಕಾಶ್ ತಿಳಿಸಿದ್ದಾರೆ. ಇಲ್ಲಿಯವರೆಗೆ ಕೇವಲ 3 ಸಾವಿರ ಸಾಕುಪ್ರಾಣಿಗಳು ನೋಂದಣಿಯಾಗಿವೆ. ನೋಯ್ಡಾ ಪ್ರಾಧಿಕಾರವನ್ನು ಸಂಪರ್ಕಿಸಲು, ನೀವು 0120-2425025, 26, 27 ಗೆ ಕರೆ ಮಾಡಬಹುದು.
ಈ ಸಂಖ್ಯೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಸಕ್ರಿಯವಾಗಿರುತ್ತದೆ. ಹೆಚ್ಚುವರಿಯಾಗಿ, ನೀವು 92055-59204 ಅನ್ನು ಸಹ ಸಂಪರ್ಕಿಸಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Tue, 31 October 23