ಮನ್ ಕೀ ಬಾತ್ನಲ್ಲಿ ಚಾಮರಾಜನಗರದ ಮಹಿಳಾ ಉದ್ಯಮಿ ಹೆಸರು ಪ್ರಸ್ತಾಪ: ಟಿವಿ9 ಜತೆ ಖುಷಿ ಹಂಚಿಕೊಂಡ ವರ್ಷಾ
ಮನ್ ಕಿ ಬಾತ್(Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದ ನಿವಾಸಿಯಾದ ವರ್ಷ ಎಂಬ ಮಹಿಳಾ ಉದ್ಯಮಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ. ಈ ಹಿನ್ನಲೆ ಅವರು ಟಿವಿ9 ಜೊತೆ ಖುಷಿಯನ್ನು ಹಂಚಿಕೊಂಡಿದ್ದಾರೆ.
ಮೈಸೂರು, ನ.26: 107ನೇ ಮನ್ ಕಿ ಬಾತ್( Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದ ನಿವಾಸಿಯಾದ ವರ್ಷ ಎಂಬ ಮಹಿಳಾ ಉದ್ಯಮಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ. ಈ ಹಿನ್ನಲೆ ಟಿವಿ9 ಜೊತೆ ಖುಷಿ ಹಂಚಿಕೊಂಡ ಮಹಿಳಾ ಉದ್ಯಮಿ ವರ್ಷ ಅವರು ಮಾತನಾಡಿ ‘2 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಕೇಳಿದ್ದೆ. ಆ ಸಂದರ್ಭದಲ್ಲಿ ತಮಿಳುನಾಡಿನ ಉದ್ಯಮಿಯೊಬ್ಬರ ಹೆಸರನ್ನು ಮೋದಿಯವರು ಪ್ರಸ್ತಾಪಿಸಿದ್ದರು. ಅದನ್ನ ಕೇಳಿ ನಾವೇಕೆ ಈ ಉದ್ಯಮ ಪ್ರಾರಂಭ ಮಾಡಬಾರದು ಅಂದುಕೊಂಡೆ ಎಂದರು.
ಇವರು ಪ್ರಾರಂಭಿಸಿದ ಉದ್ಯಮ ಯಾವುದು?
‘ಅವರ ಮಾತಿನ ಪ್ರೇರೆಪಣೆಯಿಂದ ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ಆಕೃತಿ ಎಕೋ ಫ್ರೆಂಡ್ಲಿ ಎಂಟರ್ ಪ್ರೈಸಸ್ ಮೂಲಕ ಉದ್ಯಮಕ್ಕೆ ಕಾಲಿಟ್ಟಿದ್ದೇವೆ. ನಮ್ಮಲ್ಲಿ ಸ್ಥಳೀಯ ವಸ್ತುಗಳನ್ನೇ, ಉದಾಹರಣೆಗೆ ಬಾಳೆದಿಂಡಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದೇವೆ. ಪ್ರಧಾನಿ ಮೋದಿಯವರು ನನ್ನ ಹೆಸರನ್ನು ಮನ್ ಕೀ ಬಾತ್ನಲ್ಲಿ ಹೇಳಿದ್ದು ತುಂಬಾ ಖುಷಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಚಾಮರಾಜನಗರದ ಗ್ರಾಮೀಣ ಮಹಿಳೆ ವರ್ಷಾ ಜೀವನವನ್ನೇ ಬದಲಿಸಿತು ಮೋದಿ ಮನ್ ಕೀ ಬಾತ್
ನನ್ನ ಸಾಧನೆಗೆ ನಮ್ಮ ಕುಟುಂಬಸ್ಥರು ಸಹ ಸಹಕಾರ ನೀಡಿದ್ದಾರೆ. 2.3 ಲಕ್ಷ ರೂ. ಬಂಡವಾಳ ಹಾಕಿ ಉದ್ಯಮ ಪ್ರಾರಂಭ ಮಾಡಿದೆವು. ಇಂದು ನಮ್ಮ ಕಂಪನಿಯಲ್ಲಿ 8 ಜನರು ಕೆಲಸ ಮಾಡುತ್ತಾರೆ. ಪ್ರಧಾನಿ ಅವರು ನನ್ನ ಬಗ್ಗೆ ಹೇಳಿದ್ದರಿಂದ ಜವಾಬ್ದಾರಿ ಹೆಚ್ಚಾಗಿದೆ. ಮುಂದೆ ಇದನ್ನು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Sun, 26 November 23