ಬೆಂಗಳೂರು: ದಿನ ಸಾಗುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ದರವೂ ಒಂದೇ ಸಮನೆ ಏರುತ್ತಲೇ ಇದೆ. ಮೂರು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡಿದ್ದ ಪೆಟ್ರೋಲ್, ಡೀಸೆಲ್ ದರ ನಿನ್ನೆ ಏರಿಕೆ ಕಂಡಿತ್ತು. ಪೆಟ್ರೋಲ್ ದರದಲ್ಲಿ 24 ಪೈಸೆ ಹಾಗೂ ಡೀಸೆಲ್ ದರ 15 ಪೈಸೆ ಏರಿಕೆಯಾಗಿತ್ತು. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರಿಗೆ 91.17 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀಟರಿಗೆ 81.47 ರೂಪಾಯಿ ಏರಿಕೆ ಕಂಡಿತ್ತು. ಇಂದು ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದರ ಏರಿಕೆಯ ನಂತರ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರಿಗೆ 94.22 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 86.37 ರೂಪಾಯಿಗೆ ಮಾರಾಟವಾಗುತ್ತಿದೆ.
ಭಾರತದ ವಿವಿಧ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ:
ಕೊಲ್ಕತ್ತದಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 91.35 ರೂಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆ ಕೂಡಾ ಇದೇ ದರದಲ್ಲಿ ಪೆಟ್ರೋಲ್ ಮಾರಾಟವಾಗಿತ್ತು. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.57 ರೂಪಾಯಿ, ಚೆನ್ನೈ ಪ್ರತಿ ಲೀಟರ್ಗೆ 93.11 ರೂಪಾಯಿ, ನೋಯ್ಡಾ 89.36, ಬೆಂಗಳೂರಿನಲ್ಲಿ 94.22 ರೂಪಾಯಿ, ಪಾಟ್ನಾದಲ್ಲಿ 93,66 ರೂಪಾಯಿ, ತಿರುವಂತಪುರಂನಲ್ಲಿ 92.70 ರೂಪಾಯಿ ಹಾಗೂ ಜೈಪುರದಲ್ಲಿ 97.68 ರೂಪಾಯಿಗೆ ಪೆಟ್ರೋಲ್ ಮಾರಾಟವಾಗುತ್ತಿದೆ.
ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರ 97.57 ಏರಿಕೆಯಾಗಿದ್ದು, ಡೀಸೆಲ್ ದರ 15 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 88.60 ರೂ. ಗೆ ಮಾರಾಟವಾಗಿತ್ತು. ಇಂದೂ ಕೂಡಾ ಅದೇ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇದೇ ರೀತಿ ಏರಿಕೆಯತ್ತ ಪೆಟ್ರೋಲ್ ದರ ಸಾಗಿದರೆ ಮುಂಬೈ ಕೂಡಾ ಶತಕ ಬಾರಿಸುವಲ್ಲಿ ಯಾವುದೇ ಸಂದೇಹವಿಲ್ಲ.
ಭಾರತದ ವಿವಿಧ ನಗರದಲ್ಲಿನ ಪ್ರತಿ ಲೀಟರ್ ಡೀಸೆಲ್ ದರ:
ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 81.47 ರೂಪಾಯಿ, ಕೊಲ್ಕತ್ತದಲ್ಲಿ 84.35 ರೂಪಾಯಿ, ಮುಂಬೈನಲ್ಲಿ 88.60 ರೂಪಾಯಿ, ಚೆನ್ನೈನಲ್ಲಿ 86.45 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ನೋಯ್ಡಾದಲ್ಲಿ ಪ್ರತಿ ಲೀಟರಿಗೆ 81.89 ರೂಪಾಯಿ, ಬೆಂಗಳೂರಿನಲ್ಲಿ 86.37 ರೂಪಾಯಿ, ಹೈದರಾಬಾದ್ನಲ್ಲಿ 88.86 ರೂಪಾಯಿ ಜೈಪುರದಲ್ಲಿ 89.95 ರೂಪಾಯಿ, ಲಕ್ನೋದಲ್ಲಿ 81.66 ರೂಪಾಯಿ ಹಾಗೂ ತಿರುವನಂತಪುರಂನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 87.20 ರೂಪಾಯಿಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: Petrol Diesel Price | ಪೆಟ್ರೋಲ್ ದರ ನರ್ವಸ್ ನೈಂಟೀಸ್ನಲ್ಲಿ.. ಶತಕ ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲು!
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳ ಖಂಡಿಸಿ ಗದಗದಲ್ಲಿ ಕೈ ಕಾರ್ಯಕರ್ತರ ಟ್ರ್ಯಾಕ್ಟರ್ ಮೆರವಣಿಗೆ
Published On - 9:57 am, Sun, 28 February 21