Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Price | ಪೆಟ್ರೋಲ್ ದರ ನರ್ವಸ್ ನೈಂಟೀಸ್​​ನಲ್ಲಿ.. ಶತಕ ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲು!

Petrol Diesel Rate: ಇಂದು ಪೆಟ್ರೋಲ್​, ಡೀಸೆಲ್​ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ₹93.98 ಹಾಗೂ ಡೀಸೆಲ್ ದರ ₹86.21ಕ್ಕೆ ಮಾರಾಟವಾಗುತ್ತಿದೆ. ಜೊತೆಗೆ ಸಿಲಿಂಡರ್​, ತರಕಾರಿ ದರವು ಗಗನಕ್ಕೇರಿರುವುದು ಜನಸಾಮಾನ್ಯರ ಕೆಂಗಣ್ಣಿಗೆ ಕಾರಣವಾಗಿದೆ.

Petrol Diesel Price | ಪೆಟ್ರೋಲ್ ದರ ನರ್ವಸ್ ನೈಂಟೀಸ್​​ನಲ್ಲಿ.. ಶತಕ ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲು!
ಸಾಂದರ್ಭಿಕ ಚಿತ್ರ
Follow us
shruti hegde
| Updated By: ಸಾಧು ಶ್ರೀನಾಥ್​

Updated on: Feb 26, 2021 | 9:59 AM

ಬೆಂಗಳೂರು: ಇಂಧನ ಬೆಲೆ ನಿರಂತರ ಹೆಚ್ಚಳದಿಂದಾಗಿ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಪ್ರತಿ ಲೀಟರ್‌ಗೆ 90.93 ರೂಪಾಯಿಗೆ ಮಾರಾಟವಾಗುತ್ತಿದೆ. ಪೆಟ್ರೋಲ್ ಅನ್ನು ಮುಂಬೈನಲ್ಲಿ ಪ್ರತಿ ಲೀಟರಿಗೆ 97.34 ರೂ.ಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಈಗಾಗಲೇ ದೆಹಲಿ ಮತ್ತು ಮುಂಬಯಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಕೊಲ್ಕತ್ತದಲ್ಲಿ ಪೆಟ್ರೋಲ್ ದರ ಕೊಂಚ ಇಳಿಕೆಯತ್ತ ಸಾಗಿತ್ತು ಹಾಗಾಗಿ ಇಂದು ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 91.12 ಲೀಟರ್ ಆಗಿದೆ. ಹಾಗೂ ಡೀಸೆಲ್ ಲೀಟರಿಗೆ 84.20 ರೂ. ಮತ್ತು ಮುಂಬೈನಲ್ಲಿ ಡೀಸೆಲ್ ದರ ಲೀಟರ್‌ಗೆ 88.44 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಇನ್ನೇನು ಇಂಧನ ದರ ಬೆಂಗಳೂರಿನಲ್ಲಿ ಶತಕದ ಹಾದಿಯತ್ತ ಸಾಗುತ್ತಿದೆ.  ಈ ಮಧ್ಯೆ, ಒಂದೇ ಸಮನೆ ಏರುಗತಿಯಲ್ಲಿದ್ದ ಪೆಟ್ರೋಲ್ ದರ 90ರ ಗಡಿಯಲ್ಲಿ ಕುಂಟತ್ತಾ ಸಾಗುತ್ತಿದೆ. Nervous Nineties ಅನುಭವಿಸುತ್ತಿದೆ. ಆದರೆ ಅದು ಶತಕ ಬಾರಿಸುವುದು ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲಾಗಿದ್ದಾರೆ.  ಕೇಂದ್ರ ಸರಕಾರ ಈ ಕುರಿತಂತೆ ಗಮನ ಹರಿಸಲೇಬೇಕು. ಕೊರೊನಾದಿಂದಾಗಿ ಜನರಿಗೆ ಕೆಲಸ ಇಲ್ಲದಂತಾಗಿದೆ. ಇದರಿಂದ ಜನರು ಜೀವನ ನಡೆಸಲು ಕಷ್ಟವಾಗುತ್ತಿದೆ. ಜೊತೆಗೆ ಸಿಲಿಂಡರ್​, ತರಕಾರಿ ದರವು ಗಗನಕ್ಕೇರಿರುವುದು ಜನಸಾಮಾನ್ಯರ ಕೆಂಗಣ್ಣಿಗೆ ಕಾರಣವಾಗಿದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ: ದೆಹಲಿ ಪೆಟ್ರೋಲ್ ಪ್ರತಿ ಲೀಟರಿಗೆ 90,93ರೂಪಾಯಿ ಇದೆ. ಮುಂಬೈನಲ್ಲಿ ಪ್ರತಿ ಲೀಟರಿಗೆ 97,34ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರಿಗೆ 91,12 ರೂಪಾಯಿ ಆಗಿದೆ. ಚೆನೈನಲ್ಲಿ ಪ್ರತಿ ಲೀಟರಿಗೆ 92. 90 ರೂಪಾಯಿ ಇದೆ. ನೋಯ್ಡಾ ಪೆಟ್ರೋಲ್ ಬೆಲೆ ಇಂದು ಪ್ರತಿ ಲೀಟರ್‌ಗೆ 89.19 ರೂಪಾಯಿಗೆ ಗ್ರಾಹಕರು ಖರೀದಿಸುತ್ತಿದ್ದಾರೆ.

ಪ್ರಮುಖ ನಗರಗಳಲ್ಲಿ ಡೀಸೆಲ್ ಬೆಲೆ: ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರಿಗೆ 81,32 ರೂಪಾಯಿ ಇದೆ. ಮುಂಬೈಯಲ್ಲಿ ಪ್ರತಿ ಲೀಟರಿಗೆ 88,44ರೂ. ಇದೆ. ಕೋಲ್ಕತಾ ಡೀಸೆಲ್ ಬೆಲೆ ಇಂದು ಪ್ರತಿ ಲೀಟರಿಗೆ 84,20 ರೂ. ಇದೆ. ಚೆನೈನಲ್ಲಿ ಇಂದು ಪ್ರತಿ ಲೀಟರಿಗೆ 86,31ರೂ.ಗೆ ಮಾರಾಟವಾಗುತ್ತಿದೆ. ನೋಯ್ಡಾ ಪ್ರತಿ ಲೀಟರ್‌ಗೆ 81.76 ರೂಪಾಯಿ ಇದೆ‌.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಲೇ ಇದ್ದವು. ಈ ಕಾರಣಕ್ಕಾಗಿ, ದೇಶದ ಅನೇಕ ನಗರಗಳಲ್ಲಿ, ಪೆಟ್ರೋಲ್ ಬೆಲೆ 100 ರೂಪಾಯಿಗಳನ್ನು ದಾಟಿದೆ. ಪ್ರತಿದಿನ 30 ಪೈಸೆವರೆಗೆ ಹೆಚ್ಚಳವಾಗುತ್ತಿತ್ತು. ಭಾನುವಾರ ಮತ್ತು ಸೋಮವಾರ ದರ ಸ್ಥಿರತೆ ಕಾಪಡಿಕೊಂಡಿತ್ತು. ಆದರೆ ಮಂಗಳವಾರ, ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 35 ಪೈಸೆ ಹೆಚ್ಚಾಗಿತ್ತು. ಅದಾದ ನಂತರ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿಲ್ಲ. ಬುಧವಾರ, ಶುಕ್ರವಾರ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ದರ ವ್ಯತ್ಯಾಸವಿರುತ್ತದೆ.

ಪೆಟ್ರೋಲಿಯಂನಿಂದ ಪೆಟ್ರೋಲ್ :

ಪೆಟ್ರೋಲಿಯಂನ ಮೂಲವನ್ನು ಹುಡುಕಲು ಅದೆಷ್ಟೋ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಹಾಗಿದ್ದರೂ ಕೂಡಾ ಪೆಟ್ರೋಲಿಯಂ ಮೂಲ ಯಾವುದು, ಅಂದರೆ ಅದು ಹೇಗೆ ಉತ್ಪತ್ತಿಯಾಯಿತು ಎಂಬುದರ ಪಕ್ಕಾ ಮಾಹಿತಿ ಇಲ್ಲ. ಪೆಟ್ರೋಲಿಯಂ ಮೂಲದ ಕುರಿತಂತೆ ವಾದಗಳು, ಮಂಡನೆಗಳು ನಡೆದಿವೆ. ಅವುಗಳಲ್ಲಿ ಅಕಾರ್ಬನಿಕ ಹಾಗೂ ಕಾರ್ಬನಿಕ ಎಂಬುದಾಗಿ ಎರಡು ರೀತಿಯ ವಾದಗಳನ್ನು ನಾವು ನೋಡಬಹುದು. ಕೇಳಿಯೂ ಇರಬಹುದು. ಅಕಾರ್ಬನಿಕದ ಪ್ರಕಾರ ಪೆಟ್ರೋಲಿಯಂ ಕೇವಲ ಅಕಾರ್ಬನಿಕ ವಸ್ತುಗಳ ರಾಸಾಯನಿಕದಿಂದ ಉತ್ಪತ್ತಿಯಾದ ವಸ್ತುವಾಗಿದೆ. ಪೆಟ್ರೋಲಿಯಂ ಉತ್ಪತ್ತಿ ಕುರಿತಾಗಿ ಬೇರೆ ವಾದಗಳೂ ಇವೆ. ಹಾಗಾಗಿ ಯಾವುದು ಖಚಿತವಾದದ್ದು ಎಂಬುದಕ್ಕೆ ಗೊಂದಲ ಇನ್ನೂ ಇದೆ.

ನೈಸರ್ಗಿಕವಾಗಿ ಸಿಗುವ ಪೆಟ್ರೋಲಿಯಂಗೆ ಕಚ್ಚಾ ಎಣ್ಣೆ ಎಂದು ಕೂಡಾ ಕರೆಯಲಾಗುತ್ತದೆ. ಇದರ ನೇರ ಉಪಯೋಗ ಮಾಡಬಾರದು. ಉಪಯುಕ್ತ ವಸ್ತುಗಳಾದ ಪೆಟ್ರೋಲ್, ಸೀಮೆಎಣ್ಣೆ, ಡೀಸೆಲ್ ಎಣ್ಣೆ, ಕೀಲೆಣ್ಣೆ ಮುಂತಾದವುಗಳನ್ನು ಪೆಟ್ರೋಲಿಯಂನಿಂದ ತಯಾರಿಸುವ ವಿಧಾನಕ್ಕೆ ಪೆಟ್ರೋಲಿಯಂ ಸಂಸ್ಕರಣೆ ಎಂದು ಕರೆಯಲಾಗುತ್ತದೆ. ಮೊದಲು ಉತ್ಪನ್ನಗಳನ್ನು ಬೇರ್ಪಡಿಸಿ ನಂತರ ಅವುಗಳನ್ನು ಶುದ್ಧೀಕರಿಸಲಾಗುತ್ತದೆ.‌

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳ ಖಂಡಿಸಿ ಗದಗದಲ್ಲಿ ಕೈ ಕಾರ್ಯಕರ್ತರ ಟ್ರ್ಯಾಕ್ಟರ್ ಮೆರವಣಿಗೆ

ಇದನ್ನೂ ಓದಿ: Petrol Diesel Price | ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್​, ಡೀಸೆಲ್ ದರ!