ಬೆಂಗಳೂರು: ಇನ್ನೇನು ಪೆಟ್ರೋಲ್ ದರ 100 ರೂಪಾಯಿಗೆ ತಲುಪಿ ಬಿಡುತ್ತದೆ. ಶತಕ ಬಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಾಹನ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಹಕರಿಗೆ ಸಮಾಧಾನಕರ ಸಂಗತಿ ಅಂದರೆ, ಸತತವಾಗಿ ಮಾರ್ಚ್ ತಿಂಗಳ ಪ್ರಾರಂಭದಿಂದಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಫೆಬ್ರವರಿ ತಿಂಗಳ ಕೊನೆಯ ಶನಿವಾರ ದರ ಬದಲಾದ ನಂತರ ಇಂಧನ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.22 ರೂಪಾಯಿಗೆ ಮಾರಾಟವಾಗುತ್ತಿದ್ದು, ಡೀಸೆಲ್ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ.
ದೆಹಲಿಯಲ್ಲಿ ಇಂದು ಮಂಗಳವಾರ ಪೆಟ್ರೋಲ್ ದರ ಪ್ರತಿ ಲೀಟರಿಗೆ 91.17 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಪ್ರತಿ ಲೀಟರ್ ಡೀಸೆಲ್ ದರ 81.47 ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 97.57 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ.
ಚೆನ್ನೈನಲ್ಲಿ ಪ್ರತಿ ಲೀಟರಿಗೆ ಪೆಟ್ರೋಲ್ 93.11 ರೂಪಾಯಿಗೆ ಮಾರಾಟವಾಗುತ್ತಿದ್ದು, ಡೀಸೆಲ್ ಪ್ರತಿ ಲೀಟರಿಗೆ 86.45 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಕೋಲ್ಕತ್ತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.35 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ 84.35 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನು, ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.79 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 88.86 ರೂಪಾಯಿಗೆ ಮಾರಾಟವಾಗುತ್ತಿದೆ. ಜೊತೆಗೆ ತೆಲಂಗಾಣದ ಮತ್ತೊಂದು ಪ್ರಮುಖ ಪಟ್ಟಣವಾದ ಕರೀಂ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.92 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 88.97 ರೂಪಾಯಿಗೆ ಮಾರಾಟವಾಗುತ್ತಿದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಪೆಟ್ರೋಲ್ ದರ ಏರಿಕೆ ಕಂಡಿದ್ದು, ದರ ಏರಿಕೆಯಲ್ಲಿ ಇಂದು 97.39 ರೂಪಾಯಿಗೆ ಜಿಗಿದಿದೆ. ಹಾಗೂ ಡೀಸೆಲ್ ದರ ಪ್ರತಿ ಲೀಟರಿಗೆ 90.79 ರೂಪಾಯಿಗೆ ಮಾರಾಟವಾಗಿದ್ದು, ದರ ಏರಿಕೆಯ ನಂತರ 90.91 ರೂಪಾಯಿಗೆ ಜಿಗಿದಿದೆ.ಕಳೆದ ತಿಂಗಳಿನಲ್ಲಿ ಇಂಧನದ ಬೆಲೆ ಏರಿಕೆಯತ್ತ ಸಾಗುತ್ತಲೇ ಇತ್ತು. ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 25 ಪೈಸೆ ಹೆಚ್ಚಳದೊಂದಿಗೆ ದರ 100.13 ರೂಪಾಯಿ ತಲುಪಿತ್ತು. ಡೀಸೆಲ್ ದರ 92.13 ರೂಪಾಯಿಗೆ ತಲುಪಿತ್ತು. ಡೀಸೆಲ್ ಕೂಡಾ ಶತಕ ಭಾರಿಸುವ ಹಾದಿಯಲ್ಲಿ ಸಾಗುತ್ತಿತ್ತು. ಆಗ, ಬೆಂಗಳೂರಿನಲ್ಲೂ ಇಂಧನ ದರ ಶತಕ ಬಾರಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜನರು ಕಂಗಾಲಾಗಿದ್ದರು. ನಂತರ ಮಾರ್ಚ್ ತಿಂಗಳಿನಲ್ಲಿ ಯಾವುದೇ ದರ ಬದಲಾವಣೆ ಕಂಡು ಬಂದಿಲ್ಲದ ಕಾರಣ ಗ್ರಾಹಕರು ಸ್ವಲ್ಪ ನಿರಾಳರಾಗಿದ್ದಾರೆ.
ಇಂಧನ ದರದಲ್ಲಿ ಇಳಿಕೆಯಾಗಬೇಕು ಎಂದಾದರೆ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗಬೇಕು. ಆಗ ಮಾತ್ರ ಇಂಧನ ದರದಲ್ಲಿ ನಿಜವಾಗಿಯೂ ಇಳಿಕೆ ಕಾಣಲು ಸಾಧ್ಯ ಎಂದು ತಜ್ಞ ರು ಅಭಿಪ್ರಾಯ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಇಂಧನ ದರ ಇಳಿಕೆಯತ್ತ ಸಾಗುವುದು ಯಾವಾಗ ಎಂದು ಗ್ರಾಹಕರು ಪ್ರತಿನಿತ್ಯ ಕಾಯುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಇಂಧನ ಬೇಡಿಕೆಯೂ ಕಡಿಮೆಯಾಗಿದೆ.
ಇದನ್ನೂ ಓದಿ: Petrol Diesel Price | ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರಿಗೆ 94.22 ರೂಪಾಯಿ
ಇದನ್ನೂ ಓದಿ: Petrol Price: ರಾಜಸ್ಥಾನದಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ.. ಸಿಲಿಕಾನ್ ಸಿಟಿಯೂ ಶತಕದ ಹಾದಿಯತ್ತ!
Published On - 9:23 am, Tue, 16 March 21