ದೆಹಲಿ: ಸರ್ಕಾರಿ ತೈಲ ಕಂಪನಿಗಳು ಇಂದು ಬುಧವಾರ (ಮೇ12) ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 22ರಿಂದ 25 ಪೈಸೆಗೆ ಏರಿದ್ದರೆ, ಪ್ರತಿ ಲೀಟರ್ ಡೀಸೆಲ್ ದರ 24 ರಿಂದ 27 ಪೈಸೆಗೆ ಏರಿಕೆಯಾಗಿದೆ. ದರ ಏರಿಕೆಯ ನಂತರದಲ್ಲಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.05 ರೂ. ಆಗಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ದರ 82.61 ರೂ. ಆಗಿದೆ. ದರ ಹೆಚ್ಚಳದಿಂದ ಭೋಪಾಲ್ನಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 95.11 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ದರ 87.57 ರೂಪಾಯಿ ಆಗಿದೆ.
ಕಳೆದ ಶುಕ್ರವಾರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.27 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ದರ 81.73 ರೂ. ಇತ್ತು. ಅದೇ ರೀತಿ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 97.61 ಇತ್ತು. ಮತ್ತು ಒಂದು ಲೀಟರ್ ಡೀಸೆಲ್ ದರ 88.82 ರೂ. ಇತ್ತು. ಆ ನಂತರ ನಿನ್ನೆ ಮಂಗಳವಾರ ಕೂಡಾ ತೈಲ ದರ ಏರಿಕೆಯಾಗಿದ್ದು. ಇಂದು ಬುಧವಾರವೂ ಬೆಲೆಯಲ್ಲಿ ಹೆಚ್ಚಳವಾಗಿದೆ.
ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮಾಹಿತಿ
ನಗರ ಪೆಟ್ರೋಲ್(ಪ್ರತಿ ಲೀಟರ್ಗೆ) ಡೀಸೆಲ್(ಪ್ರತಿ ಲೀಟರ್ಗೆ)
ದೆಹಲಿ 92.05 82.61
ಮುಂಬೈ 98.35 89.75
ಕೋಲ್ಕತ್ತಾ 92.16 85.45
ಚೆನ್ನೈ 93.84 87.49
ಪಂಚ ರಾಜ್ಯಗಳ ಚುನಾವಣೆ ಎದುರಿಗಿದ್ದಾಗ ತೈಲ ಕಂಪನಿಗಳು ದರ ಹೆಚ್ಚಳ ಮಾಡಿರಲಿಲ್ಲ. ಆದರೆ ಚುನಾವಣೆ ಮುಗಿಯುತ್ತಿದ್ದಂತೆಯೇ ತೈಲ ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿದೆ. ಕಳೆದ ವಾರದ ಮಂಗಳವಾರ ಸರ್ಕಾರಿ ತೈಲ ಕಂಪನಿಗಳು ಬೆಲೆ ಹೆಚ್ಚಿಸಲು ಪ್ರಾರಂಭಿಸಿದವು. ಹಾಗೆಯೇ ಮುಂದುವರೆಯುತ್ತಾ ಇಂದೂ ಕೂಡಾ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ.
ಇಂದಿನ ತೈಲ ದರ ಏರಿಕೆಯಿಂದಾಗಿ ಭೋಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ. ಭೋಪಾಲ್ನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 100.08 ರೂಪಾಯಿಗೆ ಏರಿಕೆಯಾಗಿದ್ದು ಗರಿಷ್ಠ ಮಟ್ಟ ತಲುಪಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ದರ 90.95 ರೂಪಾಯಿಗೆ ಹೆಚ್ಚಿಸಲಾಗಿದೆ.
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
Published On - 8:49 am, Wed, 12 May 21