Petrol Diesel Price: ಎಂಟು ದಿನಗಳಾದರೂ ಪೆಟ್ರೋಲ್​, ಡೀಸೆಲ್​ ದರದಲ್ಲಿ ಇಳಿಕೆಯಿಲ್ಲ; ಗರಿಷ್ಟ ಮಟ್ಟ ತಲುಪಿರುವ ಇಂಧನ ದರ ಕುಸಿಯುವುದು ಯಾವಾಗ?

| Updated By: Digi Tech Desk

Updated on: Apr 23, 2021 | 11:30 AM

Petrol Diesel Rate Today in Bangalore: ಗರಿಷ್ಟ ಮಟ್ಟ ತಲುಪಿರುವ ಪೆಟ್ರೋಲ್​ ಮತ್ತು ಡೀಸೆಲ್​ ದರ ಇನ್ನಾದರೂ ಇಳಿಕೆ ಕಾಣಬಹುದೆನೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೀಗ ಒಂದು ವಾರವಾದರೂ ದರ ಕುಸಿತ ಕಂಡಿಲ್ಲದ್ದನ್ನು ಕಂಡ ಖರೀದಿದಾರರು, ದರ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಒಡ್ಡಿದ್ದಾರೆ.

Petrol Diesel Price: ಎಂಟು ದಿನಗಳಾದರೂ ಪೆಟ್ರೋಲ್​, ಡೀಸೆಲ್​ ದರದಲ್ಲಿ ಇಳಿಕೆಯಿಲ್ಲ; ಗರಿಷ್ಟ ಮಟ್ಟ ತಲುಪಿರುವ ಇಂಧನ ದರ ಕುಸಿಯುವುದು ಯಾವಾಗ?
ಪಿಟಿಐ ಚಿತ್ರ
Follow us on

Petrol Diesel Rate Today in Bangalore: ಬೆಂಗಳೂರು: ಪೆಟ್ರೋಲ್​, ಡೀಸೆಲ್​ ದರ ಸತತವಾಗಿ 8 ದಿನಗಳಾದರೂ ಬದಲಾಗಿಲ್ಲ. ಈ ಮೊದಲು ಏಪ್ರಿಲ್​ ತಿಂಗಳ ಪ್ರಾರಂಭದಲ್ಲಿ 15 ದಿನಗಳಾದರೂ ದರ ಇಳಿಕೆ ಕಂಡಿರಲಿಲ್ಲ. ಎಪ್ರಿಲ್​ ತಿಂಗಳಿನಲ್ಲಿ ಕೊಂಚ ದರ ಇಳಿಕೆ ಕಂಡಿರುವುದನ್ನು ಕಂಡ ಗ್ರಾಹಕರು ಸಂತೋಷ ಪಟ್ಟಿದ್ದರು. ಗರಿಷ್ಟ ಮಟ್ಟ ತಲುಪಿರುವ ಪೆಟ್ರೋಲ್​ ಮತ್ತು ಡೀಸೆಲ್​ ದರ ಇನ್ನಾದರೂ ಇಳಿಕೆ ಕಾಣಬಹುದೆನೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೀಗ ಒಂದು ವಾರವಾದರೂ ದರ ಕುಸಿತ ಕಂಡಿಲ್ಲದ್ದನ್ನು ಕಂಡ ಖರೀದಿದಾರರು, ದರ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಒಡ್ಡಿದ್ದಾರೆ.

ಇಂದು ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.40 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿ ಲೀಟರ್​ ಡೀಸೆಲ್​ಅನ್ನು 80.73 ರೂಪಾಯಿ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.43 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85.75 ರೂಪಾಯಿ ಆಗಿದೆ.

ಇನ್ನು ಕೋಲ್ಕತ್ತಾ, ಬೆಂಗಳೂರು, ಪಂಜಾಬ್​, ಹರಿಯಾಣ, ಪುಣೆ ನಗರಗಳಲ್ಲಿ ಇಂಧನ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.62 ರೂಪಾಯಿ ಇದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 83.61 ರೂಪಾಯಿ ಇದೆ. ಪುಣೆಯಲ್ಲಿ ಪೆಟ್ರೋಲ್​ ದರ 96.47 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 83.16 ರೂಪಾಯಿ ಇದೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೊಲ್​ ದರ 93.43 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 88.05 ರೂಪಾಯಿ ಇದೆ.

ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.79 ರೂಪಾಯಿ ಹಾಗೂ ಡೀಸೆಲ್​ ದರ 81.19 ರೂಪಾಯಿ ಇದೆ. ಮೊಹಾಲಿಯಲ್ಲಿ(ಪಂಜಾಬ್) ಪ್ರತಿ ಲೀಟರ್​ ಪೆಟ್ರೋಲ್​ ದರ 92.62 ರೂಪಾಯಿ ಇದೆ. ಹಾಗೆಯೇ ಡೀಸೆಲ್​ ದರ 83.58 ರೂಪಾಯಿ ಇದೆ.

ನಡೆಯುತ್ತಿರುವ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಪೆಟ್ರೋಲ್​, ಡೀಸೆಲ್​ ದರ ಏರಿಕೆಯಾಗಬಹುದು ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಸಾರ್ವಜನಿಕ ತೈಲ ಕಂಪನಿಗಳು ಪ್ರತಿ ಲೀಟರ್​ ಪೆಟ್ರೋಲ್​, ಡೀಸೆಲ್​ ದರದಲ್ಲಿ 2 ರಿಂದ 3 ರೂಪಾಯಿಯಷ್ಟು ಏರಿಕೆ ಮಾಡಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ. ತಮಿಳುನಾಡು, ಅಸ್ಸಾಂ, ಕೇರಳ, ಪುದುಚೆರಿ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಏಪ್ರಿಲ್​ 29ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.

ವಿವಿಧ ನಗರದ ಪೆಟ್ರೋಲ್​ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html

Published On - 10:16 am, Fri, 23 April 21