Petrol Diesel Rate Today: ಇಂದೂ ಏರಿದ ಪೆಟ್ರೋಲ್​, ಡೀಸೆಲ್​ ದರ! ಬೇಡಿಕೆ ಕುಸಿಯುತ್ತಿದ್ದರೂ ತೈಲ ಬೆಲೆ ಹೆಚ್ಚಳ

|

Updated on: May 23, 2021 | 9:08 AM

Petrol Diesel Price Today: ಇಂದು (ಮೇ 23)) ಪೆಟ್ರೋಲ್​ ಮತ್ತು ಡೀಸೆಲ್​ ದರ ಮತ್ತೆ ಏರಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ತೈಲ ದರ ಪರಿಷ್ಕರಿಸಿದ ಬಳಿಕ ಲೀಟರ್ ಪೆಟ್ರೋಲ್​ ಬೆಲೆಯಲ್ಲಿ ಸುಮಾರು 15 ರಿಂದ 17 ಪೈಸೆ ಹಾಗೆಯೇ ಲೀಟರ್​ ಡೀಸೆಲ್​ ದರದಲ್ಲಿ 25 ರಿಂದ 29 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

Petrol Diesel Rate Today: ಇಂದೂ ಏರಿದ ಪೆಟ್ರೋಲ್​, ಡೀಸೆಲ್​ ದರ! ಬೇಡಿಕೆ ಕುಸಿಯುತ್ತಿದ್ದರೂ ತೈಲ ಬೆಲೆ ಹೆಚ್ಚಳ
ಸಂಗ್ರಹ ಚಿತ್ರ
Follow us on

ದೆಹಲಿ: ಒಂದು ದಿನ ಸ್ಥಿರತೆ ಕಾಪಾಡಿಕೊಂಡ ಪೆಟ್ರೋಲ್​ ಮತ್ತು ಡೀಸೆಲ್​ ದರ ಇಂದು (ಮೇ 23) ಮತ್ತೆ ಏರಿಕೆ ಆಗಿದೆ. ಸರ್ಕಾರಿ ತೈಲ ಕಂಪನಿಗಳು ತೈಲ ದರ ಪರಿಷ್ಕರಣೆಯ ಬಳಿಕ ಇಂದು ಬೆಲೆ ಹೆಚ್ಚಳ ಮಾಡಿದೆ. ಇನ್ನು ಹಲವು ದೇಶಗಳಲ್ಲಿ ಪೆಟ್ರೋಲ್​ ದರ ಈಗಾಗಲೇ ಶತಕ ಬಾರಿಸಿದೆ. ಇದೇ ರೀತಿ ಇಂಧನ ದರ ಏರುತ್ತಲೇ ಸಾಗುತ್ತಿದ್ದರೆ ವಾಣಿಜ್ಯ ನಗರಿ ಮುಂಬೈನಲ್ಲಿ ಶತಕ ಬಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದು ಲೀಟರ್ ಪೆಟ್ರೋಲ್​ ಬೆಲೆಯಲ್ಲಿ ಸುಮಾರು 15 ರಿಂದ 17 ಪೈಸೆ ಹಾಗೆಯೇ ಲೀಟರ್​ ಡೀಸೆಲ್​ ದರದಲ್ಲಿ 25 ರಿಂದ 29 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ, ನಿಯಂತ್ರಣಕ್ಕೆ ಲಾಕ್​ಡೌನ್​ ಜಾರಿಯಲ್ಲಿದೆ. ಹೀಗಿರುವಾಗ ಅನಗತ್ಯವಾಗಿ ಜನರು ಹೊರಗಡೆ ಬರುತ್ತಿಲ್ಲ. ವಾಹನ ಸಂಚಾರವಿಲ್ಲ. ಇದರಿಂದಾಗಿ ಇಂಧನ ಬೇಡಿಕೆ ಕುಸಿತ ಕಂಡಿದೆ. ಹೀಗಿರುವಾಗಲೂ ತೈಲ ದರ ಒಂದೇ ಸಮನೆ ಏರುತ್ತಲೇ ಇದೆ. ಕಳೆದ 12 ದಿನಗಳಲ್ಲಿ ದರ ಏರಿಕೆ ಕಂಡ ಇಂಧನ ಇಲ್ಲಿಯವರೆಗೆ ಲೀಟರ್​ ಪೆಟ್ರೋಲ್​ನಲ್ಲಿ 2.69 ಹಾಗೂ ಲೀಟರ್​ ಡೀಸೆಲ್​ ದರ 3.07 ರೂಪಾಯಿ ಏರಿಕೆ ಆಗಿದೆ.

ಬೆಲೆ ಹೆಚ್ಚಳದ ಬಳಿಕ ಲೀಟರ್​ ಪೆಟ್ರೋಲ್​ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 93.21 ರೂಪಾಯಿ ಆಗಿದೆ. ಅದೇ ರೀತಿ ಲೀಟರ್​​ ಡೀಸೆಲ್​ ಬೆಲೆ 84.07 ರೂಪಾಯಿಗೆ ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ ದರ 99.49 ರೂಪಾಯಿಗೆ ಏರಿ ಆಗಿದ್ದು, ಇನ್ನೇನು ಶತಕದ ಅಂಚಿನಲ್ಲಿದೆ. ಹಾಗೆಯೇ ಲೀಟರ್​ ಡೀಸೆಲ್​ ದರ 91.30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.86 ರೂಪಾಯಿಗೆ ಏರಿಕೆ ಆಗಿದ್ದು, ಲೀಟರ್​ ಡೀಸೆಲ್​ ದರ 88.87 ರೂಪಾಯಿ ಆಗಿದೆ. ಇನ್ನು, ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 93.27 ರೂಪಾಯಿ ಆಗಿದ್ದು, ಲೀಟರ್​ ಡೀಸೆಲ್​ ದರ 86.91 ರೂಪಾಯಿಗೆ ಏರಿಕೆ ಆಗಿದೆ.

ಇನ್ನು ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ಅನ್ನು 96.31 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಲೀಟರ್​ ಡೀಸೆಲ್​ಅನ್ನು 89.12 ರೂಪಾಯಿಗೆ ಹೆಚ್ಚಿಸಲಾಗಿದೆ. ಹೈದರಾಬಾದ್​ನಲ್ಲಿ ಲೀಟರ್​ ಪೆಟ್ರೋಲ್​ ದರ 96.88 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 91.65 ರೂಪಾಯಿ ಏರಿಕೆ ಆಗಿದೆ.

ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html