Petrol Price Today: ಸತತ 15ನೇ ದಿನವೂ ಬದಲಾಗದ ಪೆಟ್ರೋಲ್, ಡೀಸೆಲ್ ದರ
ಮಾರ್ಚ್ ತಿಂಗಳ 24, 25ರಂದು ಪೆಟ್ರೋಲ್, ಡೀಸೆಲ್ ದರ ಕಡಿಮೆಗೊಳಿಸಲಾಗಿತ್ತು. ನಂತರ ಹೋಳಿ ಹಬ್ಬದ ಮರುದಿನ ಮಾರ್ಚ್ 30ರಂದು ಬೆಲೆ ಕಡಿಮೆ ಮಾಡಲಾಯಿತು.
ದೆಹಲಿ: ಪ್ರತಿನಿತ್ಯವೂ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಮೂರು ಬಾರಿ ಕಡಿಮೆಗೊಳಿಸಲಾಗಿತ್ತು. ಮಾರ್ಚ್ ತಿಂಗಳ 24, 25ರಂದು ಪೆಟ್ರೋಲ್, ಡೀಸೆಲ್ ದರ ಕಡಿಮೆಗೊಳಿಸಲಾಗಿತ್ತು. ನಂತರ ಹೋಳಿ ಹಬ್ಬದ ಮರುದಿನ ಮಾರ್ಚ್ 30ರಂದು ಬೆಲೆ ಕಡಿಮೆ ಮಾಡಲಾಯಿತು. ಈ ಮೂರು ಬಾರಿ ಇಂಧನ ದರ ಕಡಿತದಿಂದಾಗಿ ಪೆಟ್ರೋಲ್ ಬೆಲೆದಲ್ಲಿ ಒಟ್ಟು 60 ಪೈಸೆ ಹಾಗೂ ಡೀಸೆಲ್ ದರದಲ್ಲಿ ಒಟ್ಟು 61 ಪೈಸೆ ಕಡಿಮೆ ಮಾಡಲಾಯಿತು. ಇಂದು ಬುಧವಾದರ ದೈನಂದಿನ ದರ ಪರಿಶೀಲಿಸಿದಾಗ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಕಚ್ಚಾ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರದ ಆಧಾರದ ಮೇಲೆ ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಡೀಸೆಲ್ ದರವನ್ನು ನಿರ್ಧರಿಸುತ್ತವೆ. ಪ್ರತಿನಿತ್ಯದ ಹೊಸ ದರವನ್ನು ಬೆಳಗ್ಗೆ 6 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ನಿನ್ನೆ ಮಂಗಳವಾರ ಕೂಡಾ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಮಾರ್ಚ್ ತಿಂಗಳ ಕೊನೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿತದ ನಂತರ ದರ ಬದಲಾಗಿಲ್ಲ. ಏಪ್ರಿಲ್ ತಿಂಗಳ ಪ್ರಾರಂಭದಿಂದಲೂ ಪೆಟ್ರೋಲ್, ಡೀಸೆಲ್ ದರ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಇಂದಿಗೆ ಸತತ 15 ನೇ ದಿನದವರೆಗೆ ದರ ವ್ಯತ್ಯಾಸವಾಗಿಲ್ಲ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.56 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್ ಡೀಸೆಲ್ ದರ 80.87 ರೂಪಾಯಿ ಇದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.98 ರೂಪಾಯಿ ಇದ್ದು, ಪ್ರತಿ ಲೀಟರ್ ಡೀಸೆಲ್ ದರ 87.96 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.77 ರೂಪಾಯಿ ಇದ್ದು, ಡೀಸೆಲ್ ದರ 83.75 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರಿಗೆ 93.59 ರೂಪಾಯಿ ಕೊಟ್ಟು ಗ್ರಾಹಕರು ಪೆಟ್ರೋಲ್ ಖರೀದಿಸುತ್ತಿದ್ದಾರೆ. ಹಾಗೂ ಪ್ರತಿ ಲೀಟರ್ ಡೀಸೆಲ್ ದರ 85.75 ರೂಪಾಯಿ ಇದೆ. ಹೈದರಾಬಾದ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.16 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್ ಡೀಸೆಲ್ಅನ್ನು ಗ್ರಾಹಕರು 88.20 ರೂಪಾಯಿ ಕೊಟ್ಟು ಕೊಳ್ಳುತ್ತಿದ್ದಾರೆ. ಜೈಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.08 ರೂಪಾಯಿ ಇದೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 89.35 ರೂಪಾಯಿ ಇದೆ.
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/diesel-price-today.html
(Petrol Price Today in Bangalore Delhi Mumbai and Chennai Diesel price on 14th April 2021)
Published On - 8:54 am, Wed, 14 April 21