AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಒಂದು ದಿನದ ವಿರಾಮದ ಬಳಿಕ ಮತ್ತೆ ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಳ; ಗರಿಷ್ಠ ಮಟ್ಟದಲ್ಲಿದೆ ಇಂಧನ ದರ!

Petrol Diesel Rate Today: ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 100.47 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 95.89 ರೂಪಾಯಿ ಏರಿಕೆ ಆಗಿದೆ.

Petrol Price Today: ಒಂದು ದಿನದ ವಿರಾಮದ ಬಳಿಕ ಮತ್ತೆ ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಳ; ಗರಿಷ್ಠ ಮಟ್ಟದಲ್ಲಿದೆ ಇಂಧನ ದರ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 20, 2021 | 9:01 AM

Share

ದೆಹಲಿ: ಒಂದು ದಿನದ ವಿರಾಮದ ಬಳಿಕ ಇಂದು (ಭಾನುವಾರ, ಜೂನ್​ 20) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಮತ್ತೆ ಏರಿಕೆಯಾಗಿದೆ. ಜೂನ್​ ತಿಂಗಳ ಪ್ರಾರಂಭದಿಂದ ಒಟ್ಟು 11 ಬಾರಿ ಇಂಧನ ದರ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಲೀಟರ್​ ಪೆಟ್ರೋಲ್​ ದರದಲ್ಲಿ 29 ಪೈಸೆ ಹಾಗೂ ಲೀಟರ್​ ಡೀಸೆಲ್​ ದರವನ್ನು 27 ಪೈಸೆ ಹೆಚ್ಚಳ ಮಾಡಲಾಗಿದೆ.

ತೈಲ ದರ ಹೆಚ್ಚಳದ ಬಳಿಕ ದೆಹಲಿಯಲ್ಲಿ ಲೀಟರ್ ಪೆಟ್ರೋಲ್​ ದರ 97.22 ರೂಪಾಯಿ ಆಗಿದೆ. ಲೀಟರ್​ ಡೀಸೆಲ್​ ದರ 87.97 ರೂಪಾಯಿಗೆ ಏರಿಕೆ ಆಗಿದೆ. ಇನ್ನು, ಮೆಟ್ರೋ ಸಿಟಿಗಳಲ್ಲಿಯೇ ಗರಿಷ್ಟ ಮಟ್ಟದಲ್ಲಿರುವ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ ದರ 103.36 ರೂಪಾಯಿಗೆ ಏರಿಕೆ ಆಗಿದೆ ಹಾಗೂ ಲೀಟರ್​ ಡೀಸೆಲ್​ ದರ 95.44 ರೂಪಾಯಿಗೆ ಹೆಚ್ಚಳವಾಗಿದೆ.

ಪಾಟ್ನಾ ಇನ್ನೇನು ಶತಕ ಬಾರಿಸಲು ಗಡಿ ಅಂಚಿನಲ್ಲಿಯೇ ನಿಂತಿದೆ. ಲೀಟರ್​ ಪೆಟ್ರೋಲ್​ ದರ 99.28 ರೂಪಾಯಿಗೆ ಏರಿಕೆ ಆಗಿದೆ. ಲೀಟರ್​ ಡೀಸೆಲ್​ ದರ 93.30 ರೂಪಾಯಿ ಆಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಲಡಾಕ್​ನಲ್ಲಿ ಈಗಾಗಲೇ ಪೆಟ್ರೋಲ್​ ದರ ಶತಕ ಬಾರಿಸಿ ಮುನ್ನುಗ್ಗಿದೆ. ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ಸಹ ಈ ಗುಂಪಿಗೆ ಸೇರ್ಪಡೆಗೊಂಡಿದ್ದು ಇಂದು ಮತ್ತೆ ದರ ಹೆಚ್ಚಳದ ಬಳಿಕ ಗರಿಷ್ಠ ಮಟ್ಟ ತಲುಪಿದೆ.

ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 100.47 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 95.89 ರೂಪಾಯಿ ಏರಿಕೆ ಆಗಿದೆ. ಚೆನ್ನೈನಲ್ಲಿ ಲೀಟರ್​ ಪೆಟ್ರೋಲ್​ ದರ 98.40 ರೂಪಾಯಿ ಇದ್ದು, ಲೀಟರ್​ ಡೀಸೆಲ್​ ದರ 92.58 ರೂಪಾಯಿಗೆ ಏರಿಕೆ ಆಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ