ಲಕ್ನೋ: ಉತ್ತರಪ್ರದೇಶದ ಮೀರತ್‌ನಲ್ಲಿ 35 ಕೋಟಿ ರೂ. ಮೌಲ್ಯದ 1.5 ಲಕ್ಷ ನಕಲಿ NCERT ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಸಹ ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ, ಈ ಪುಸ್ತಕಗಳನ್ನು ದೆಹಲಿ, ಉತ್ತರಾಖಂಡ ಮತ್ತು ಇತರ ರಾಜ್ಯಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದೀಗ, ಪುಸ್ತಕಗಳನ್ನು ಶೇಖರಿಸುತ್ತಿದ್ದ ಗೋದಾಮನ್ನು ಸಹ ಬಂದ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀರತ್ ಪೊಲೀಸರ ಮೂಗಿನ ಕೆಳಗೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳನ್ನು ಅಕ್ರಮವಾಗಿ ಹೇಗೆ ಮುದ್ರಿಸಲಾಗುತ್ತಿದೆ ಎಂಬ ಪ್ರಶ್ನೆಗಳೂ ಸಹ ಉದ್ಭವಿಸುತ್ತಿವೆ. ದಾಳಿಯಲ್ಲಿ ಮುಟ್ಟುಗೋಲು ಹಾಕಿಕೊಂಡ NCERT ಪಠ್ಯಪುಸ್ತಕಗಳನ್ನು 2 ರಿಂದ 12 ನೇ ತರಗತಿಗೆ ಮುದ್ರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಜೊತೆಗೆ, ದೇಶದ ಹಲವು ರಾಜ್ಯಗಳಲ್ಲಿ ಈ ಪುಸ್ತಕಗಳನ್ನ ಮಾರಾಟ ಮಾಡುತ್ತಿದ್ದವರ ವಿಳಾಸಗಳೂ ಸಹ ಪೊಲೀಸರಿಗೆ ದೊರೆತಿವೆ.
ಇದಲ್ಲದೆ, ಪ್ರಕರಣದ ಮಾಸ್ಟರ್ ಮೈಂಡ್ ಸಚಿನ್ ಗುಪ್ತಾ ಉತ್ತರಪ್ರದೇಶದ ಶಿಕ್ಷಣ ಮಂಡಳಿಯ ನಕಲಿ ಪಠ್ಯಪುಸ್ತಕಗಳನ್ನು ಸಹ ಮುದ್ರಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
Meerut: A joint team of UP Special Task Force & local police seized illegally printed NCERT books during a raid at a godown in Partapur. Ajay Sahni, SSP says, "Books worth Rs 35 crores & 6 printing machines have been seized. 12 people have been taken into custody." (21.8) pic.twitter.com/B9lubmOKHS
— ANI UP (@ANINewsUP) August 21, 2020
Published On - 2:33 pm, Sun, 23 August 20