Delhi Chalo: ಸಿಂಘು ಗಡಿಯಲ್ಲಿ ಪಿಜ್ಜಾ ತಿಂದ ಪ್ರತಿಭಟನಾ ರೈತರು

| Updated By: ganapathi bhat

Updated on: Apr 07, 2022 | 10:47 AM

ನೂತನ ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧದ ರೈತರ ಪ್ರತಿಭಟನೆ ಹದಿನಾರು ದಿನಗಳನ್ನು ಪೂರೈಸಿದೆ. ಸಿಂಘು ಬಾರ್ಡರ್​ನಲ್ಲಿ ರೈತರು ಪಿಜ್ಜಾ ತಿನ್ನುತ್ತಿರುವ ಫೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

Delhi Chalo: ಸಿಂಘು ಗಡಿಯಲ್ಲಿ ಪಿಜ್ಜಾ ತಿಂದ ಪ್ರತಿಭಟನಾ ರೈತರು
ಸಿಂಘು ಗಡಿಯಲ್ಲಿ ಪಿಜ್ಝಾ ಶಾಪ್
Follow us on

ದೆಹಲಿ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯು 16 ದಿನಗಳನ್ನು ಪೂರೈಸಿದೆ. ಸರ್ಕಾರದ ನಿರ್ಧಾರದ ವಿರುದ್ಧ ಪಣತೊಟ್ಟಿರುವ ರೈತರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರ ಮಾತ್ರ ರೈತರ ಮನವೊಲಿಕೆಗೆ ಮಾತುಕತೆಯ ಪ್ರಯತ್ನ ನಡೆಸುತ್ತಿದೆ.

ಈ ನಡುವೆ ರೈತರು ಪ್ರತಿಭಟನೆಯಲ್ಲಿ ಪಿಜ್ಜಾ ತಿಂದಿರುವ ಬಗ್ಗೆ ವರದಿಯಾಗಿದೆ. ದೆಹಲಿ ಗಡಿಭಾಗವಾದ ಸಿಂಘು ಪ್ರದೇಶದಲ್ಲಿ ರೈತರು ಪಿಜ್ಜಾ ತಿನ್ನುತ್ತಿರುವ ಫೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಟ್ವಿಟರ್ ಟ್ರೆಂಡಿಂಗ್​ನಲ್ಲೂ ಸ್ಥಾನ ಪಡೆದಿರುವ ಪಿಜ್ಜಾ ಹ್ಯಾಷ್​ಟ್ಯಾಗ್​ನಲ್ಲಿ, ಇಂದು ಮಧ್ಯಾಹ್ನದ ವೇಳೆಗೆ ಲಕ್ಷಾಂತರ (1 ಲಕ್ಷ 16 ಸಾವಿರ) ಟ್ವೀಟ್​ಗಳಾಗಿವೆ.

ರೈತರ ಪಾದಗಳಿಗೆ ಮಸಾಜ್ ಮಾಡುವ ಫೋಟೋಗಳು ಈ ಮೊದಲು ಸುದ್ದಿಯಾಗಿತ್ತು. ಇದೀಗ ಪ್ರತಿಭಟನೆಯಲ್ಲಿ ಪಿಜ್ಜಾ ಬಂದಿರುವುದು ಸುದ್ದಿ ಮಾಡುತ್ತಿದೆ. ಈ ಬಗ್ಗೆ ವರದಿ ಮಾಡಿರುವ ‘ದಿ ಟ್ರಿಬ್ಯೂನ್’, ಭಾರತೀಯ ಕಿಸಾನ್ ಯೂನಿಯನ್​ನ ರೈತರು ಪಿಜ್ಜಾ ಅಂಗಡಿ ತೆರೆದಿರುವ ಬಗ್ಗೆ ಮಾಹಿತಿ ನೀಡಿದೆ. ಮಂಗಳವಾರ ಆರಂಭವಾಗಿರುವ ಈ ಪಿಜ್ಜಾ ಅಂಗಡಿ ಪ್ರತಿಭಟನೆ ಕೊನೆಯಾಗುವವರೆಗೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಪ್ರತಿಭಟನಾಕಾರರ ಉತ್ಸಾಹ ಹೆಚ್ಚಿಸಲು, ಅವರಿಗೆ ಬೆಂಬಲ ಸೂಚಿಸಲು ಪಿಜ್ಜಾ ಶಾಪ್ ತೆರೆದಿರುವುದಾಗಿ ಮಾಲೀಕ ತಿರ್ಲೋಚನ್ ಸಿಂಗ್ ತಿಳಿಸಿದ್ದಾರೆ. ಜಿಲ್ಲಾ ಪರಿಷತ್ ಸದಸ್ಯ, ಪ್ರಭ್​ದೀಪ್ ಸಿಂಗ್ ನರಂಗ್​ವಾಲ್ ಸಹಿತ ಎಲ್ಲಾ ವಯೋಮಾನದ ಜನರು ಈ ಕೆಲಸವನ್ನು ಅಭಿನಂದಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

Delhi Chalo: ಪಂಜಾಬ್​ನಿಂದ ಹೊರಟಿವೆ 1300 ಟ್ರ್ಯಾಕ್ಟರ್​ಗಳು, ಪ್ರತಿಭಟನೆಯ ಕಾವಿಗೆ ಟೋಲ್​ಗಳು ಮುಕ್ತ ಮುಕ್ತ ಮುಕ್ತ..

Published On - 4:00 pm, Sat, 12 December 20