ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಮನ್ ಕೀ ಬಾತ್ (Mann ki Baat) ರೇಡಿಯೋ ಕಾರ್ಯಕ್ರಮದ 80ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಸದಾ ಏನಾದರೂ ಹೊಸತನ್ನು ಮಾಡುವ ಉತ್ಸಾಹದಲ್ಲಿ ಇರುತ್ತದೆ. ಯುವಜನರು ಜೀವನದಲ್ಲಿ ರಿಸ್ಕ್ ತೆಗೆದು ಮುಂದೆ ಬರುತ್ತಿದ್ದಾರೆ. ನೀವೀಗ ಯಾವುದೇ ಕುಟುಂಬಕ್ಕೆ ಹೋಗಿ, ಅಲ್ಲಿರುವ ಯುವಕ/ಯುವತಿಯರನ್ನು ಪ್ರಶ್ನಿಸಿ ನೋಡಿ, ಅವರೇನೋ ಹೊಸದನ್ನು ಮಾಡಲು ಬಯಸುತ್ತಿರುತ್ತಾರೆ. ತಮ್ಮ ಕುಟುಂಬದ ಸಂಪ್ರದಾಯಕ್ಕೂ ಮಿಗಿಲಾಗಿ ಏನನ್ನೋ ಹೊಸದನ್ನು ಸಾಧಿಸುವ ಹುಮ್ಮಸ್ಸು ಅವರಲ್ಲಿ ಕಾಣುತ್ತದೆ ಎಂದು ಹೇಳಿದರು.
ಹಾಗೇ, ಟೋಕಿಯೊ ಒಲಿಂಪಿಕ್ಸ್ನಲ್ಲಿ ಸಾಧನೆ ಮಾಡಿದವರನ್ನು ನರೇಂದ್ರ ಮೋದಿ ಮನ್ ಕೀ ಬಾತ್ನಲ್ಲಿ ಹೊಗಳಿದರು. ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಸಾಧನೆಯನ್ನೂ ಉಲ್ಲೇಖಿಸಿದರು. ಪ್ರತಿ ಪದಕವೂ ವಿಶೇಷವೇ ಆಗಿದೆ. ಅದರಲ್ಲೂ 40 ವರ್ಷಗಳ ಬಳಿಕ, ಭಾರತೀಯ ಹಾಕಿ ತಂಡ ಪದಕ ಗೆದ್ದಾಗ ಇಡೀ ದೇಶ ಹರ್ಷದಿಂದ ಕುಣಿದಾಡಿತು. ಬಹುಶಃ ಮೇಜರ್ ಧ್ಯಾನ್ ಚಂದ್ ಜೀ ತುಂಬ ಸಂತೋಷಪಟ್ಟಿರುತ್ತಾರೆ ಎಂದು ಹೇಳಿದರು.
ದೇಶದಲ್ಲಿ ಕೆಲವು ದಿನಗಳ ಹಿಂದೆ ಬಾಹ್ಯಾಕಾಶ ಕ್ಷೇತ್ರದ ಅವಕಾಶವನ್ನು ವಿಸ್ತರಿಸಲಾಯಿತು. ಅದನ್ನು ಯುವಜನರು ತುಂಬ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸ್ಟಾರ್ಟ್ಅಪ್ ಸಂಸ್ಕೃತಿಗೆ ಸಲೀಸಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಸಣ್ಣ ನಗರಗಳಲ್ಲೂ ಸ್ಟಾರ್ಟ್ ಅಪ್ ಸಂಸ್ಕೃತಿ ಶುರುವಾಗಿದ್ದು, ಇದು ಯುವಜನರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದು ನರೇಂದ್ರ ಮೋದಿ ತಿಳಿಸಿದರು.
ಸ್ವಚ್ಛ ಭಾರತ್ ಮರೆಯಬೇಡಿ
ಇಂದಿನ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಸ್ವಚ್ಛ ಭಾರತ್ ಅಭಿಯಾನವನ್ನು ನೆನಪಿಸಿದರು. ಕೊವಿಡ್ 19 ಸೋಂಕು ಇನ್ನೂ ಕಡಿಮೆಯಾಗಿಲ್ಲ. ಹೀಗಿರುವಾಗ ನೈರ್ಮಲ್ಯತೆ ನಮ್ಮ ಆಧ್ಯತೆ ಆಗಿರಬೇಕು ಎಂದು ಮೋದಿ ಹೇಳಿದರು. ಕಳೆದ ಕೆಲವು ವರ್ಷಗಳಿಂದಲೂ, ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಂದೋರ್ನ್ನು ಉಲ್ಲೇಖಿಸಿದರು.
ಇದನ್ನೂ ಓದಿ: National Sports Day 2021: ಇಂದು ರಾಷ್ಟ್ರೀಯ ಕ್ರೀಡಾ ದಿನ: ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬಗ್ಗೆ ನಿಮಗೆಷ್ಟು ಗೊತ್ತು?
Namma Metro: ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಹಸಿರು ನಿಶಾನೆ; ಮಹಿಳಾ ಲೋಕೋಪೈಲಟ್ ಮೂಲಕ ನೂತನ ಮಾರ್ಗಕ್ಕೆ ಚಾಲನೆ
Published On - 11:30 am, Sun, 29 August 21