Ram Navami 2023: ದೇಶದ ಜನತೆಗೆ ಶ್ರೀರಾಮ ನವಮಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 30, 2023 | 11:21 AM

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ರಾಮ ನವಮಿಯ ಅಂಗವಾಗಿ ಶುಭಾಶಯ ಕೋರಿದ್ದಾರೆ. ಜೊತೆಗೆ, ಜನರು ಕೋವಿಡ್​ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ದೇಶದ ರಾಷ್ಟ್ರಪತಿ ಕೂಡ ರಾಮ ನವಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

Ram Navami 2023: ದೇಶದ ಜನತೆಗೆ ಶ್ರೀರಾಮ ನವಮಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು
ದ್ರೌಪದಿ ಮುರ್ಮು ಮತ್ತು ಮೋದಿ
Follow us on

ದೆಹಲಿ: ರಾಮ ನವಮಿ (Ram Navami 2023) ಪ್ರಯುಕ್ತ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ (narendra modi) ಶುಭಾಶಯಗಳನ್ನು ತಿಳಿಸಿದ್ದಾರೆ.  “ಮರ್ಯಾದಾ ಪುರುಷೋತ್ತಮ’ ಭಗವಾನ್ ರಾಮನ ಜೀವನವು ತ್ಯಾಗ, ತಪಸ್ಸು, ಸಂಯಮ ಮತ್ತು ಸಂಕಲ್ಪವನ್ನು ಆಧರಿಸಿದೆ” ಎಂದು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮನವಮಿಯ ಶುಭಾಶಯ ತಿಳಿಸಿದ್ದಾರೆ. ರಾಮನ ಜೀವನವು ಪ್ರತಿ ಯುಗದಲ್ಲೂ ಸ್ಫೂರ್ತಿಯಾಗಲಿದೆ. ರಾಮನ ನಡವಳಿಕೆ ನಮ್ಮ ಜೀವನದಲ್ಲಿಯೂ ಅಡಕವಾಗಬೇಕು. ದೇವರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಹೇಳುತ್ತಾ “ನನ್ನ ಎಲ್ಲಾ ದೇಶವಾಸಿಗಳಿಗೆ ಶ್ರೀ ರಾಮ ನವಮಿಯ ಶುಭಾಶಯಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಹಬ್ಬದ ಸಂದರ್ಭ ಜಾಗರೂರಾಗಿದ್ದು ಸೋಂಕು ತಡೆಗಟ್ಟಲು ಚಿಕಿತ್ಸೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಮನವಿ ಮಾಡಿದ್ದಾರೆ. ಭಾರತದಲ್ಲಿ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿದೆ. ಮಾ.29 ರಂದು 2 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು 3 ಸಾವಿರ ದಾಟಿದೆ. ಇದರ ಜೊತೆಗೆ ಪ್ರಧಾನಿ ಮೋದಿ ಬುಧವಾರ (ಮಾ.29) ಕೇಂದ್ರ ಆರೋಗ್ಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು  ಕೂಡ ನಡೆಸಿದ್ದಾರೆ. ಆರೋಗ್ಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಮೋದಿ ವರದಿಯನ್ನು ನೀಡಿದ್ದಾರೆ. ಕೊರೊನಾ ತಡೆಗಟ್ಟುವಿಕೆ ತೆಗೆದುಕೊಳ್ಳಬೇಕಾ ಕ್ರಮಗಳ ಬಗ್ಗೆಯು ಚರ್ಚೆಯನ್ನು ನಡೆಸಿದ್ದಾರೆ.

ಇದನ್ನೂ ಓದಿ: Ram Navami Fasting Rules: ರಾಮನವಮಿ ಪೂಜೆಯ ಫಲ ಪಡೆಯಲು ಏನು ಮಾಡಬೇಕು? ಉಪವಾಸ ವ್ರತದ ಬಗ್ಗೆ ಮಾಹಿತಿ

ಜೊತೆಗೆ ದೇಶದ ರಾಷ್ಟ್ರಪತಿ ಕೂಡ ದೇಶದ ಜನತೆಗೆ ರಾಮನವಮಿಯ ಶುಭಾಶಯಗಳನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. ದೇಶದ ಸಮಸ್ತ ಜನತೆಗೆ ರಾಮ ನವಮಿಯ ಹೃತ್ಪೂರ್ವಕ ಶುಭಾಶಯಗಳು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ತ್ಯಾಗ ಮತ್ತು ಸೇವೆಯ ಅಮೂಲ್ಯ ಸಂದೇಶವನ್ನು ಈ ಜಗತ್ತಿಗೆ ನೀಡುತ್ತದೆ. ಎಲ್ಲಾ ಭಾರತೀಯರು ಭಗವಾನ್ ರಾಮನ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡು ಭವ್ಯ ಭಾರತವನ್ನು ನಿರ್ಮಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕೆಂದು ಎಂದು ಟ್ವೀಟ್​ ಮಾಡುವ ಮೂಲಕ ಶುಭಾಶಯ ತಿಳಿಸಿದರು.

ಪ್ರೀತಿ ಭಟ್​, ಗುಣವಂತೆ