Ram Navami 2023: ರಾಮನ ಆದರ್ಶ ಗುಣಗಳ ಕುರಿತಾದ ಕವಿತೆ ಮತ್ತು ನಿಮಗೆ ತಿಳಿಯದ ಸಂಗತಿ

ಇಂದು ಮಾರ್ಚ.30 ರಾಮನವಮಿ. ಆದರ್ಶಪುರಷ, ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಜನ್ಮದಿನ. ಭಗವಂತ ಮನುಷ್ಯ ರೂಪದಿಂದ ಬಂದು ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ ಮಹಾಪುರುಷ ಶ್ರೀರಾಮ. ಶ್ರೀ ರಾಮಚಂದ್ರನ ಜೀವನ‌ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ಆತನ ಒಂದಷ್ಟು ಗುಣಗಳನ್ನು ಈ ಭವ್ಯವಾದ ಕವಿತೆಯಲ್ಲಿ ಹೇಳಲಾಗಿದೆ.

Ram Navami 2023: ರಾಮನ ಆದರ್ಶ ಗುಣಗಳ ಕುರಿತಾದ ಕವಿತೆ ಮತ್ತು ನಿಮಗೆ ತಿಳಿಯದ ಸಂಗತಿ
ಶ್ರೀರಾಮ
Follow us
TV9 Web
| Updated By: ವಿವೇಕ ಬಿರಾದಾರ

Updated on: Mar 30, 2023 | 7:00 AM

ಎಲ್ಲರಿಗೂ ಆದರ್ಶ ಪುರುಷ ಮರ್ಯಾದಾ ಪುರುಷೋತ್ತಮ ಸೀತಾಪತಿ ಶ್ರೀರಾಮಚಂದ್ರನ ಜನ್ಮದಿನದ ಶುಭಾಶಯಗಳು. ಇಂದು ಮಾರ್ಚ.30 ರಾಮನವಮಿ (Ramnavami). ಆದರ್ಶಪುರಷ, ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಜನ್ಮದಿನ. ಭಗವಂತ ಮನುಷ್ಯ ರೂಪದಿಂದ ಬಂದು ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ ಮಹಾಪುರುಷ ಶ್ರೀರಾಮ. ಶ್ರೀ ರಾಮಚಂದ್ರನ ಜೀವನ‌ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ಮನುಜ ಕುಲಕ್ಕೆ ರಾಮ ಆದರ್ಶ ಪುರುಷನಾಗಿದ್ದಾನೆ. ಆತನ ಒಂದಷ್ಟು ಗುಣಗಳನ್ನು ಈ ಭವ್ಯವಾದ ಕವಿತೆಯಲ್ಲಿ ಹೇಳಲಾಗಿದೆ.

ಜೈ ಶ್ರೀ ರಾಮ

1. ನಿನ್ನ ಪೂಜಿಸುವ ಭಕ್ತರು ನಾವು ನಿನ್ನ ಚರಣ ಸೇವಕರು ನಾವು ನೀನೆ ನಮಗೆ ಆದರ್ಶಪುರುಷ ನಿನಗೆ ನನ್ನ ಪ್ರಣಾಮಗಳು

2. ಭ್ರಾತೃತ್ವದ ಪ್ರತೀಕ ನೀನು ಪತಿಧರ್ಮ ಪ್ರತಿಪಾದಕ ನೀನು ಸುತ ಕರ್ತವ್ಯದ ಹರಿಕಾರ ನೀನು ನಿನಗೆ ನನ್ನ ಪ್ರಣಾಮಗಳು

3. ಧರ್ಮದ ರಕ್ಷಕನು ನೀನು ಅಧರ್ಮದ ಶಿಕ್ಷಕನು ನೀನು ಭರತ ಖಂಡದ ಒಡೆಯನು ನೀನು ನಿನಗೆ ನನ್ನ ಪ್ರಣಾಮಗಳು

4. ಲಂಕಾ ದಹಿಸಿದ ಹೃದಯ ವಾಸಿಪ ನೀನು ಶಬರಿಯ ಆರಾಧನೆಯ ಪ್ರಭು ನೀನು ಅಯೋಧ್ಯಾ ವಾಸಿಪರ ರಾಜಾರಾಮನು ನೀನು ನಿನಗೆ ನನ್ನ ಪ್ರಣಾಮಗಳು

ಆದರ್ಶ ಪುತ್ರ

ಶ್ರೀರಾಮನು ತಂದೆ-ತಾಯಿಯ ಪ್ರತಿಯೊಂದು ಆಜ್ಞೆಯನ್ನು ಪಾಲಿಸುತ್ತಿದ್ದನು. ಅವರ ಆಜ್ಞೆಯನ್ನು ಕೂಡಲೇ ಕಾರ್ಯಗತಗೊಳಿಸುತ್ತಿದ್ದನು. ಆದ್ದರಿಂದಲೇ ನಾವು ಇಂದಿಗೂ ಶ್ರೀರಾಮನನ್ನು ‘ಆದರ್ಶಪುತ್ರ’ನೆಂದು ಕರೆಯುತ್ತೇವೆ. ಇಂದಿಗೂ ರಾಮ ಆದರ್ಶ‌ ಪುತ್ರನೇ. ಪ್ರತಿ ತಾಯಿ ತನ್ನ ಮಗನಿಗೆ ಈ ಶ್ರೇಷ್ಠ ಗುಣಗಳನ್ನು ಧಾರೆಯೆರೆಯುತ್ತಾಳೆ.

ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂದ ರಾಮ

ರಾಮ ರಾವಣರ ಯುದ್ಧ ಎಲ್ಲರಿಗೂ ಚಿರ-ಪರಿಚಿತ. ರಾವಣನ ಸಂಹಾರವಾದ ನಂತರದಲ್ಲಿ ರಾಜ್ಯ ಪಟ್ಟವನ್ನು ಯಾರಿಗೆ ಕಟ್ಟುತ್ತಾರೆ ಎಂಬ ಸಂದರ್ಭದಲ್ಲಿ ರಾಮನು ಹೇಳಿದ ಮಾತು ಇಂದಿಗೂ ಅನೇಕ ದೇಶ ಭಕ್ತರ ಮಂತ್ರವಾಗಿದೆ.

ಅಪೀ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ| ಜನನೀ ಜನ್ಮ ಭೂಮಿಸ್ಚ ಸ್ವರ್ಗಾದಪೀ ಗರೀಯಸಿ||”

ಲಂಕಾ ಎಷ್ಟೇ ಸ್ವರ್ಣದಿಂದ ಕೂಡಿದ ನಗರಿಯಾಗಿದ್ದರೂ ನನಗೂ ಲಕ್ಷ್ಮಣನಿಗೂ ಲಂಕೆ ಬೇಡ. ನಮಗೆ ತಾಯಿ ಮತ್ತು ತಾಯಿ ನೆಲ ಸ್ವರ್ಗಕ್ಕಿಂತಲೂ ಮಿಗಿಲು. ಇಂತಹ ಅತ್ಯಂತ ಉನ್ನತ ಜೀವನಾದರ್ಶಗಳನ್ನು ರಾಮನು ಸ್ವತಃ ಮನುಷ್ಯನಾಗಿಯೇ ಹುಟ್ಟಿ ಸಾಮಾನ್ಯ ಮನುಷ್ಯರಂತೆ ಬದುಕಿ ಎಲ್ಲರಿಗೂ ತೋರಿಸಿಕೊಟ್ಟರು.

ರಾಮನಾಮ ಜಪದ ಮಹತ್ವ

ರಾಮ ಎನ್ನುವ ಎರಡಕ್ಷರವು ವಿಷ್ಣುವಿನ ಏಳನೇ ಅವತಾರದ ರೂಪ. ರಾಮನಾಮವನ್ನು ಜಪಿಸಿದರೆ ಸಾಕಷ್ಟು ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುವುದು. ಅರಿಯದೆ ಮಾಡಿದ ತಪ್ಪುಗಳು ನಮ್ಮಿಂದ ದೂರವಾಗುತ್ತವೆ. ನಿತ್ಯವೂ ರಾಮ ನಾಮ ಜಪ ಮಾಡಿದರೆ ವ್ಯಕ್ತಿ ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವನು. ಅಲ್ಲದೆ ಆತಂಕ, ಖಿನ್ನತೆಯಂತಹ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ರಾಮನ ನಾಮವು ದೇಹದಲ್ಲಿ ಗಮನಾರ್ಹ ಕಂಪನ ಉಂಟಾಗುವುದು. ಇದು ನಿದ್ರೆಯ ನರ ಕೋಶಗಳನ್ನು ಪ್ರಚೋದಿಸುವುದು.