PM Modi Awas Yojana: ಯೋಜನೆ ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಮಧುರೈನ ಮಹಿಳೆ
ತಮಿಳುನಾಡಿನ ಮಧುರೈ ನಿವಾಸಿ ಎನ್. ಸುಬ್ಬುಲಕ್ಷ್ಮಿ ಎಂಬವರು ತಮಗೆ ಪ್ರಧಾನಿ ಆವಾಸ್ ಯೋಜನೆ ಮೂಲಕ ಮನೆ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರ ಮತ್ತು ಮಹಿಳೆಯ ಫೋಟೊವನ್ನು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಖುಷಿ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಹಲವು ಯೋಜನೆಗಳ ಫಲಾನುಭವಿಗಳು ತಮಗೆ ಹೇಗೆ ಪ್ರಯೋಜನವಾಯಿತು ಎನ್ನುವುದನ್ನು ವಿವರಿಸಿ ಸಾಮಾಜಿಕ ತಾಣಗಳ ಮೂಲಕ ವಿವರಿಸುತ್ತಾರೆ. ಅದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಪರಾಮರ್ಶಿಸಿ, ಸಂದರ್ಭಾನುಸಾರ ಪ್ರಸ್ತಾಪಿಸುತ್ತಾರೆ. ಅದರಂತೆ ಈ ಬಾರಿ ತಮಿಳುನಾಡಿನ ಮಧುರೈ ನಿವಾಸಿ ಎನ್. ಸುಬ್ಬುಲಕ್ಷ್ಮಿ ಎಂಬವರು ತಮಗೆ ಪ್ರಧಾನಿ ಆವಾಸ್ ಯೋಜನೆ ಮೂಲಕ ಮನೆ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರ ಮತ್ತು ಮಹಿಳೆಯ ಫೋಟೊವನ್ನು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಖುಷಿ ಹಂಚಿಕೊಂಡಿದ್ದಾರೆ.