ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅ.20) ಉತ್ತರ ಪ್ರದೇಶದಲ್ಲಿ ಭಾರತದ ಮೊದಲ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ‘ನಮೋ ಭಾರತ್’ಗೆ (‘Namo Bharat’) ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಉತ್ತರ ಪ್ರದೇಶದ ಸಾಹಿಬಾಬಾದ್ ಮತ್ತು ದುಹೈ ಡಿಪೋ ನಿಲ್ದಾಣಗಳನ್ನು ಸಂಪರ್ಕಿಸುವ ರೈಲನ್ನು ಪ್ರಧಾನಿ ಉದ್ಘಾಟಿಸಿದರು. ಭಾರತ ಐತಿಹಾಸಿಕ ಹೆಜ್ಜೆಯನ್ನು ರೈಲು ಕ್ಷೇತ್ರ ಮಾಡಿದೆ. ‘ನಮೋ ಭಾರತ್’ ಒಂದು ಪರಿವರ್ತನೆಯ ಪ್ರಾದೇಶಿಕ ಅಭಿವೃದ್ಧಿ ಸಾಧನೆಯಾಗಿದ್ದು, ಇಂಟರ್‌ಸಿಟಿ ಪ್ರಯಾಣವನ್ನು ಹೆಚ್ಚಿಸಲು ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿದೆ.
ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನ 17 ಕಿಲೋಮೀಟರ್ ಉದ್ದದ ರೈಲು ಸೇವೆಯ ಮೊದಲ ಹಂತ ಸಿದ್ಧವಾಗಿದ್ದು, ಈ ರೈಲಿಗೆ ‘ನಮೋ ಭಾರತ್’ ಎಂದು ಹೆಸರಿಡಲಾಗಿದೆ. ಇನ್ನು ಈ ರೈಲಿಗೆ 30,274 ಕೋಟಿ ರೂ. ವೆಚ್ಚ ವ್ಯಯ ಮಾಡಲಾಗಿದೆ. ಈ ಯೋಜನೆಯನ್ನು 82 ಕಿಲೋಮೀಟರ್ ಉದ್ದವಿದ್ದು. ಇದು ದೆಹಲಿಯ ಸರಾಯ್ ಕಾಲೇ ಖಾನ್ ನಿಲ್ದಾಣದಿಂದ ಮೀರತ್‌ನ ಮೋದಿಪುರಂವರೆಗೆ ವಿಸ್ತರಿಸಲಿದೆ ಎಂದು ಹೇಳಲಾಗಿದೆ. ರಾಪಿಡ್ ಎಕ್ಸ್ ರೈಲು 55-60 ನಿಮಿಷಗಳಲ್ಲಿ ದೆಹಲಿಯಿಂದ ಮೀರತ್ಗೆ ತಲುಪುತ್ತದೆ. ಇದು ಸಮಯವನ್ನು ಕೂಡ ಉಳಿಸುತ್ತದೆ. ಈ ಹಿಂದೆ ಮೇಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಮಾರ್ಗಕ್ಕೆ ಒಂದೂವರೆ ಗಂಟೆ ಹಾಗೂ ಮೀರತ್ ಮತ್ತು ದೆಹಲಿ ನಡುವೆ ಸ್ಥಳೀಯ ರೈಲಿನಲ್ಲಿ 2 ಗಂಟೆಗಳ ಪ್ರಯಾಣ ಮಾಡಬೇಕಿತ್ತು. ಆದರೆ ಈ ಪ್ರಯಣದ ಸಮಯವನ್ನು ಕಡಿಮೆ ಮಾಡಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರ ಮನ್ ಕಿ ಬಾತ್ನ 102ನೇ ಸಂಚಿಕೆ ಜೂನ್ 18ರಂದು ಪ್ರಸಾರ
#WATCH | Sahibabad, Uttar Pradesh | Prime Minister Narendra Modi inspects the priority section project of Delhi-Ghaziabad-Meerut RRTS Corridor through a VR headset.
He inaugurated the priority section of Delhi-Ghaziabad-Meerut RRTS Corridor and flag off RapidX train – ‘NaMo… pic.twitter.com/pX7zUFP25O
— ANI (@ANI) October 20, 2023
‘ನಮೋ ಭಾರತ್’ನಲ್ಲಿ ನಾಳೆಯಿಂದಲ್ಲೇ ಪ್ರಯಾಣಿಸಬಹುದು. ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವೆ 5 ನಿಲ್ದಾಣಗಳನ್ನು ಹೊಂದಿದೆ. ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋ. ಇನ್ನು ಈ ರೈಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ತುರ್ತು ಬಾಗಿಲು ತೆರೆಯುವ ಕಾರ್ಯವಿಧಾನ ಮತ್ತು ರೈಲು ನಿರ್ವಾಹಕರೊಂದಿಗೆ ಸಂವಹನ ನಡೆಸಲು ಬಟನ್ ವ್ಯವಸ್ಥೆಗಳು ಹಾಗೂ ಎಲ್ಲ ಸುರಕ್ಷತಾ ಕ್ರಮಗಳು ಇದೆ ಎಂದು ಹೇಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Fri, 20 October 23