ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಡಿಜಿಟಲ್ ಆರೋಗ್ಯ ಮಿಷನ್ಗೆ ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಜಿಟಲ್ ಆರೋಗ್ಯ ಮಿಷನ್ ಲೋಕಾರ್ಪಣೆಗೊಂಡಿದೆ. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. 2020 ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ಭಾಷಣ ಮಾಡುವಾಗ ರಾಪ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಯನ್ನು ಪ್ರಧಾನಿ ಪ್ರಕಟ ಮಾಡಿದ್ದರು. ಇಂದು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.
ಪ್ರತಿಯೊಬ್ಬ ಭಾರತದ ಪ್ರಜೆಗೂ ಈ ಯೋಜನೆಯ ಅಡಿಯಲ್ಲಿ ಆರೋಗ್ಯ ಗುರುತಿನ ಚೀಟಿಯನ್ನು ನೀಡಲಾಗುವುದು. ಇದು ಜಾರಿಗೆ ಬರುವುದರಿಂದ ಪ್ರತಿಯೊಬ್ಬನೂ ಕೂಡಾ ಆರೋಗ್ಯದ ಕುರಿತಾದ ದಾಖಲೆಗಳು, ವೈದ್ಯರು ಮತ್ತು ಆರೋಗ್ಯ ಸೇವೆಗಳ ಕುರಿತಾಗಿ ಡಿಜಿಟಲ್ ರೂಪದಲ್ಲಿ ಮಾಹಿತಿಯನ್ನು ಪಡೆಯಬಹುದು.
ಪ್ರಧಾನ ಮಂತ್ರಿ ಡಿಜಿಟಲ್ ಹೆಲ್ತ್ ಯೋಜನೆಯನ್ನು ಇಂದು ರಾಷ್ಟ್ರವ್ಯಾಪಿ ಬಿಡುಗಡೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಲಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಜನರಿಗೆ ಡಿಜಿಟಲ್ ಹೆಲ್ತ್ ಐಡಿಯನ್ನು ನೀಡಲಾಗುತ್ತದೆ. ಇದು ಪ್ರತಿಯೊಬ್ಬನ ಎಲ್ಲಾ ಆರೋಗ್ಯ ದಾಖಲೆಗಳನ್ನು ಒಳಗೊಂಡಿರುತ್ತದೆ.
ಡಿಜಿಟಲ್ ಆರೋಗ್ಯ ಮಿಷನ್
ಜನ ಧನ್, ಆಧಾರ್, ಮೊಬೈಲ್ ಮತ್ತು ಸರ್ಕಾರದ ಇನ್ನಿತರ ಡಿಜಿಟಲ್ ಉಪಕ್ರಮಗಳ ಅಧಾರದ ಮೇಲೆ ಡಿಜಿಟಲ್ ಆರೋಗ್ಯ ಮಿಷನ್ ವ್ಯಾಪಕ ಶ್ರೇಣಿಯ ದತ್ತಾಂಶ ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ತಡೆರಹಿತ ಆನ್ಲೈನ್ ವೇದಿಕೆಯನ್ನು ಒದಗಿಸಲಿದೆ. ಇದರ ಜತೆಗೆ ಮೂಲಸೌಕರ್ಯ ಸೇವೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ಸುರಕ್ಷತೆ, ಗೌಪ್ಯತೆ ಮತ್ತು ಗೌಪ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮುಕ್ತವಾಗಿ, ಪರಸ್ಪರ ಕಾರ್ಯ ನಿರ್ವಹಿಸುವ, ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಜತೆಗೆ ಈ ಡಿಜಿಟಲ್ ಆರೋಗ್ಯ ಮಿಷನ್ ನಾಗರಿಕ ಒಪ್ಪಿಗೆಯೊಂದಿಗೆ ಆರೋಗ್ಯದ ದಾಖಲೆಗಳನ್ನು ಪಡೆಯಲು ಸಕ್ರಿಯಗೊಳಿಸಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಐಡಿಯನ್ನು ನೀಡಲಾಗುತ್ತದೆ. ಇದು ಅವರ ಆರೋಗ್ಯ ಖಾತೆಯಾಗಿಯೂ ಕೆಲಸ ಮಾಡುತ್ತದೆ. ಇದಕ್ಕೆ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಶನ್, ಹೆಲ್ತ್ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ (HPR) ಮತ್ತು ಲಿಂಕ್ ಮೂಲಕ ನೋಡಬಹುದು. ಹೆಲ್ತ್ಕೇರ್ ಫೆಸಿಲಿಟಿ ರಿಜಿಸ್ಟ್ರಿ (HFR) ಆಧುನಿಕ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿ ಎಲ್ಲಾ ಆರೋಗ್ಯ ಸೇವಾ ಪೂರೈಕೆದಾರರ ಭಂಡಾರವಾಗಿ ಕಾರ್ಯ ನಿರ್ವಹಿಸಲಿದೆ.
ಇದು ಆಸ್ಪತ್ರೆಗಳು, ವೈದ್ಯರು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ಸುಲಭವಾಗಿ ವ್ಯವಹಾರವನ್ನು ಖಚಿತಪಡಿಸುವಲ್ಲಿ ನೆರವಾಗುತ್ತದೆ. PM-DHM ಸ್ಯಾಂಡ್ ಬಾಕ್ಸ್ಅನ್ನು ಮಿಷನ್ನ ಒಂದು ಭಾಗವಾಗಿ ರಚಿಸಲಾಗಿದೆ. ಇದು ತಂತ್ರಜ್ಞಾನ ಮತ್ತು ಉತ್ಪನ್ನ ಪರೀಕ್ಷೆಯ ಚೌಕಟ್ಟಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಖಾಸಗಿ ಪಾಲುದಾರರು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೂ ಸಹಾಯ ಮಾಡಲಿದೆ. ನಾಗರಿಕರು ಆರೋಗ್ಯ ಸೌಲಭ್ಯಗಳನ್ನು ಪ್ರವೇಶಿಸಲು ಕೇವಲ ಒಂದು ಕ್ಲಿಕ್ ಮಾಡುವಷ್ಟು ದೂರದಲ್ಲಿರುತ್ತಾರೆ.
ಡಿಜಿಟಲ್ ಆರೋಗ್ಯ ಮಿಷನ್ ಅನುಕೂಲಗಳು
ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಕ್ಷಣದಲ್ಲಿ ಪಡೆಯಬಹುದು
ಆಸ್ಪತ್ರೆಗೆ ದಾಖಲಾಗುವುದರಿಂದ ಡಿಸ್ಚಾರ್ಜ್ ಆಗುವವರೆಗಿನ ಸಂಪೂರ್ಣ ಮಾಹಿತಿ ಸಂಗ್ರಹವಾಗಿರುತ್ತದೆ
ಒಂದು ವೈದ್ಯರಲ್ಲಿ ಪರಿಶೀಲಿಸಿದ ಬಳಿಕ ಇನ್ನೊಬ್ಬ ವೈದ್ಯರನ್ನು ಬೇಟಿಯಾದಾಗ ನಿಮ್ಮ ಡಿಜಿಟಲ್ ಹೆಲ್ತ್ ಕಾರ್ಡ್ ಮೂಲಕ ಸುಲಭದಲ್ಲಿ ಆರೋಗ್ಯದ ವಿವರಗಳನ್ನು ವೈದ್ಯರು ಪಡೆಯಲು ಸಹಾಯವಾಗುತ್ತದೆ
ಆರೋಗ್ಯ ಮಿಷನ್ ಕಾರ್ಡ್ ಮಾಡಿಸಲು ಬೇಕಾದ ಮಾಹಿತಿ
ಆಧಾರ್ ಕಾರ್ಡ್ ಮೂಲಕ ಗುರುತಿನ ಚೀಟಿಯನ್ನು ಪಡೆಯಬಹುದು. ಇದಕ್ಕೆ ಆಧಾರ್ ಮಾಹಿತಿಯನ್ನೇ ನೀಡಬೇಕು ಮತ್ತು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಗತ್ಯ. ಪ್ರತಿ ವ್ಯಕ್ತಿಯು ಗುರುತಿನ ಸಂಖ್ಯೆಯ ಜತೆ ಡಿಜಿಟಲ್ ಆರೋಗ್ಯ ಯೋಜನೆಗೆ ಲಿಂಕ್ ಮಾಡಿಕೊಳ್ಳಬೇಕು.
ಸದ್ಯದ ಮಾಹಿತಿಯ ಪ್ರಕಾರ ಆರೋಗ್ಯ ಸೇವೆಗಳನ್ನು ನೀಡುವ ಸಂಸ್ಥೆಗಳು ಅಥವಾ ಆಸ್ಪತ್ರೆಗಳು ಈ ಡಿಜಿಟಲ್ ಹೆಲ್ತ್ ಕಾರ್ಡ್ (ಗುರುತಿನ ಚೀಟಿ) ನೀಡಲಿವೆ. ಉಚಿತವಾದ ಸೌಲಭ್ಯ ಇದಾಗಿದ್ದು, ನಾಗರಿಕರು ತಮ್ಮ ಇಚ್ಛೆಯ ಮೇರೆಗೆ ಇದನ್ನು ಪಡೆಯಬಹುದು.
ಇದನ್ನೂ ಓದಿ:
ಟಿವಿ9 ಡಿಜಿಟಲ್ ವಿಶೇಷ: ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ
(PM MODI Launched national digital health mission on today 2021 september 27)
Published On - 8:53 am, Mon, 27 September 21