ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ (Ram Lala Pran Pratistha) ನೆರವೇರಲಿದೆ. ಈಗಾಗಲೇ ಎಲ್ಲ ಸಿದ್ದತೆಗಳನ್ನು ರಾಮಜನ್ಮ ಭೂಮಿ ಟ್ರಸ್ಟ್ ನಡೆಸಿದೆ. ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಮನ ಜಪ ಈಡಿ ದೇಶದಲ್ಲಿ ಹಬ್ಬಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಕರ್ನಾಟಕದ ಮೈಸೂರಿನ ಶಿಲ್ಪಿ ಕೆತ್ತಿದ ಮೂರ್ತಿಯೇ ಫೈನಲ್ ಆಗಿದ್ದು ಇದು ಇನ್ನು ವಿಶೇಷವಾಗಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (NarendraModi) ಅವರು ಅಯೋಧ್ಯೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ಹಾಗೂ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರ ನಡುವೆ ಮೋದಿ ಅವರು ಒಂದು ವಿಶೇಷ ವಿಚಾರವೊಂದನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರಾಮಲಲ್ಲಾನ್ನು ಅಯೋಧ್ಯೆಗೆ ಸ್ವಾಗತಿಸುವ ಹಾಡೊಂದನ್ನು ಮೋದಿ ಅವರು ಹಂಚಿಕೊಂಡಿದ್ದಾರೆ. ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಸ್ವಾತಿ ಮಿಶ್ರಾ ಅವರ ರಾಮ್ ಆಯೇಂಗೆ.. ಆಯೇಂಗೆ ಎಂಬ ಹಾಡಿಗೆ ಪ್ರಧಾನಿ ಮೋದಿ ಫಿದಾ ಆಗಿದ್ದಾರೆ
ಈ ಹಾಡು ಎಲ್ಲರನ್ನೂ ಒಂದು ಬಾರಿ ಮಂತ್ರಮುಗ್ಧಗೊಳಿಸುತ್ತದೆ ಎಂದು ಹೇಳಿದ್ದಾರೆ. ಹಾಡಿನ ಯೂಟ್ಯೂಬ್ ಲಿಂಕ್ನ್ನು ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀ ರಾಮಲಲ್ಲಾ ಅವರನ್ನು ಸ್ವಾಗತಿಸುವ ಸ್ವಾತಿ ಮಿಶ್ರಾ ಜಿಯವರ ಈ ಭಕ್ತಿ ಭಜನೆ ಮಂತ್ರಮುಗ್ಧಗೊಳಿಸುತ್ತದೆ ಎಂದು ಎಕ್ಸ್ನಲ್ಲಿ ಮೋದಿ ಬರೆದುಕೊಂಡಿದ್ದಾರೆ.
श्री राम लला के स्वागत में स्वाति मिश्रा जी का भक्ति से भरा यह भजन मंत्रमुग्ध करने वाला है…#ShriRamBhajanhttps://t.co/g2u1RhPpqO
— Narendra Modi (@narendramodi) January 3, 2024
ಸ್ವಾತಿ ಮಿಶ್ರಾ ಬಿಹಾರದ ಮೂಲದವರು, ಖ್ಯಾತ ಹಾಡುಗಾರ್ತಿಯಾಗಿರುವ ಸ್ವಾತಿ ಮಿಶ್ರಾ, ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಅನೇಕ ಇಂತಹ ಭಕ್ತಿಗೀತೆಗಳನ್ನು ಹಂಚಿಕೊಂಡಿದ್ದಾರೆ. ಇವರ ಹಲವು ಹಾಡುಗಳು ಭಾರೀ ವೈರಲ್ ಆಗಿವೆ. ಇದೀಗ ಅಯೋಧ್ಯೆ ರಾಮಮಂದಿರಕ್ಕೆ ರಾಮಲಲ್ಲಾನ್ನು ಸ್ವಾಗತಿಸುವ ಹಾಡನ್ನು ಹಾಡಿದ್ದಾರೆ. ಇದನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಾವಿರ ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ, ಭೂಕಂಪಕ್ಕೂ ಅಲ್ಲಾಡಲ್ಲ ರಾಮ ಮಂದಿರ
ಸ್ವಾತಿ ಮಿಶ್ರಾ ಸದ್ಯ ಮುಂಬೈನಲ್ಲಿದ್ದು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ರಾಮಲಲ್ಲಾನ ಬಗ್ಗೆ ಹಾಡಿರುವ ಈ ಹಾಡು ಅಷ್ಟೊಂದು ವೈರಲ್ ಆಗಿರಲಿಲ್ಲ, ಆದರೆ ಇದೀಗ ಭಾರೀ ವೈರಲ್ ಆಗಿದೆ. ಇದನ್ನು ಪ್ರಧಾನಿ ಮೋದಿ ಕೂಡ ಹಂಚಿಕೊಂಡಿರುವುದು ಇನ್ನು ವಿಶೇಷವಾಗಿದ್ದು, ಇದರಿಂದ ಸ್ವಾತಿ ಮಿಶ್ರಾ ಅವರಿಗೆ ಮತ್ತಷ್ಟು ಪೋತ್ಸಾಹ ನೀಡಿದ್ದಂತಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ