AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayodhya Temple: ಸಾವಿರ ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ, ಭೂಕಂಪಕ್ಕೂ ಅಲ್ಲಾಡಲ್ಲ ರಾಮ ಮಂದಿರ

ಉತ್ತರ ಪ್ರದೇಶದ ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಬಗ್ಗೆ ಹೊಸ ಮಾಹಿತಿ ಲಭ್ಯವಾಗಿದೆ. ಇದಕ್ಕೆ 1000 ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ ಭೂಕಂಪಕ್ಕೂ ಅಲುಗಾಡುವುದಿಲ್ಲ ಎಂದು ಹೇಳಲಾಗುತ್ತಿದೆ.  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರ ಪ್ರಕಾರ, ಈ ದೇವಾಲಯವು 6.5 ತೀವ್ರತೆಯ ಭೂಕಂಪವನ್ನು ಸಹ ಸುಲಭವಾಗಿ ತಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

Ayodhya Temple: ಸಾವಿರ ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ, ಭೂಕಂಪಕ್ಕೂ ಅಲ್ಲಾಡಲ್ಲ ರಾಮ ಮಂದಿರ
ರಾಮ ಮಂದಿರ
ನಯನಾ ರಾಜೀವ್
|

Updated on:Jan 29, 2024 | 10:14 AM

Share

ಉತ್ತರ ಪ್ರದೇಶದ ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಬಗ್ಗೆ ಹೊಸ ಮಾಹಿತಿ ಲಭ್ಯವಾಗಿದೆ, ಇದಕ್ಕೆ 1000 ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ ಭೂಕಂಪಕ್ಕೂ ಅಲುಗಾಡುವುದಿಲ್ಲ ಎಂದು ಹೇಳಲಾಗುತ್ತಿದೆ.  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರ ಪ್ರಕಾರ, ಈ ದೇವಾಲಯವು 6.5 ತೀವ್ರತೆಯ ಭೂಕಂಪವನ್ನು ಸಹ ಸುಲಭವಾಗಿ ತಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಭವ್ಯ ಮಂದಿರ ರೂಪುಗೊಂಡಿದೆ. ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜನವರಿ 22, 2024 ರಂದು ದೇವಾಲಯದ ಶಂಕುಸ್ಥಾಪನೆಗೆ ಮುನ್ನ ಸಿದ್ಧತೆಗಳನ್ನು ಅಂತಿಮಗೊಳಿಸಲಾಗುತ್ತಿದೆ.

ರಾಮ ಜನ್ಮಭೂಮಿ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2019 ರಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ಇದಾದ ನಂತರ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಿತು ಮತ್ತು ರಾಮಮಂದಿರ ನಿರ್ಮಾಣಕ್ಕೆ ಯೋಜನೆಯನ್ನು ಸಿದ್ಧಪಡಿಸಿತು. ಟ್ರಸ್ಟ್ ವತಿಯಿಂದಲೇ ಸಿದ್ಧಗೊಳ್ಳುತ್ತಿರುವ ದೇವಾಲಯವನ್ನು ನೋಡಿ ಎಲ್ಲರಿಗೂ ಹೆಮ್ಮೆಯಾಗುತ್ತದೆ.

ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ದೇವಾಲಯವು ಮುಖ್ಯವಾಗಿ ಗುಲಾಬಿ ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ರಾಜಸ್ಥಾನದ ಮಿರ್ಜಾಪುರ ಮತ್ತು ಬನ್ಸಿ-ಪಹಾರ್ಪುರದಿಂದ ಕೆತ್ತಲಾದ ಅಮೃತಶಿಲೆಯಾಗಿದೆ.

ಮತ್ತಷ್ಟು ಓದಿ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ; 6,000 ಮಂದಿಗೆ ಆಮಂತ್ರಣ

ಸ್ತಂಭಗಳ ದಪ್ಪವನ್ನು ಹೆಚ್ಚಿಸಿ, ಗೋಡೆಗಳ ಮೇಲೆ ಭಾರವಾದ ಕಲ್ಲುಗಳನ್ನು ಅಳವಡಿಸಿದ್ದೇವೆ, ದೇವಾಲಯದ ಅಡಿಪಾಯವನ್ನು ಭಾರವಾದ ಕಲ್ಲುಗಳಿಂದ ಅತ್ಯಂತ ಗಟ್ಟಿಗೊಳಿಸಲಾಗಿದೆ ಎಂದು ದೇವಾಲಯದ ನಿರ್ಮಾಣ ಸಂಸ್ಥೆ ಎಲ್ ಆ್ಯಂಡ್​ ಟಿ ಯೋಜನಾ ನಿರ್ದೇಶಕ ವಿನೋದ್ ಕುಮಾರ್ ಮೆಹ್ತಾ ಹೇಳಿದ್ದಾರೆ.

ಇದು ಭೂಕಂಪದ ಸಮಯದಲ್ಲಿ ದೃಢವಾಗಿ ನಿಲ್ಲುವಂತೆ ಮತ್ತು ಯಾವುದೇ ಹಾನಿಯಾಗದಂತೆ ಅದನ್ನು ಬಲಪಡಿಸಲಾಗಿದೆ. ದೇವಾಲಯದ ಅಡಿಪಾಯವು 50 ಅಡಿ ಆಳದಲ್ಲಿದೆ ಮತ್ತು ಕಲ್ಲು, ಸಿಮೆಂಟ್ ಮತ್ತು ಇತರ ವಸ್ತುಗಳಿಂದ ಮಾಡಲ್ಪಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5, 2020 ರಂದು ದೇವಾಲಯದ ಶಂಕುಸ್ಥಾಪನೆ ಮಾಡಿದ್ದರು. ದೇವಾಲಯದಲ್ಲಿ ಒಟ್ಟು 17000 ಗ್ರಾನೈಟ್ ಕಲ್ಲುಗಳನ್ನು ಬಳಸಲಾಗುತ್ತಿದ್ದು, ಪ್ರತಿಯೊಂದೂ 2 ಟನ್ ತೂಕವಿದೆ.

ಇದಲ್ಲದೇ ರಾಜಸ್ಥಾನದ ಬನ್ಸಿ ಪಹಾರ್‌ಪುರದಿಂದ ತಂದಿದ್ದ ಅಮೃತಶಿಲೆಯನ್ನು ಬಳಸಲಾಗಿದೆ. ಪ್ರಸ್ತುತ 21 ಲಕ್ಷ ಘನ ಅಡಿಗಳಷ್ಟು ಗ್ರಾನೈಟ್, ಮರಳು ಕಲ್ಲು ಮತ್ತು ಅಮೃತಶಿಲೆಯನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗುತ್ತಿದೆ. 162 ಕಂಬಗಳು ಸಿದ್ಧವಾಗಿವೆ. ಈ ಪೈಕಿ ಕೇರಳ ಮತ್ತು ರಾಜಸ್ಥಾನದ ಕಲಾವಿದರು 4500 ಶಿಲ್ಪಗಳನ್ನು ತಯಾರಿಸುತ್ತಿದ್ದಾರೆ. ಈ ದೇವಾಲಯವು ಭೇಟಿ ನೀಡುವ ಭಕ್ತರಿಗೆ ತ್ರೇತಾಯುಗದ ಅನುಭವವನ್ನು ನೀಡುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Tue, 12 December 23