ಹೈದರಾಬಾದ್, ಮಾ.4: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತೆಲಂಗಾಣದಲ್ಲಿ 62,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇಂದು ಮೋದಿ ಅವರು 29 ಯೋಜನೆಗಳ ಉದ್ಘಾಟನೆ ಹಾಗೂ ಶುಂಕಸ್ಥಾಪನೆ ಮಾಡಿದ್ದಾರೆ. ಪ್ರಧಾನಿ ಅವರು ಮುಂದಿನ 10 ದಿನಗಳ ಕಾಲ 12 ರಾಜ್ಯಗಳಿಗೆ ಪ್ರವಾಸ ಮಾಡಲಿದ್ದಾರೆ. ಇದೀಗ ಮೊದಲ ಭೇಟಿಯನ್ನು ತೆಲಂಗಾಣಕ್ಕೆ ನೀಡಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಎಲ್ಲ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅಲ್ಲಿನ ಬಿಜೆಪಿ ಮುಖಂಡರ ಜತೆಗೆ ಮಾತುಕತೆ ಕೂಡ ನಡೆಸಲಿದ್ದಾರೆ. ಇನ್ನು ಮೋದಿ ಅವರು 62,000 ಕೋಟಿ ರೂ. ಗೂ ಹೆಚ್ಚು ಮೌಲ್ಯದ ವಿದ್ಯುತ್, ರೈಲು ಮತ್ತು ರಸ್ತೆ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಲವು ವರ್ಷಗಳಿಂದ ತೆಲಂಗಾಣ ಅಜ್ಞಾನದ ವಿಚಾರಕ್ಕೆ ಬಲಿಪಶುವಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರವು ತೆಲಂಗಾಣದ ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ ಎಂದು ಹೇಳಿದ್ದಾರೆ. ಇಂದು, ಆದಿಲಾಬಾದ್, ಬೇಲಾ ಮತ್ತು ಮುಲುಗುನಲ್ಲಿ ಎರಡು ಹೊಸ ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆ ಸಮಾರಂಭವೂ ನಡೆಯಿತು. ಈ ಆಧುನಿಕ ರಸ್ತೆ ಮತ್ತು ರೈಲು ಮೂಲಸೌಕರ್ಯಗಳು ತೆಲಂಗಾಣವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದರು.
ಇಡೀ ಜಗತ್ತು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಮಾತನಾಡುತ್ತಿದೆ. ಕಳೆದ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ಬೆಳವಣಿಗೆ ಕಂಡಿರುವ ವಿಶ್ವದ ಏಕೈಕ ದೇಶ ಭಾರತವಾಗಿದೆ. ಶೀಘ್ರದಲ್ಲೇ, ನಮ್ಮ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ಹೇಳಿದರು. ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಮತ್ತು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಭಾಗವಹಿಸಿದರು.
#WATCH | Telangana: Prime Minister Narendra Modi inaugurates and lays the foundation stone of multiple development projects worth more than Rs 56,000 crores in Adilabad. pic.twitter.com/VLEQRba9nq
— ANI (@ANI) March 4, 2024
ಪ್ರಧಾನಿ ಮೋದಿ ಅವರು ಪೆದ್ದಪಲ್ಲಿಯಲ್ಲಿ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್‌ನ ಎನ್‌ಟಿಪಿಸಿಯ 800 ಮೆಗಾವ್ಯಾಟ್ (ಯುನಿಟ್ -2)ನ್ನು ಉದ್ಘಾಟಿಸಿದರು. ಅಲ್ಟ್ರಾ-ಸೂಪರ್ಕ್ರಿಟಿಕಲ್ ತಂತ್ರಜ್ಞಾನದ ಅಡಿಯಲ್ಲಿ ತೆಲಂಗಾಣಕ್ಕೆ 85 ಪ್ರತಿಶತದಷ್ಟು ವಿದ್ಯುತ್ ಪೂರೈಕೆಯಾಗುತ್ತದೆ. ಭಾರತದ NTPC ಯ ಎಲ್ಲಾ ವಿದ್ಯುತ್ ಕೇಂದ್ರಗಳಲ್ಲಿ ಸರಿಸುಮಾರು 42 ಪ್ರತಿಶತದಷ್ಟು ವಿದ್ಯುತ್ ಉತ್ಪಾದನೆಯ ದಕ್ಷತೆಯನ್ನು ಹೊಂದಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಸಂಸದರು, ಶಾಸಕರು ಲಂಚ ಪಡೆದರೆ ಯಾವುದೇ ರಕ್ಷಣೆ ಇಲ್ಲ: 1998ರ ತೀರ್ಪು ರದ್ದು ಮಾಡಿದ ಸುಪ್ರೀಂ
ಜತೆಗೆ ಮೋದಿ ಅವರು ಹೊಸದಾಗಿ ವಿದ್ಯುದೀಕರಣಗೊಂಡ ಅಂಬಾರಿ-ಅದಿಲಾಬಾದ್-ಪಿಂಪಲ್ಖುತಿ ರೈಲು ಮಾರ್ಗವನ್ನು ಸಹ ಉದ್ಘಾಟಿಸಿದರು. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಮತ್ತು ತೆಲಂಗಾಣದಿಂದ ಛತ್ತೀಸ್‌ಗಢದೊಂದಿಗೆ NH-353B ಮತ್ತು NH-163 ಮೂಲಕ ಸಂಪರ್ಕ ಸಾಧಿಸುವ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮೋದಿ ಅವರು ಅಡಿಪಾಯ ಹಾಕಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Mon, 4 March 24