ಚುನಾವಣೆ ಹೊಸ್ತಿಲಲ್ಲಿ ಟಿಎಂಸಿಗೆ ಆಘಾತ: ಮಮತಾ ಬ್ಯಾನರ್ಜಿ ನೃತೃತ್ವದ ಪಕ್ಷ ತೊರೆದ ಶಾಸಕ ತಪಸ್​ ರಾಯ್​

ಮುಂಬರುವ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ತಯಾರಿಯಲ್ಲಿ ನಿರತವಾಗಿವೆ. ಈ ನಡುವೆ ಪಶ್ಚಿಮ ಬಂಗಾಳದ ರಾಜಕೀಯವೂ ಬಿಸಿ ಏರಿದೆ. ತೃಣಮೂಲ ಕಾಂಗ್ರೆಸ್‌ನ ದೊಡ್ಡ ಮುಖ ಎಂದು ಪರಿಗಣಿಸಲಾದ ನಾಯಕ ತಪಸ್ ರಾಯ್ ರಾಜೀನಾಮೆ ನೀಡಿದ್ದಾರೆ. ಳೆದ ಕೆಲವು ದಿನಗಳಲ್ಲಿ ತಪಸ್ ರಾಯ್ ಅವರ ಅಸಮಾಧಾನವೂ ಹಲವೆಡೆ ಮುನ್ನೆಲೆಗೆ ಬಂದಿದೆ.

ಚುನಾವಣೆ ಹೊಸ್ತಿಲಲ್ಲಿ ಟಿಎಂಸಿಗೆ ಆಘಾತ: ಮಮತಾ ಬ್ಯಾನರ್ಜಿ ನೃತೃತ್ವದ ಪಕ್ಷ ತೊರೆದ ಶಾಸಕ ತಪಸ್​ ರಾಯ್​
ತಪಸ್​ ರಾಯ್​
Follow us
ನಯನಾ ರಾಜೀವ್
|

Updated on: Mar 04, 2024 | 2:11 PM

ಲೋಕಸಭಾ ಚುನಾವಣೆ(Lok Sabha Election) ಹೊಸ್ತಿಲಿನಲ್ಲಿ ಟಿಎಂಸಿ(TMC)ಗೆ ದೊಡ್ಡ ಹೊಡೆತ ಬಿದ್ದಿದೆ, ತೃಣಮೂಲ ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ಶಾಸಕ ತಪಸ್​ ರಾಯ್(Tapas Roy)​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ‘‘ನಾನು ಟಿಎಂಸಿ ಶಾಸಕ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ಸ್ಪೀಕರ್​ಗೆ ಸಲ್ಲಿಸಿದ್ದೇನೆ’’ ಎಂದು ತಪಸ್​ ಹೇಳಿದ್ದಾರೆ. ಬಿಜೆಪಿಗೆ ಸೇರಬಹುದು ಎನ್ನುವ ಊಹಾಪೋಹಗಳೆದ್ದಿದೆ. ಜನವರಿ ತಿಂಗಳಿನಲ್ಲಿ ಪಿಡಿಎಸ್​ ಹಗರಣದಲ್ಲಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಸುಮಾರು 10 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು.

ಜಾರಿ ನಿರ್ದೇಶನಾಲಯ ದಾಳಿ ನಡೆಸಿ 52 ದಿನಗಳು ಕಳೆದಿವೆ, ಆದರೆ ಇಲ್ಲಿಯವರೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಬೆಂಬಲಕ್ಕೆ ನಿಂತಿಲ್ಲ, ನನ್ನ ಪರವಾಗಿ ಒಂದೇ ಮಾತು ಆಡಿಲ್ಲ, ಇತರೆ ನಾಯಕರ ಮನೆ ಮೇಲೂ ದಾಳಿ ನಡೆದಿತ್ತು ಆಗ ಅವರು ಆ ನಾಯಕರ ಪರವಾಗಿ ನಿಂತಿದ್ದರು ಎಂದು ಹೇಳಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದ ತಪಸ್​ ರಾಯ್  ಅವರಿಗೆ ಮಮತಾ ಬ್ಯಾನರ್ಜಿ ಸಚಿವ ಸ್ಥಾನ ನೀಡಿದ್ದರು. ಆದರೆ ಕೆಲವು ದಿನಗಳ ನಂತರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 2001, 2011, 2016 ಮತ್ತು 2021 ವರ್ಷಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯರಾಗಿದ್ದರು.

ಮತ್ತಷ್ಟು ಓದಿ: PM Modi in West Bengal: ಟಿಎಂಸಿ ಎಂದರೆ ‘ತು, ಮೇ ಔರ್ ಕರಪ್ಶನ್’; ಬಂಗಾಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಕೆಲವು ದಿನಗಳ ಹಿಂದೆಯೂ ತೃಣಮೂಲ ಕಾಂಗ್ರೆಸ್​ ಉತ್ತರ ಕೋಲ್ಕತ್ತಾದ ಜಿಲ್ಲಾಧ್ಯಕ್ಷ ಸ್ಥಾನದಿಂದ ತಪಸ್​ ರಾಯ್ ಅವರನ್ನು ತೆಗೆದುಹಾಕಿತ್ತು. ತಪಸ್​ ರಾಯ್ ನಮ್ಮ ಮನೆ ಮೇಲೆ ಇಡಿ ದಾಳಿ ನಡೆದಿರುವುದರ ಹಿಂದೆ ಪಕ್ಷದ ಕೆಲವು ನಾಯಕರ ಪಿತೂರಿ ಇದೆ. ಸಂದೇಶ್​ಖಾಲಿಯಂತಹ ಘಟನೆಗಳು ನನಗೆ ರಾಜೀನಾಮೆ ನೀಡುವಂತೆ ಮಾಡಿವೆ ಎಂದು ತಪಸ್​ ಹೇಳಿದ್ದಾರೆ.

ತಪಸ್​ ರಾಯ್​ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಅವರ ಮನವೊಲಿಸುವ ಪ್ರಯತ್ನ ಮಾಡಲಾಯಿತು. ಕುನಾಲ್ ಘೋಷ್ ಮತ್ತು ಸಚಿವ ಬ್ರಾತ್ಯಾ ಬಸು ತಪಸ್ ಅವರ ಮನೆಗೆ ತೆರಳಿದ್ದರು. ಮೂವರ ನಡುವೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಯಿತು.

ಆದರೂ ಅಂತಿಮವಾಗಿ ತಪಸ್ ರಾಯ್ ರಾಜೀನಾಮೆ ನೀಡಿದ್ದಾರೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಈಗ ಚುನಾವಣೆ ನಡೆದರೆ, ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷವು 20 ಸ್ಥಾನಗಳನ್ನು ಗೆಲ್ಲಬಹುದು. ಅದೇ ಸಮಯದಲ್ಲಿ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಚುನಾವಣೆಯಲ್ಲಿ 21 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು