Lok Sabha elections: ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವಾರಣಾಸಿಯಿಂದ ಮೋದಿ ಸ್ಪರ್ಧೆ

ದೆಹಲಿಯಲ್ಲಿ ಒಂದರ ಹಿಂದೆ ಒಂದು ಸಭೆ ನಡೆಸಿದ ನಂತರ ಬಿಜೆಪಿ ಈ ಪಟ್ಟಿ ಬಿಡುಗಡೆ ಮಾಡಿದ.ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಗುರುವಾರ ರಾತ್ರಿ ಸಭೆ ಸೇರಿದ್ದು, ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ ಮೋದಿ ಸೇರಿದಂತೆ ಅದರ ಸದಸ್ಯರು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಸಮಾಲೋಚನೆ ನಡೆಸಿದ್ದರು.

Lok Sabha elections: ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವಾರಣಾಸಿಯಿಂದ ಮೋದಿ ಸ್ಪರ್ಧೆ
ಅಮಿತ್ ಶಾ- ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 02, 2024 | 7:12 PM

ದೆಹಲಿ ಮಾರ್ಚ್ 02: 2024ರ ಲೋಕಸಭೆ ಚುನಾವಣೆಗೆ (Lok sabha Election) ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶನಿವಾರ) ಬಿಡುಗಡೆ ಮಾಡಿದೆ. ಸಂಜೆ 6.15ಕ್ಕೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ  ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ. ಕೇಂದ್ರದಲ್ಲಿ 3ನೇ ಬಾರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ತಾವ್ಡೆ ಹೇಳಿದ್ದಾರೆ.

195 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, 34 ಸಚಿವರು ಈ ಪಟ್ಟಿಯಲ್ಲಿ ಇದ್ದಾರೆ. ಈ ಪೈಕಿ 28 ಮಹಿಳೆಯರು, 2ಮಾಜಿ ಸಿಎಂಗಳು ಇದ್ದಾರೆ 50 ವರ್ಷದ ಕೆಳಗಿನ 47 ಅಭ್ಯರ್ಥಿಗಳು ಇದ್ದಾರೆ. 27 ಮಂದಿ ಎಸ್ ಸಿ ಸಮುದಾಯದವರು ಇದ್ದಾರೆ. ಕರ್ನಾಟಕದಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿಲ್ಲ.

ಬಿಜೆಪಿ ಸುದ್ದಿಗೋಷ್ಠಿ

ಮೊದಲ ಪಟ್ಟಿಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ?

  • ಉತ್ತರಪ್ರದೇಶ- 51 ಕ್ಷೇತ್ರಗಳು
  • ಪಶ್ಚಿಮ ಬಂಗಾಳ- 20
  • ಪಶ್ಚಿಮ ಬಂಗಾಳ -20
  • ಗುಜರಾತ್- 15
  • ರಾಜಸ್ಥಾನ- 15
  • ಕೇರಳ- 12
  • ತೆಲಂಗಾಣ -9
  • ಅಸ್ಸಾಂ -11
  • ಜಾರ್ಖಂಡ್ -11
  • ಛತ್ತೀಸಗಡ್- 11
  • ದೆಹಲಿ -5
  • ಉತ್ತರಖಂಡ್- 3
  • ಗೋವಾ- 1
  • ತ್ರಿಪುರ -1
  • ಅಂಡಮಾನ್ ನಿಕೋಬರ್- 1

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ

ಇದನ್ನೂ ಓದಿ: ಐಟಿ ಸಚಿವ ಅಶ್ವಿನಿ ವೈಷ್ಣವ್ ಮಧ್ಯಸ್ಥಿಕೆ ನಂತರ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಮರುಸ್ಥಾಪಿಸಲಿದೆ ಗೂಗಲ್: ವರದಿ

ಮೊದಲ ಪಟ್ಟಿಯಲ್ಲಿರುವ ಪ್ರಮುಖರು ಇವರು

  • ವಾರಣಾಸಿ- ನರೇಂದ್ರ ಮೋದಿ
  • ಅರುಣಾಚಲ ವೆಸ್ಟ್- ಕಿರಣ್ ರಿಜಿಜು
  • ಅಸ್ಸಾಂನ ದಿಬ್ರುಗಡ್-ಸೊರ್ಬನಾಂದ್ ಸೋನಾವಾಲ್
  • ಚಾಂದನಿ ಚೌಕ್-  ಪ್ರವೀಣ್
  • ನವದೆಹಲಿ-ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್
  • ಗಾಂಧಿನಗರ -ಅಮಿತ್ ಶಾ
  • ರಾಜ್ ಕೋಟ್- ಪುರುಷೋತ್ತಮ್ ರೂಪಾಲ್
  • ಪೋರ್ ಬಂದರ್- ಮನ್ಸೂಖ್ ಮಾಂಡವೀಯ
  • ಉಧಮಪುರ-ಜಿತೇಂದ್ರ ಸಿಂಗ್
  • ಗೊಡ್ಡಾ-ನಿಶಿಕಾಂತ್ ದುಬೆ
  • ಕಾಸರಗೊಡು- ಅಶ್ವಿನಿ
  • ಕೊಡರಮಾ-ಅನ್ನಪೂರ್ಣದೇವಿ
  • ತಿರುವನಂತಪುರಂ-ರಾಜೀವ್ ಚಂದ್ರಶೇಖರ್
  • ಖುಂಟಿ-ಅರ್ಜುನ್ ಮುಂಡಾ
  • ಹಜಾರಿಭಾಗ್-ಮನೀಶ್ ಜೈಸ್ವಾಲ್
  • ವಿದಿಶಾ-ಶಿವರಾಜ್ ಸಿಂಗ್ ಚೌಹಾಣ್ಭೋ
  • ಪಾಲ್-ಅಲೋಕ್ ಶರ್ಮಾ
  • ಖಜುರಾಹೋ-ವಿ.ಡಿ.ಶರ್ಮಾ
  • ಅಲವರ-ಭೂಪೇಂದ್ರ ಯಾದವ್
  • ಅಂಡಮಾನ್ ನಿಕೋಬಾರ್- ವಿಷ್ಣು ಪಡರೆ
  • ಅರುಣಾಚಲ ಪೂರ್ವ- ತಾಪಿರ್ ಗಾವೋ
  • ಕರೀಂಗಂಜ್, ಅಸ್ಸಾಂ – ಕೃಪಾನಾಥ್ ಮಾಲಾ
  • ಸಿಲ್ಚಾರ್ – ಪರಿಮಳಾ ಶುಕ್ಲವೈದ್ಯ
  • ಜೋಧಪುರ್-ಗಜೇಂದ್ರ ಸಿಂಗ್ ಶೇಖಾವತ್
  • ಕೋಟಾ-ಓಂ ಬಿರ್ಲಾ
  • ಚಿತ್ತೋಡಗಢ್-ಸಿ.ಪಿ.ಜೋಶಿ
  • ಬಿಕಾನೇರ್-ಅರ್ಜುನ್ ರಾಮ್ ಮೇಘ್ವಾಲ್
  • ಅಲ್ಮೋಡಾ-ಅಜಯ್ ಟಮಟಾ
  • ಮುಜಫ್ಪರನಗರ-ಸಂಜೀವ್ ಬಲಿಯಾನ್
  • ಗೌತಮಬುದ್ಧನಗರ-ಮಹೇಶ್ ಶರ್ಮಾ
  • ಮಧುರಾ-ಹೇಮಾ ಮಾಲಿನಿ
  •  ಕೈರಾನ್-ಪ್ರದೀಪ್ ಕುಮಾರ್
  • ಫತೇಪುರಸಿಕ್ರಿ-ರಾಜಕುಮಾರ್ ಚಹರ್
  • ಸೀತಾಪುರ-ರಾಜೇಶ್ ಶರ್ಮಾ
  • ಆಗ್ರಾ-ಸತ್ಯಪಾಲ್ ಸಿಂಗ್ ಬಘೇಲಾ
  • ರಾಂಪುರ್ – ಘನಶಾಮ್
  •  ಮಥುರಾ – ಹೇಮಾಮಾಲಿನಿ
  • ಉನ್ನಾವ್- ಸಾಕ್ಷಿ ಮಹಾರಾಜ್
  • ಅಮೇಠಿ- ಸ್ಮೃತಿ ಇರಾನಿ
  • ಕನೌಜ್ – ಸುಬ್ರತ್ ಪಾಠಕ್
  • ಫತೇಪುರ್- ಸಾದ್ವಿ ನಿರಂಜನ್ ಜ್ಯೋತಿ
  • ಫೈಜಾಬಾದ್ (ಅಯೋಧ್ಯಾ)- ಲಲ್ಲು ಸಿಂಗ್
  • ಲಖನೌ-ರಾಜನಾಥ್ ಸಿಂಗ್
  • ಝಾನ್ಸಿ-ಅನುರಾಜ್
  • ಖುಷಿನಗರ-ವಿಜಯ್​ ಕುಮಾರ್
  • ಗೋರಖಪುರ್-ರವಿ ಕಿಶನ್
  • ಪಶ್ಚಿಮ ಬಂಗಾಳ (ಕಾಂತಿ) – ಸುವೇಂದು ಅಧಿಕಾರಿ
  • ಹೂಗ್ಲಿ-ಲಾಕೆಟ್ ಚಟರ್ಜಿ
  • ಹರ್ದೋಯಿ-ಜಯಪ್ರಕಾಶ್
  • ಖೇರಿ-ಅಜಯ್ ಮಿಶ್ರಾ
  • ಅಂಬೇಡ್ಕರ ನಗರ-ರಿತೇಶ್ ಪಾಂಡೆ
  • ಹಜಾರಿಭಾಗ್-ಮನೀಶ್ ಜೈಸ್ವಾಲ್
  • ತ್ರಿಶೂರ್-ಸುರೇಶ್ ಗೋಪಿ
  • ಪಟ್ಟನಂತಿಟ್ಟ-ಅನಿಲ್ ಆ್ಯಂಟನಿ
  • ಗುನಾ ಲೋಕಸಭಾ ಕ್ಷೇತ್ರ-ಜ್ಯೋತಿರಾದಿತ್ಯ ಸಿಂಧಿಯಾ
  • ಚಾಂದನಿಚೌಕ್ ಲೋಕಸಭಾ ಕ್ಷೇತ್ರ-ಪ್ರವೀಣ್ ಖಂಡೇಲವಾಲಾ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Sat, 2 March 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್