ಐಟಿ ಸಚಿವ ಅಶ್ವಿನಿ ವೈಷ್ಣವ್ ಮಧ್ಯಸ್ಥಿಕೆ ನಂತರ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಮರುಸ್ಥಾಪಿಸಲಿದೆ ಗೂಗಲ್: ವರದಿ

ಸೇವಾ ವೆಚ್ಚ ಪಾವತಿಸದ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಗೂಗಲ್ ಹೇಳಿದ್ದರ ಬೆನ್ನಲ್ಲೇ ಈ ವಿಚಾರ ಕುರಿತು ಚರ್ಚಿಸಲು ಐಟಿ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಸಭೆ ಕರೆದಿದ್ದು, ಇದಕ್ಕೆ ಗೂಗಲ್ ಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ. ಐಟಿ ಸಚಿವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ ಬೆನ್ನಲ್ಲೇ ಗೂಗಲ್, ಪ್ಲೇ ಸ್ಟೋರ್​​ನಿಂದ ಅಳಿಸಿರುವ ಆ್ಯಪ್ ಗಳನ್ನು ಮರುಸ್ಥಾಪನೆ ಮಾಡಲು ಟೆಕ್ ಕಂಪನಿ ನಿರ್ಧರಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.

ಐಟಿ ಸಚಿವ ಅಶ್ವಿನಿ ವೈಷ್ಣವ್ ಮಧ್ಯಸ್ಥಿಕೆ ನಂತರ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಮರುಸ್ಥಾಪಿಸಲಿದೆ ಗೂಗಲ್: ವರದಿ
ಗೂಗಲ್ ಪ್ಲೇಸ್ಟೋರ್- ಅಶ್ವಿನಿ ವೈಷ್ಣವ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 02, 2024 | 5:36 PM

ದೆಹಲಿ ಮಾರ್ಚ್ 02:  ಸೇವಾ ಶುಲ್ಕದ ವಿವಾದದಿಂದ ಪ್ಲೇ ಸ್ಟೋರ್‌ನಿಂದ (Play Store) ಅಳಿಸಲಾದ ಭಾರತೀಯ ಮೊಬೈಲ್ ಅಪ್ಲಿಕೇಶನ್‌ಗಳನ್ನು ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಗೂಗಲ್ (Google) ಪ್ರಾರಂಭಿಸಿದೆ. ಕಂಪನಿಯ ಅಧಿಕಾರಿಗಳು ಐಟಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ, ಗೂಗಲ್ 10 ಭಾರತೀಯ ಕಂಪನಿಗಳಿಗೆ ಸೇರಿದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿತ್ತು.ಶೇ 90 ಫೋನ್‌ಗಳು ಅದರ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ ಗೂಗಲ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದ ಆ ಪಟ್ಟಿಯಲ್ಲಿ ಭಾರತ್ ಮ್ಯಾಟ್ರಿಮೋನಿ ಮತ್ತು ನೌಕ್ರಿಯಂತಹ ಆ್ಯಪ್​​ಗಳಿವೆ.

ಭಾರತ್ ಮ್ಯಾಟ್ರಿಮೋನಿ, ಕ್ರಿಶ್ಚಿಯನ್ ಮ್ಯಾಟ್ರಿಮೋನಿ, ಮುಸ್ಲಿಂ ಮ್ಯಾಟ್ರಿಮೋನಿ ಮತ್ತು ಜೋಡಿಯ ಸಂಸ್ಥೆ Matrimony.com ಆ್ಯಪ್​​ನ್ನು ಗೂಗಲ್‌ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಪ್ರಸ್ತುತ ಸಂಸ್ಥೆಯ ಸಂಸ್ಥಾಪಕ ಮುರುಗವೇಲ್ ಜಾನಕಿರಾಮನ್ ಅವರು ಇದನ್ನು  ಭಾರತದ ಇಂಟರ್ನೆಟ್‌ಗೆ ಕರಾಳ ದಿನ ಎಂದು ಉಲ್ಲೇಖಿಸಿದ್ದಾರೆ.

“ನಮ್ಮ ಅಪ್ಲಿಕೇಶನ್‌ಗಳು ಒಂದೊಂದಾಗಿ ಅಳಿಸಲ್ಪಡುತ್ತಿವೆ. ಇದರರ್ಥ ಎಲ್ಲಾ ಉನ್ನತ ಮ್ಯಾಟ್ರಿಮೋನಿ ಸೇವೆಗಳನ್ನು ಅಳಿಸಲಾಗುತ್ತದೆ” ಎಂದು  ಜಾನಕಿರಾಮನ್ ಹೇಳಿರುವುದಾಗಿ  ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವೈಷ್ಣವ್ ಅವರು, ಭಾರತೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಅವಶ್ಯಕತೆಯಿದೆ. ಅದನ್ನು Google ಗೆ ತಿಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ

“ನಾವು ಬಹಳ ದೊಡ್ಡ ಮತ್ತು ರೋಮಾಂಚಕ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ. ಈ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗೂಗಲ್ ಭಾರತೀಯ ತಂತ್ರಜ್ಞಾನಗಳನ್ನು ಉತ್ತಮವಾಗಿ ಅಳವಡಿಸಿಕೊಂಡಿದೆ. ಗೂಗಲ್ ತನ್ನ ವಿಧಾನದೊಂದಿಗೆ ಸಮಂಜಸವಾಗಿದೆ ಎಂದು ನಾನು ಸಾಕಷ್ಟು ಭರವಸೆ ಹೊಂದಿದ್ದೇನೆ” ಎಂದು ಸಚಿವರು ಹೇಳಿದ್ದಾರೆ

ಅಂದಹಾಗೆ ಗೂಗಲ್ ಮ್ಯಾಟ್ರಿಮೋನಿ ಅಪ್ಲಿಕೇಶನ್‌ಗಳನ್ನು ಮಾತ್ರ ಅಳಿಸಿ ಹಾಕಿಲ್ಲ. ಉದ್ಯೋಗ ಹುಡುಕಾಟ ಅಪ್ಲಿಕೇಶನ್ ನೌಕ್ರಿ ಮತ್ತು ರಿಯಲ್ ಎಸ್ಟೇಟ್ ಹುಡುಕಾಟ ಪ್ಲಾಟ್‌ಫಾರ್ಮ್ 99acres ಮೂಲ ಕಂಪನಿಯಾದ ಇನ್ಫೋ ಎಡ್ಜ್ ಅನ್ನೂ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಆರಂಭಿಕ ಷೇರು ಬೆಲೆ ಏರಿಳಿತಗಳ ಹೊರತಾಗಿಯೂ Matrimony.com ಮತ್ತು ಇನ್ಫೋ ಎಡ್ಜ್ ಎರಡೂ ದಿನದ ಅಂತ್ಯದ ವೇಳೆಗೆ ಭಾಗಶಃ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾದವು.

ಇದನ್ನೂ ಓದಿGautam Gambhir Quit Politics: ಗೌತಮ್ ಗಂಭೀರ್ ರಾಜಕೀಯಕ್ಕೆ ಗುಡ್ ಬೈ: ಕಾರಣ ಇಲ್ಲಿದೆ

2020 ರಲ್ಲಿ, ಕೆಲವು ನೀತಿ ಉಲ್ಲಂಘನೆಗಳನ್ನು ಉಲ್ಲೇಖಿಸಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಜನಪ್ರಿಯ ಭಾರತೀಯ ಪಾವತಿ ಅಪ್ಲಿಕೇಶನ್ Paytm ಅನ್ನು  ತೆಗೆದುಹಾಕಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Sat, 2 March 24

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು