ಕಾನ್ಪುರದಲ್ಲಿ ಬಂಶೀಧರ್ ತಂಬಾಕು ಗ್ರೂಪ್ ವಿರುದ್ಧ ಐಟಿ ದಾಳಿ; ₹7 ಕೋಟಿ ಮೌಲ್ಯದ ನಗದು, ಚಿನ್ನಾಭರಣ ವಶ
ಕಾನ್ಪುರದಲ್ಲಿ ಬಂಶೀಧರ್ ತಂಬಾಕು ಗ್ರೂಪ್ ವಿರುದ್ಧ ಐಟಿ ದಾಳಿ ನಡೆದಿದ್ದು 60-70 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳು ವೇಳೆ ಪತ್ತೆಯಾಗಿದೆ. 20-25 ಕೋಟಿ ರೂಪಾಯಿಗಳ ವಹಿವಾಟು ಇರುವ ಕಂಪನಿ ಇದಾಗಿದ್ದು ಈ ಹಣ ಎಲ್ಲಿಂದ ಬಂತು ಎಂದು ಆದಾಯ ತೆರಿಗೆ ಅಧಿಕಾರಿಗಳು ತಮ್ಮ ವಿಚಾರಣೆಯ ವೇಳೆ ಕಂಪನಿಯ ಸಂಸ್ಥಾಪಕ ಮಿಶ್ರಾ ಮೇಲೆ ಒತ್ತಡ ಹೇರಿದ್ದಾರೆ.
ದೆಹಲಿ ಮಾರ್ಚ್ 02: ಕಾನ್ಪುರದಲ್ಲಿ (Kanpur) ಬಂಶೀಧರ್ ತಂಬಾಕು ಗ್ರೂಪ್ (Bansidhar Tobacco Group) ವಿರುದ್ಧ ಆದಾಯ ತೆರಿಗೆ ಇಲಾಖೆ (IT Department) ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅನಾರೋಗ್ಯ ಎಂದು ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಂಪನಿಯ ಮಾಲೀಕ ಕೆಕೆ ಮಿಶ್ರಾ ಅವರ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಎರಡನೇ ದಿನದ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಾಚ್‌ಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಮಹತ್ವದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಪೈಕಿ ಸುಮಾರು ₹2.5 ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ಗಡಿಯಾರವಿದ್ದು, ಜೊತೆಗೆ ನಾಲ್ಕು ಇತರ ಹೈ-ಎಂಡ್ ಟೈಮ್‌ಪೀಸ್‌ಗಳಿವೆ. ಈ ಕೈಗಡಿಯಾರಗಳ ಮೌಲ್ಯಮಾಪನವನ್ನು ವಿಶೇಷ ತಂಡಕ್ಕೆ ವಹಿಸಲಾಗಿದೆ.
₹60-70 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳಂತಹ ಆಸ್ತಿಗಳು ಹಣದ ಮೂಲದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ. ₹20-25 ಕೋಟಿ ರೂಪಾಯಿಗಳ ವಹಿವಾಟು ಇರುವ ಕಂಪನಿ ಇದಾಗಿದ್ದು ಈ ಹಣ ಎಲ್ಲಿಂದ ಬಂತು ಎಂದು ಆದಾಯ ತೆರಿಗೆ ಅಧಿಕಾರಿಗಳು ತಮ್ಮ ವಿಚಾರಣೆಯ ವೇಳೆ ಮಿಶ್ರಾ ಮೇಲೆ ಒತ್ತಡ ಹೇರಿದ್ದಾರೆ.
ವಜ್ರಖಚಿತ ಸುಮಾರು₹ 2.5 ಕೋಟಿ ಮೌಲ್ಯ ಗಡಿಯಾರವನ್ನು ಕೆಕೆ ಮಿಶ್ರಾ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಯುಕೆ ನಿರ್ಮಿತ ಇನ್ನೂ 4 ಬೆಲೆಬಾಳುವ ವಾಚ್‌ಗಳು ಪತ್ತೆಯಾಗಿವೆ.
ಬಂಶೀಧರ್ ತಂಬಾಕು ಲಿಮಿಟೆಡ್ ಮತ್ತು ಪಾನ್ ಮಸಾಲಾ ಗುಂಪು
ಇದಲ್ಲದೆ, ತನಿಖೆಗಳು ಬಂಶೀಧರ್ ತಂಬಾಕು ಲಿಮಿಟೆಡ್ ಮತ್ತು ಪ್ರಮುಖ ಪಾನ್ ಮಸಾಲಾ ಗುಂಪಿನ ನಡುವಿನ ವಹಿವಾಟುಗಳನ್ನು ಬಹಿರಂಗಪಡಿಸಿವೆ. ಇದು ಎರಡು ಘಟಕಗಳ ನಡುವಿನ ಸಂಭಾವ್ಯ ಸಂಬಂಧವನ್ನು ಸೂಚಿಸುತ್ತದೆ. ಬನ್ಸಿಧರ್ ತಂಬಾಕು ಲಿಮಿಟೆಡ್‌ನಿಂದ ಕಚ್ಚಾ ವಸ್ತುಗಳನ್ನು ಖರೀದಿಸಿದ ಪಾನ್ ಮಸಾಲಾ ಗುಂಪಿನ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಇದನ್ನೂ ಓದಿ: PM Modi in West Bengal: ಟಿಎಂಸಿ ಎಂದರೆ ‘ತು, ಮೇ ಔರ್ ಕರಪ್ಶನ್’; ಬಂಗಾಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ಐಟಿ ದಾಳಿಯಲ್ಲಿ ಏನೇನು ಸಿಕ್ಕಿದೆ?
ದಾಳಿ ವೇಳೆ ಅಧಿಕಾರಿಗಳು ಅಂದಾಜು ₹4.30 ಕೋಟಿ ರೂಪಾಯಿ ಮೊತ್ತದ ನಗದು ಮತ್ತು ₹2.5-3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅದ್ದೂರಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಳಸಿದ ನಿಧಿಗಳ ಮೂಲ, ಹಾಗೆಯೇ ಪಾನ್ ಮಸಾಲಾ ಗುಂಪಿನೊಂದಿಗಿನ ವಹಿವಾಟಿನ ಸ್ವರೂಪವು ತೆರಿಗೆ ಅಧಿಕಾರಿಗಳ ತೀವ್ರ ಪರಿಶೀಲನೆಯಲ್ಲಿದೆ. ಗುಜರಾತ್‌ನ ಉಂಝಾದಲ್ಲಿರುವ ಬಂಶೀಧರ್ ತಂಬಾಕು ಗ್ರೂಪ್‌ನ ಕಾರ್ಖಾನೆಯ ಸ್ಥಳ ಮತ್ತು ಗುಂಟೂರಿನಲ್ಲಿರುವ ಅವರ ಖರೀದಿ ಸ್ಥಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ