ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; ಇಂತಹ ಚಟುವಟಿಕೆಗಳ ಹಿಂದೆ ಬಿಜೆಪಿಯವ್ರ ಕೈವಾಡ ಇರತ್ತೆ; ಸಚಿವ ಚೆಲುವರಾಯಸ್ವಾಮಿ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; ಇಂತಹ ಚಟುವಟಿಕೆಗಳ ಹಿಂದೆ ಬಿಜೆಪಿಯವ್ರ ಕೈವಾಡ ಇರತ್ತೆ; ಸಚಿವ ಚೆಲುವರಾಯಸ್ವಾಮಿ

Sunil MH
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 02, 2024 | 4:04 PM

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ(Rameshwaram Cafe) ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ, '. ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ. ರಾಮೇಶ್ವರಂ ಕೆಫೆ ಸ್ಫೋಟ ಕೇಸ್​​ನಲ್ಲಿ ಬಿಜೆಪಿ ಕೈವಾಡ ಇದೆ ಎಂದು ಹೇಳಲ್ಲ. ಈ ಹಿಂದೆ ಇಂತಹದ್ದೇ ಘಟನೆಗಳಾದಾಗ ಬಿಜೆಪಿಯ ಕೈವಾಡ ಇತ್ತು ಎಂದಿದ್ದಾರೆ.

ಬೆಂಗಳೂರು, ಮಾ.02: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ(Rameshwaram Cafe) ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬ್ಯುಸಿನೆಸ್​ಗೂ ಆಗಿರಬಹುದು ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ(Cheluvaraya swamy )ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಬರೀ ಹಿಂದೂ, ಮುಸ್ಲಿಮರು ಮಾತ್ರ ಕಾಣುತ್ತಿದ್ದಾರೆ. ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ. ರಾಮೇಶ್ವರಂ ಕೆಫೆ ಸ್ಫೋಟ ಕೇಸ್​​ನಲ್ಲಿ ಬಿಜೆಪಿ ಕೈವಾಡ ಇದೆ ಎಂದು ಹೇಳಲ್ಲ. ಈ ಹಿಂದೆ ಇಂತಹದ್ದೇ ಘಟನೆಗಳಾದಾಗ ಬಿಜೆಪಿಯ ಕೈವಾಡ ಇತ್ತು. ಆದರೆ, ನನಗೆ ದಿನಾಂಕ ಮತ್ತು ಘಟನೆ ನೆನಪಿಲ್ಲ. ಜೊತೆಗೆ ಅದು ತನಿಖೆಯಲ್ಲಿ ಸಾಭೀತು ಆಗಿದೆ ಎಂದು ಎನ್​.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ