ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ; ಕೊನೆಗೂ ಶಂಕಿತನ ಜಾಡು ಹಿಡಿದ ಪೊಲೀಸರು, ಬಂಧನಕ್ಕಾಗಿ ತೀವ್ರ ಶೋಧ

ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಶಂಕಿತನ ಜಾಡು ಹಿಡಿದಿದ್ದಾರೆ. ಬಿಎಂಟಿಸಿ(BMTC) ವೋಲ್ವೋ ಡಿಪೋ- 13ರ ಕಾಮಾಕ್ಯಗೆ ಸೇರಿದ್ದ ಕೆಎ- 57- F 186 ನಂಬರಿನ ಬನಶಂಕರಿ ಯಿಂದ ಐಟಿಪಿಎಲ್ ( ಸಿಲ್ಕ್ ಬೋರ್ಡ್ ಮಾರ್ಗ ) ಹೋಗುವ ಬಸ್​ನಲ್ಲಿ ಶಂಕಿತ ಪ್ರಯಾಣ ಮಾಡಿದ್ದಾನೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ; ಕೊನೆಗೂ ಶಂಕಿತನ ಜಾಡು ಹಿಡಿದ ಪೊಲೀಸರು, ಬಂಧನಕ್ಕಾಗಿ ತೀವ್ರ ಶೋಧ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ
Follow us
Kiran Surya
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 02, 2024 | 3:23 PM

ಬೆಂಗಳೂರು, ಮಾ.02: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಶಂಕಿತನ ಜಾಡು ಹಿಡಿದಿದ್ದಾರೆ. ಬಿಎಂಟಿಸಿ(BMTC) ವೋಲ್ವೋ ಡಿಪೋ- 13ರ ಕಾಮಾಕ್ಯಗೆ ಸೇರಿದ್ದ ಕೆಎ- 57- F 186 ನಂಬರಿನ ಬನಶಂಕರಿ ಯಿಂದ ಐಟಿಪಿಎಲ್ ( ಸಿಲ್ಕ್ ಬೋರ್ಡ್ ಮಾರ್ಗ ) ಹೋಗುವ ಬಸ್​ನಲ್ಲಿ ಶಂಕಿತ ಪ್ರಯಾಣ ಮಾಡಿದ್ದಾನೆ. ಕುಂದಹಳ್ಳಿಯಿಂದ ಬಸ್ ಹತ್ತಿ, ಬಳಿಕ CMRIT ಕಾಲೇಜು ಸ್ಟಾಪ್​ನಲ್ಲಿ ಇಳಿದುಕೊಂಡಿದ್ದಾನೆ. ಈ ಕುರಿತು ಆ ಬಸ್​ನ ಸಿಸಿ ಟಿವಿ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ಡ್ರೈವರ್ ಮತ್ತು ಕಂಡಕ್ಟರ್​ ರಿಂದ ಪೋಲಿಸರು ಮಾಹಿತಿ ಪಡೆದುಕೊಂಡಿದ್ದಾರೆ.

ಮೆಜೆಸ್ಟಿಕ್‌ನ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೈ ಅಲರ್ಟ್‌

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲರ್ಟ್​ ಆದ ಪೊಲೀಸರು, ಇದೀಗ ಮೆಜೆಸ್ಟಿಕ್‌ನ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಲಗೇಜ್‌ ಚೆಕ್ ಮಾಡಿಯೇ ನಿಲ್ದಾಣಕ್ಕೆ ಸಿಬ್ಬಂದಿಗಳು ಬಿಡುತ್ತಿದ್ದಾರೆ. ಜೊತೆಗೆ ಬರುವಂತಹ ಪ್ರತಿ ಪ್ರಯಾಣಿಕರ ಮೇಲೂ ಕೆಎಸ್​ಆರ್​ಟಿಸಿ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಯಾರಾದರೂ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದ್ರೆ ಅಂತವರ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬ್ರೂಕ್ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಕೆಫೆಯ ಇತರ ಶಾಖೆಗಳ ಮೇಲೂ ಪ್ರಭಾವ, ಗ್ರಾಹಕರ ಸಂಖ್ಯೆ ಇಳಿಮುಖ

ಈ ಕುರಿತು ಬಿಎಂಟಿಸಿ ಎಂಡಿ ಆರ್. ರಾಮಚಂದ್ರನ್ ಮಾತನಾಡಿ, ‘ಬಿಎಂಟಿಸಿಯಲ್ಲಿ ಸಂಚರಿಸುವ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತನೆ ಮಾಡಿಕೊಂಡು ಬರುತ್ತಿದ್ದೇವೆ. ಇಂತಹ ಘಟನೆಗಳು ಆದಾಗ ಜಾಗರೂಕತೆಯಿಂದ ನಡೆಸೆಕೊಳ್ಳಬೇಕು ಎನ್ನುವುದು ಎಲ್ಲರ ಮನಸ್ಸಿನಲ್ಲಿ ಬರುತ್ತದೆ. ಜಾಗರೂಕತೆ ಆಗಿರಬೇಕು, ಅದನ್ನ ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಅನುಮಾನಾಸ್ಪದವಾದದ್ದು ಏನಾದರು ಕಂಡು ಬಂದರೆ, ಪ್ರಯಾಣಿಕರು ಕೂಡಲೇ ಚಾಲಕ ಅಥವಾ ನಿರ್ವಾಹಕರ ಗಮನಕ್ಕೆ ತರಬೇಕು ಎಂದರು. ಇದೇ ವೇಳೆ ಬಿಎಂಟಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳನ್ನು ಗುರುತಿಸಲು ಮೆಟಲ್ ಡಿಟೆಕ್ಟರ್​ ಅಳವಡಿಕೆ ವಿಚಾರ, ‘ ಈ ಬಗ್ಗೆ ಗೃಹ ಇಲಾಖೆ ನೋಡಿಕೊಳ್ಳಬೇಕು. ನಾವು ಕೇವಲ ಬಸ್ ಗಳ ನಿರ್ವಹಣೆ ಹೇಗೆ ಮಾಡಬೇಕು ನಿಯಮ ಪ್ರಕಾರ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ