ಧಮಕಿ ಹಾಕೋರು 5 ಬಿಲಿಯನ್ ಡಾಲರ್ ಕೊಡೋದಿಲ್ಲ: ಮಾಲ್ಡೀವ್ಸ್​ನ ಬಿಗ್ ಬುಲ್ಲಿ ಮಾತಿಗೆ ತಿರುಗೇಟು ಕೊಟ್ಟ ಜೈಶಂಕರ್

Minister S Jaishankar Counters Big Bully Allegation: ನೆರೆಯ ದೇಶಗಳ ಮೇಲೆ ಭಾರತ ಬೆದರಿಕೆ ಹಾಕುತ್ತಿದೆ ಎನ್ನುವಂತಹ ಅಭಿಪ್ರಾಯವನ್ನು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿರುಗೇಟು ನೀಡಿದ್ದಾರೆ. ಬಿಗ್ ಬುಲ್ಲಿ ಆಗಿದ್ದರೆ ನೆರೆಯ ದೇಶಗಳಿಗೆ 4.5 ಬಿಲಿಯನ್ ಡಾಲರ್ ನೆರವು ಕೊಡುತ್ತಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಲಸಿಕೆ ಕೊಡುತ್ತಿರಲಿಲ್ಲ ಎಂದು ಸಚಿವರು ಮಾರ್ಮಿಕವಾಗಿ ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಮಾಲ್ಡೀವ್ಸ್ ಪ್ರಧಾನಿಗಳು, ತಾನು ಭಾರತದ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಹೇಳಿದ್ದರು.

ಧಮಕಿ ಹಾಕೋರು 5 ಬಿಲಿಯನ್ ಡಾಲರ್ ಕೊಡೋದಿಲ್ಲ: ಮಾಲ್ಡೀವ್ಸ್​ನ ಬಿಗ್ ಬುಲ್ಲಿ ಮಾತಿಗೆ ತಿರುಗೇಟು ಕೊಟ್ಟ ಜೈಶಂಕರ್
ಎಸ್ ಜೈಶಂಕರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2024 | 2:22 PM

ನವದೆಹಲಿ, ಮಾರ್ಚ್ 4: ಉಪಖಂಡದಲ್ಲಿ ಭಾರತ ಇತರ ದೇಶಗಳ ಮೇಲೆ ಬೆದರಿಕೆ (bullying) ಹಾಕುತ್ತಿದೆ ಎಂದು ಕೇಳಿಬರುತ್ತಿರುವ ಆರೋಪದ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ಬೆದರಿಸುವ ದೇಶವಾಗಿದ್ದರೆ ನೆರೆಯ ದೇಶಗಳಿಗೆ ಕಷ್ಟ ಬಂದಾಗ 4.5 ಬಿಲಿಯನ್ ಡಾಲರ್ ನೆರವು ಕೊಡುತ್ತಿರಲಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಿನ್ನೆ (ಮಾ. 3) ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ವೇಳೆ, ನೆರೆಯ ದೇಶಗಳಿಗೆ ಭಾರತ ಧಮಕಿ ಹಾಕುತ್ತಿದೆ ಎನ್ನುವಂತಹ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಕುರಿತ ಪ್ರಶ್ನೆ ಅವರು ಮೇಲಿನ ಉತ್ತರ ಕೊಟ್ಟಿದ್ದಾರೆ.

‘ಈ ಭಾಗದಲ್ಲಿ (ಉಪಖಂಡ) ಇವತ್ತು ಆಗಿರುವ ದೊಡ್ಡ ಬದಲಾವಣೆ ಎಂದರೆ, ಅದು ಭಾರತ ಹಾಗೂ ಅದರ ನೆರೆಯ ದೇಶಗಳ ನಡುವೆ ಆಗಿರುವುದು. ನೀವು ಭಾರತವನ್ನು ದೊಡ್ಡ ಧಮಕಿ ದೇಶವೆಂದು ಪರಿಗಣಿಸುವುದಾದರೆ, ಒಂದು ವಿಷಯ ಗೊತ್ತಿರಲಿ. ಬಿಗ್ ಬುಲ್ಲಿ (Big bully) ಎನಿಸಿಕೊಂಡವರು ತನ್ನ ನೆರೆಹೊರೆಯವರು ಕಷ್ಟಕ್ಕೆ ಸಿಲುಕಿದಾಗ 4.5 ಬಿಲಿಯನ್ ಡಾಲರ್ ನೆರವು ಒದಗಿಸುವುದಿಲ್ಲ. ಕೋವಿಡ್ ಇದ್ದಾಗ ಇತರ ದೇಶಗಳಿಗೆ ಲಸಿಕೆ ಸರಬರಾಜು ಮಾಡುವುದಿಲ್ಲ. ಅಥವಾ ಬೇರಾವುದೋ ದೇಶದಲ್ಲಿ ಯುದ್ಧಬಾಧೆಯಾದರೆ ಬಿಗ್ ಬಿಲ್ಲಿಗಳು ತಮ್ಮ ಹಿತಾಸಕ್ತಿಯನ್ನೂ ಮೀರಿ ಆಹಾರ, ಇಂಧನ, ರಸಗೊಬ್ಬರ ಪೂರೈಕೆ ಮಾಡುವುದಿಲ್ಲ’ ಎಂದು ಎಸ್ ಜೈಶಂಕರ್ ಮಾರ್ಮಿಕವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಮೊದಲ ಬಾಹ್ಯಾಕಾಶ ನಿಲ್ದಾಣದ ಕೆಲಸ ಆರಂಭಿಸಿದ ಇಸ್ರೋ

ಮಾಲ್ಡೀವ್ಸ್ ಅಧ್ಯಕ್ಷರಿಗೆ ಕೊಟ್ಟ ತಿರುಗೇಟಾ ಇದು..?

ಮಾಲ್ಡೀವ್ಸ್​ನ ಈಗಿನ ಅಧ್ಯಕ್ಷ ಮೊಹಮ್ಮದ್ ಮುಯಿಜು ಚೀನಾ ಪರ ಮತ್ತು ಭಾರತ ವಿರೋಧಿ ನಿಲುವಿನಿಂದಲೇ ಗುರುತಾಗಿದ್ದಾರೆ. ಭಾರತೀಯ ಸೇನೆಯನ್ನು ಮಾಲ್ಡೀವ್ಸ್​ನಿಂದ ಹೊರಹಾಕಲೆಂದೇ ತನಗೆ ಜನಾದೇಶ ಸಿಕ್ಕಿದೆ ಎಂಬಂತೆ ವರ್ತಿಸುತ್ತಿದ್ದಾರೆ. ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಹೋದಾಗ ಮಾಲ್ಡೀವ್ಸ್​ನ ಕೆಲ ಸಚಿವರು ಲೇವಡಿ ಮಾಡಿದ್ದುಂಟು. ಅವರ ತಲೆದಂಡವೇನೋ ಆಯಿತು. ಆದರೆ, ಮಾಲ್ಡೀವ್ಸ್ ಅಧ್ಯಕ್ಷರ ಚುಚ್ಚು ಮಾತ್ರ ಮಾತ್ರ ನಿಲ್ಲಲಿಲ್ಲ.

‘ನಮ್ಮ ದೇಶ ಚಿಕ್ಕದಿರಬಹುದು. ಹಾಗಿದ್ದ ಮಾತ್ರಕ್ಕೆ ಇತರ ದೇಶಗಳಿಗೆ ನಮ್ಮನ್ನು ಬೆದರಿಸುವ ಲೈಸೆನ್ಸ್ ಸಿಕ್ಕುವುದಿಲ್ಲ’ ಎಂದು ಮುಯಿಜು ಹೇಳಿದ್ದರು. ಅಷ್ಟಕ್ಕೆ ಸುಮ್ಮನಾಗದೆ, ಈ ಹಿಂದೂ ಮಹಾಸಾಗರ (Indian Ocean) ಯಾವುದೋ ಒಂದು ದೇಶಕ್ಕೆ ಸೇರಿಲ್ಲ ಎಂದೂ ಭಾರತಕ್ಕೆ ಕುಟುಕಿದ್ದರು.

ಇದನ್ನೂ ಓದಿ: ಆಂಧ್ರ ಅಸೆಂಬ್ಲಿ ಚುನಾವಣೆ: TDP ಗೆಲ್ಲುತ್ತೆ ಎಂದ ಪ್ರಶಾಂತ್ ಕಿಶೋರ್, ಭಗ್ಗನೆ ಕಿಡಿಕಾರಿದ ಜಗನ್ ಪಾರ್ಟಿ ನಾಯಕರು!

‘ನಾವು ಈ ಮಹಾಸಾಗರದಲ್ಲಿ ಸಣ್ಣ ದ್ವೀಪಗಳನ್ನು ಹೊಂದಿರಬಹುದು. ಆದರೆ, 9,00,000 ಚದರಡಿಯಷ್ಟು ವಿಶಾಲವಾದ ಆರ್ಥಿಕ ವಲಯ ಹೊಂದಿದ್ದೇವೆ. ಈ ಮಹಾಸಾಗರ ಯಾವುದೋ ಒಂದು ದೇಶಕ್ಕೆ ಸೇರಿದ್ದಲ್ಲ. ಅದರಲ್ಲಿ ಇರುವ ಎಲ್ಲಾ ದೇಶಗಳಿಗೂ ಸೇರಿದ್ದು,’ ಎಂದು ಮಾಲ್ಡೀವ್ಸ್ ಅಧ್ಯಕ್ಷರು ಸಿಡಿಗುಟ್ಟಿದ್ದರು.

ಅದಾದ ಬಳಿಕ ಮಾಲ್ಡೀವ್ಸ್​ನ ಸಮರ್ಥಕರು ಭಾರತವನ್ನು ಬಿಗ್ ಬುಲ್ಲಿ ಎಂದು ಬಣ್ಣಿಸುವ ಟ್ರೆಂಡ್ ಆರಂಭವಾಗಿದೆ. ನೆರೆಯ ದೇಶಗಳ ಮೇಲೆ ಭಾರತ ಒತ್ತಡ ಹಾಕುತ್ತಿದೆ. ಬಲ ಪ್ರಯೋಗ ಮಾಡುತ್ತಿದೆ. ಹೆದರಿಸುತ್ತಿದೆ. ಹೀಗೆ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.

ಈ ವಿಚಾರದ ಬಗ್ಗೆ ಭಾನುವಾರ ಕೇಂದ್ರ ಸಚಿವ ಜೈಶಂಕರ್ ಖಾರವಾಗಿ ಪ್ರತಿಕ್ರಿಯಿಸಿದ್ದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ