AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಒವೈಸಿ ಭೇಟಿ; ಬಾಂಬ್ ಸ್ಫೋಟ ಘಟನೆ ಭಾರತೀಯ ಮೌಲ್ಯಗಳ ಮೇಲಿನ ಆಕ್ರಮಣ ಎಂದು ಬಣ್ಣಿಸಿದ ಎಐಎಂಐಎಂ ಮುಖ್ಯಸ್ಥ

AIMIM Chief Asaduddin Owaisi Visits Rameshwaram Cafe: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮಾರ್ಚ್ 2ರಂದು ಹೈದರಾಬಾದ್​ನಲ್ಲಿರುವ ರಾಮೇಶ್ವರಂ ಕೆಫೆಗೆ ಸೌಹಾರ್ದಯುತ ಭೇಟಿ ನೀಡಿ ಬಂದಿದ್ದಾರೆ. ಬೆಂಗಳೂರಿನ ಬ್ರೂಕ್​ಫೀಲ್ಡ್​ನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯನ್ನು ಅವರು ಖಂಡಿಸಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಕೆಫೆಗೆ ಇಟ್ಟಿದ್ದಾರೆ. ಬಾಂಬ್ ಸ್ಫೋಟಿಸಿದ್ದು ಹೇಡಿತನದ ಕೆಲಸ. ಇದು ಭಾರತೀಯ ಮೌಲ್ಯಗಳ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಒವೈಸಿ ಭೇಟಿ; ಬಾಂಬ್ ಸ್ಫೋಟ ಘಟನೆ ಭಾರತೀಯ ಮೌಲ್ಯಗಳ ಮೇಲಿನ ಆಕ್ರಮಣ ಎಂದು ಬಣ್ಣಿಸಿದ ಎಐಎಂಐಎಂ ಮುಖ್ಯಸ್ಥ
ಅಸಾದುದ್ದೀನ್ ಒವೈಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 03, 2024 | 3:28 PM

Share

ಹೈದರಾಬಾದ್, ಮಾರ್ಚ್ 3: ಮೊನ್ನೆ ಬೆಂಗಳೂರಿನ ಬ್ರೂಕ್​ಫೀಲ್ಡ್​ನ ರಾಮೇಶ್ವರಂ ಕೆಫೆ ಹೋಟೆಲ್​ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ (Rameshwaram Cafe bomb blast) ಘಟನೆಯನ್ನು ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi) ಅವರು ಹೇಡಿತನದ ಕೃತ್ಯ ಎಂದು ಹೇಳಿ ಖಂಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆಫೆ ಮೇಲಿನ ದಾಳಿಯು ಹೇಡಿತನದ ಕೃತ್ಯವಾಗಿದೆ. ಮತ್ತು ಭಾರತೀಯ ಮೌಲ್ಯದ ಮೇಲಿನ ಆಕ್ರಮಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್​ನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ರಾಮೇಶ್ವರಂ ಕೆಫೆ ಹೋಟೆಲ್​ಗೆ ಭೇಟಿ ನೀಡಿ ಬಂದ ನಂತರ ಒವೈಸಿ ಈ ಟ್ವೀಟ್ ಮಾಡಿದ್ದಾರೆ.

‘ಹೈದರಾಬಾದ್​ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದೆ. ಆಹಾರ ಅಮೋಘವಾಗಿತ್ತು. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಈ ಕೆಫೆಗೆ ಇಡಲಾಗಿದೆ. ಇದನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಈ ಬಾಂಬ್ ಬ್ಲಾಸ್ಟ್ ಭಾರತೀಯ ಮೌಲ್ಯಗಳ ಮೇಲೆ ಆದ ದಾಳಿ,’ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥರೂ ಆದ ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್​: ಉದ್ಯಮದಲ್ಲಿ ಬೆಳವಣಿಗೆ ಸಹಿಸದೆ, ಬೆಂಗಳೂರು ಅನ್​ಸೇಫ್​ ಅಂತ ಸೃಷ್ಟಿಸಲು ಈ ರೀತಿ ಮಾಡಿರಬಹುದು; ಪರಮೇಶ್ವರ್​​

ಒವೈಸಿ ಮಾಡಿದ ಟ್ವೀಟ್ ಇದು..

ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಆರಂಭವಾದ ರಾಮೇಶ್ವರಂ ಕೆಫೆ ಸಾಕಷ್ಟು ಕಡೆ ಶಾಖೆಗಳನ್ನು ವಿಸ್ತರಿಸಿದೆ. ಅಬ್ದುಲ್ ಕಲಾಂ ಅವರ ಅಭಿಮಾನಿಗಳಾದ ಸಂಸ್ಥಾಪಕರು, ಮಾಜಿ ರಾಷ್ಟ್ರಪತಿಗಳ ಹುಟ್ಟಿದೂರಾದ ರಾಮೇಶ್ವರಂ ಹೆಸರನ್ನು ತಮ್ಮ ಕೆಫೆಗೆ ಇಟ್ಟಿದ್ದಾರೆ.

ಕೆಫೆಯ ಬ್ರೂಕ್​ಫೀಲ್ಡ್ ಬ್ರ್ಯಾಂಚ್​ನಲ್ಲಿ ಶುಕ್ರವಾರ ಬಾಂಬ್ ಸ್ಫೋಟಿಸಿ, ಹತ್ತಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದೆ. ಇದು ಐಇಡಿ ಬಾಂಬ್ ಆಗಿದ್ದು, ಹೆಚ್ಚು ತೀವ್ರತೆ ಹೊಂದಿರಲಿಲ್ಲ. ಬಾಂಬ್ ಸ್ಫೋಟಿಸಿದ ವ್ಯಕ್ತಿಯ ಚಹರೆ ಮತ್ತು ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಗ್ ಹಿಡಿದು ಬರುವ ಆತ ಹೋಟೆಲ್​ನಲ್ಲಿ ರವೆ ಇಡ್ಲಿ ತಿಂದು ಬಳಿಕ ಬ್ಯಾಗನ್ನು ಅಲ್ಲೇ ಬಿಟ್ಟು ತರಾತುರಿಯಲ್ಲಿ ಹೋಗಿದ್ದ. ಬಳಿಕ ಬಾಂಬ್ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್ ಸಿಲ್ಲಿ ಅಟೆಂಪ್ಟ್‌‌: ಸಚಿವ ಶರಣಪ್ರಕಾಶ ವಿರುದ್ಧ ಬಿಜೆಪಿ ಆಕ್ರೋಶ

ಸರ್ಕಾರ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ. ಭಯೋತ್ಪಾದಕ ಕೃತ್ಯದ ಸಾಧ್ಯತೆ ಇರುವುದರಿಂದ ಎನ್​ಐಎ ಮತ್ತು ಎನ್​ಎಸ್​ಜಿ ತಂಡಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sun, 3 March 24