ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್ ಸಿಲ್ಲಿ ಅಟೆಂಪ್ಟ್‌‌: ಸಚಿವ ಶರಣಪ್ರಕಾಶ ವಿರುದ್ಧ ಬಿಜೆಪಿ ಆಕ್ರೋಶ

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್​ ಘೋಷಣೆ ಮತ್ತು ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಬ್ಲಾಸ್ಟ್​​ನ್ನು ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಹಾಳು ಮಾಡಲು ಮಾಡಿದ್ದಾರೆ. ಇದು​​ ಸಿಲ್ಲಿ ಅಟೆಂಪ್ಟ್​​ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್​ ಪಾಟೀಲ್ ಹೇಳಿದರು. ​

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್ ಸಿಲ್ಲಿ ಅಟೆಂಪ್ಟ್‌‌: ಸಚಿವ ಶರಣಪ್ರಕಾಶ ವಿರುದ್ಧ ಬಿಜೆಪಿ ಆಕ್ರೋಶ
ಸಚಿವ ಶರಣಪ್ರಕಾಶ್​ ಪಾಟೀಲ್​
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on:Mar 03, 2024 | 10:34 AM

ಕಲಬುರಗಿ, ಮಾರ್ಚ್​ 03: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ (Vidhan Soudha Pro Pakistan Slogan) ಕೂಗಿದ ವಿಚಾರ ಮತ್ತು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ (Bengaluru Rameshwaram Cafe Bomb Blast) ಪ್ರಕರಣಗಳ ಕುರಿತಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್​ ಪಾಟೀಲ್ (Sharan Prakash Patil)​ ಲಘುವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿನ ಶಾಂತಿ-ಸುವ್ಯವಸ್ಥೆ ಕದಡಲು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಸೊಪ್ಪು ಹಾಕಲ್ಲ, ಇಂತಹ ಸಿಲ್ಲಿ ಅಟೆಂಪ್ಟ್‌‌​​​​ಗಳಿಂದ ಸರ್ಕಾರ ವಿಚಲಿತವಾಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇವಾವುದಕ್ಕೂ ಆಸ್ಪದವಿಲ್ಲ. ನಮ್ಮ ಸರ್ಕಾರದ ಉದ್ದೇಶ ರಾಜ್ಯದ ಯೋಗಕ್ಷೇಮ, ಶಾಂತಿ-ಸುವ್ಯವಸ್ಥೆ ಮತ್ತು ಅಭಿವೃದ್ಧಿ ಇದು ಒಂದೇ ಗುರಿ ಎಂದರು.

ಇತರಹದ ಕೃತ್ಯಗಳು ಪ್ರತಿದಿನ ನಡೆಯಲ್ಲ. ಬಿಗಿ ಭದ್ರತೆಯ ಸಂಸತ್ತಿನಲ್ಲಿ ಅಂತಹ ದೊಡ್ಡ ಘಟನೆ ನಡೆದಿದೆ. ಸಂಸತ್ತಿಗೆ ಇರುವಷ್ಟು ಭದ್ರತೆ ವಿಧಾನಸೌಧಕ್ಕೆ ಇಲ್ಲ. ಸಭಾಪತಿಗಳು ಇನ್ಮುಂದೆ ಬಿಗಿ ಭದ್ರತೆ ಮಾಡುತ್ತಾರೆ. ಇನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಎಫ್​ಎಸ್​ಎಲ್ ವರದಿ ಬಂದರೇ ಕ್ರಮ ಕೈಗೊಳ್ಳುತ್ತೇವೆ. ಕೆಲವರು ವಾಕ್ ಸ್ವಾತಂತ್ರ್ಯವನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳುತ್ತೆವೆ ಎಂದು ಹೇಳಿದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಯಿತಾ? ಮುಂದೆ ಕಾದಿದೆ ದೊಡ್ಡ ಗಂಡಾಂತರ

ಕಿಡಿಕಾರಿದ ಬಿಜೆಪಿ

ಇನ್ನು ಶರಣಪ್ರಕಾಶ ಪಾಟೀಲ್​ ಅವರ ಹೇಳಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. “ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿರುವುದು ಸಿಲ್ಲಿ ಅಟೆಂಪ್ಟಾ? ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ್ದು ಸಿಲ್ಲಿ ಅಟೆಂಪ್ಟಾ? ನೂರಾರು ಜನ ಸತ್ತರೆ ಮಾತ್ರ ನಿಮ್ಮ ಪ್ರಕಾರ ಭಯೋತ್ಪಾದನಾ ದಾಳಿ. ಹತ್ತು ಜನ ಬಾಂಬ್‌ ಸ್ಫೋಟದಿಂದ ಗಾಯಗೊಂಡರೆ ನಿಮಗೆ ಸಣ್ಣ ಘಟನೆ. ಬಾಂಬ್‌ ಇಟ್ಟವನು ಬ್ರದರ್‌, ಬೆಂಕಿ ಹಚ್ಚಿದವರಿಗೆ ಅಮಾಯಕ ಅನ್ನೋ ಪಟ್ಟ ಕಟ್ಟುವ ನಿಮಗೆ, ನಿಮ್ಮ ಸಿಲ್ಲಿ ಅಟೆಂಪ್ಟ್‌‌ಗಳಿಗೆ ಕರ್ನಾಟಕದ ಜನತೆ ಇನ್ನೊಂದು ತಿಂಗಳಲ್ಲಿ ತಕ್ಕ ಉತ್ತರ ನೀಡ್ತಾರೆ” ಎಂದು ಕಿಡಿಕಾರಿದೆ.

ಉದ್ದೇಶಪೂರ್ವಕವಾಗಿ ಮಾಡಿದ ಘಟನೆ: ಯತ್ನಾಳ್​

ಉದ್ದೇಶಪೂರ್ವಕವಾಗಿ ಮಾಡಿದ ಘಟನೆ ಇದಾಗಿದೆ. ದೇಶಗಳಲ್ಲಿ ಅಸ್ಥಿರತೆ ಉಂಟು ಮಾಡಲು ಬ್ಲಾಸ್ಟ್ ಮಾಡಲಾಗಿದೆ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಮಾಡಲಾಗಿದೆ. ಶರಣಪ್ರಕಾಶ ಪಾಟೀಲ್ ಹಾಗೇ ಹೇಳುತ್ತಾರೆ. ಕುಕ್ಕರ್ ಬ್ಲಾಸ್ಟ್ ಆದಾದ ನಮ್ಮ ಬ್ರದರ್ಸ್ ಮಾಡಿಲ್ಲ ಎಂದಿದ್ದರು. ಈಗಾ ಬ್ರದರ್ಸ್ ಏನ್ ಹೇಳುತ್ತಿದ್ದಾರೆ. ಕುಕ್ಕರ್ ಬ್ಲಾಸ್ಟ್​ಗೂ ರಾಮೇಶ್ವರ ಕೆಫೆ ಬ್ಲಾಸ್ಟ್​ಗೂ ಸಾಮ್ಯತೆಯಿದೆ ಎಂದು ಹೇಳುತ್ತಿದ್ದಾರೆ. ಬ್ಲಾಸ್ಟ್ ಕುರಿತು ಎನ್​ಐಎ ತನಿಖೆ ಮಾಡುತ್ತಿದೆ. ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ ಹೇಳಿದರು.

ಎನ್​ಐಎದವರು ಆರ್​ಎಸ್​ಎಸ್ ಮುಖಂಡ ರುದ್ರೇಶ ಹಂತಕ ಆಫ್ರೀಕಾದಲ್ಲಿದ್ದನನ್ನು ಬಂಧನ ಮಾಡಿದ್ದಾರೆ. ಬ್ಲಾಸ್ಟ್ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ದೇಶದ ಆಂತರಿಕ ಭದ್ರತೆ ವಿಚಾರವಾಗಿ ರಾಜ್ಯ ಸರ್ಕಾರ ಬ್ಲಾಸ್ಟ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:27 am, Sun, 3 March 24

ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್