ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಯಿತಾ? ಮುಂದೆ ಕಾದಿದೆ ದೊಡ್ಡ ಗಂಡಾಂತರ

ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ ಸಮೀಪದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​​​ ಸ್ಫೋಟ ಸಂಭವಿದೆ. ಈ ಸ್ಫೋಟದಿಂದ ಅನೇಕರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತನಿಖೆ ಕೂಡ ನಡೆಸಲಾಗುತ್ತಿದೆ. ಇದರ ನಡುವೆ ಒಂದು ವಾರಗಳು ಹಿಂದೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾದಂತಿದೆ.

Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 02, 2024 | 2:08 PM

ಬೆಂಗಳೂರನ್ನು ಬೆಚ್ಚಿಬೀಳಿಸಿದ ರಾಮೇಶ್ವರಂ ಕೆಫೆಯ (Rameshwaram Cafe Blast) ಬಾಂಬ್ ಬ್ಲಾಸ್ಟ್ ಇದೀಗ ದೇಶದ್ಯಾಂತ ಸುದ್ದಿಯಾಗುತ್ತಿದೆ. ಮಧ್ಯಾಹ್ನ ಸರಿಯಾಗಿ 12.55 ಹೊತ್ತಿಗೆ ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ ಸಮೀಪದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​​​ ಸ್ಫೋಟ ಸಂಭವಿದೆ. ಈ ಸ್ಫೋಟದಿಂದ ಅನೇಕರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಈಗಾಗಲೇ ಸರ್ಕಾರ ಕೂಡ ತನಿಖೆ ನಡೆಸಲು ಆದೇಶವನ್ನು ನೀಡಿದೆ. ಇದರ ನಡುವೆ ಒಂದು ವಾರಗಳು ಹಿಂದೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ ನಿಜವಾದಂತಿದೆ. ಕೋಡಿಮಠ ಶ್ರೀ 2024 ಅತ್ಯಂತ ಅಪಾಯಕಾರಿ ವರ್ಷ, ಈ ಕಾಲದಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತದೆ.  ಬಾಂಬ್ ಸ್ಫೋಟ, ಭೂಕಂಪ, ಧಾರ್ಮಿಕ ಮುಖಂಡನ ಸಾವು ಸಂಭವಿಸಲಿದೆ ಎಂಬ ಭವಿಷ್ಯವನ್ನು ನುಡಿದ್ದಿದರು. ಇದೀಗ ಕೋಡಿಮಠ ಶ್ರೀ ಹೇಳಿದ ಬಾಂಬ್​​​​​ ಸ್ಫೋಟ ಇದೇನಾ? ಎಂಬ ಪ್ರಶ್ನೆ ಮೂಡಿದೆ.

ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ರೈತರಿಗೆ ಒಂದು ಸಮಾಧಾನಕರ ಭವಿಷ್ಯವೊಂದನ್ನು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಹಾಗೂ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನು ಸಾಕಷ್ಟು ಸಮಯವಿದೆ. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದಿದ್ದರು.

ಇದನ್ನೂ ಓದಿ: ಯುಗಾದಿ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ:

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ. ಒಂದು ಬಾರಿ ಇಡಿ ಬೆಂಗಳೂರನ್ನು ಈ ಘಟನೆ ನಡುಗಿಸಿದೆ. ಇನ್ನು ಸ್ಫೋಟವಾದ ಸ್ಥಳದಲ್ಲಿ ಟೈಮರ್ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಫೋಟದ ವಿಚಾರ ಗೊತ್ತಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹೆಚ್​ಎಎಲ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಕೂಡ ಪತ್ತೆಯಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್​ ಮತ್ತು ತಂಡ ಆಗಮಿಸಿ ಸ್ಫೋಟದ ಸ್ಥಳದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದರು. ಇನ್ನು ಬಾಂಬ್​ ನಿಷ್ಕ್ರಿಯ ದಳ, ಶ್ವಾನ ದಳ, ಎಫ್​ಎಸ್ಎಲ್​ ತಜ್ಞರೂ ಪರಿಶೀಲನೆ ನಡೆಸಿದ್ದು, NIA ಅಧಿಕಾರಿಗಳು ಕೂಡ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Sat, 2 March 24

Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್