ರಾಮೇಶ್ವರಂ ಕೆಫೆ ಬ್ಲಾಸ್ಟ್​: ಉದ್ಯಮದಲ್ಲಿ ಬೆಳವಣಿಗೆ ಸಹಿಸದೆ, ಬೆಂಗಳೂರು ಅನ್​ಸೇಫ್​ ಅಂತ ಸೃಷ್ಟಿಸಲು ಈ ರೀತಿ ಮಾಡಿರಬಹುದು; ಪರಮೇಶ್ವರ್​​

ಪ್ರಕರಣದ ತನಿಖೆ ಈಗಾಗಲೆ ಎಂಡು ತಂಡಗಳನ್ನು ರಚನೆ ಮಾಡಿದ್ದೇವೆ. ‌ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಅಲ್ಲದೆ ಎನ್​ಐಎ ಮತ್ತು ಎನ್​ಎಸ್​ಜಿ ತಂಡದವರೂ ತನಿಖೆ ನಡೆಸುತ್ತಿದ್ದಾರೆ. ಕೆಲವು ಮಾಹಿತಿಗಳು ನಮಗೆ ಲಭ್ಯವಾಗಿವೆ ಗೃಹ ಸಚಿವ ಜಿ ಪರಮೇಶ್ವರ್​ ಹೇಳಿದರು.

ರಾಮೇಶ್ವರಂ ಕೆಫೆ ಬ್ಲಾಸ್ಟ್​: ಉದ್ಯಮದಲ್ಲಿ ಬೆಳವಣಿಗೆ ಸಹಿಸದೆ, ಬೆಂಗಳೂರು ಅನ್​ಸೇಫ್​ ಅಂತ ಸೃಷ್ಟಿಸಲು ಈ ರೀತಿ ಮಾಡಿರಬಹುದು; ಪರಮೇಶ್ವರ್​​
ಗೃಹ ಸಚಿವ ಜಿ ಪರಮೇಶ್ವರ್​
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:Mar 03, 2024 | 12:05 PM

ಬೆಂಗಳೂರು, ಮಾರ್ಚ್​ 03: ರಾಮೇಶ್ವರಂ ಕೆಫೆ​ಯಲ್ಲಿ ಸ್ಫೋಟ (Bengaluru Rameshwaram Cafe Bomb Blast) ಸಂಭವಿಸಿದ ದಿನ ನಾನು ಸ್ಥಳಕ್ಕೆ ಹೋಗಿದ್ದೆ. ರಾಮೇಶ್ವರಂ ಕೆಫೆ​ಯವರು 12 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. ಉದ್ಯಮದಲ್ಲಿ ಬೆಳವಣಿಗೆಯಾಗುತ್ತಿರುವುದನ್ನು ಸಹಿಸಲಾಗದವರು ಈ ರೀತಿ ಮಾಡಿರಬಹುದು ಅಂತ ಅಲ್ಲಿನ ಜನ ಹೇಳ್ಳುತ್ತಿದ್ದರು. ಇದಲ್ಲದೆ ಲೋಕಸಭೆ ಚುನಾವಣೆ ಸಮಯದಲ್ಲಿ ಯಾವುದಾದರೂ ಸಂಘಟನೆ ಬೆಂಗಳೂರನ್ನು ಅನ್​ಸೇಫ್ ನಗರ ಮಾಡಬೇಕು ಅಂತ, ನಗರಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದ್ದು, ಈ ಸಮಯದಲ್ಲಿ ಹೀಗೆ ಮಾಡಿದರೆ ಬಂಡವಾಳ ಹಾಕುವವರು ಬರುವುದಿಲ್ಲ ಅಂತ ಹೀಗೆ ಮಾಡಿರಬಹುದು. ಅಥವಾ ಬೇರೆ ಯಾವುದೋ ಕಾರಣ ಇರಬಹುದು. ಒಟ್ಟಿನಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಎಷ್ಟೇ ಕಷ್ಟವಾದರೂ ಪ್ರಕರಣ ಬೇಧಿಸುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parmeshwara)​ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆ ಈಗಾಗಲೆ ಎಂಡು ತಂಡಗಳನ್ನು ರಚನೆ ಮಾಡಿದ್ದೇವೆ. ‌ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಅಲ್ಲದೆ ಎನ್​ಐಎ ಮತ್ತು ಎನ್​ಎಸ್​ಜಿ ತಂಡದವರೂ ತನಿಖೆ ನಡೆಸುತ್ತಿದ್ದಾರೆ. ಕೆಲವು ಮಾಹಿತಿಗಳು ನಮಗೆ ಲಭ್ಯವಾಗಿವೆ. ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಎಫ್​ಎಸ್​ಎಲ್​​ನವರು ಈಗಾಗಲೇ ಮಾದರಿಗಳನ್ನು ಸಂಗ್ರಹಿಸಿ ಟೆಕ್ನಿಕಲ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಫೋಟಿಸಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ವ್ಯಕ್ತಿಯನ್ನು ಆದಷ್ಟು ಬೇಗ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು.

ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಮತ್ತು ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಟೆಕ್ನಿಕಲ್ ಸಾಮ್ಯತೆ ಇದೆ. ಹಾಗಂತ ಅವರೇ ಮಾಡಿದ್ದಾರೆ ಅಂಥ ಅರ್ಥ ಅಲ್ಲ. ಬ್ಯಾಟಿರಿ, ಮೊಳೆ, ಟೈಮರ್ ಎಲ್ಲವನ್ನು ನೋಡಿದರೆ ಸಾಮ್ಯತೆ ಇದೆ. ಈ ಬಗ್ಗೆ ಇನ್ನೂ ತನಿಖೆ ಮಾಡಬೇಕು ಎಂದರು.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್ ಸಿಲ್ಲಿ ಅಟೆಂಪ್ಟ್‌‌: ಸಚಿವ ಶರಣಪ್ರಕಾಶ ವಿರುದ್ಧ ಬಿಜೆಪಿ ಆಕ್ರೋಶ

ಬಾಂಬ್ ತೀವ್ರತೆ ಬಹಳ ಕಡಿಮೆ ಇದೆ. ಹೀಗಾಗಿ‌ ದೊಡ್ಡ ಅನಾಹುತ ಆಗಿಲ್ಲ. ಕ್ವಾಂಟಿಟಿ ಕಡಿಮೆ ಇರಬಹುದು. ಹೆಚ್ಚು ಕ್ವಾಂಟಿಟಿ ಉಪಯೋಗಿಸಿದ್ದರೇ ಇಂಪ್ಯಾಕ್ಟ್ ಜಾಸ್ತಿ ಆಗುತ್ತಿತ್ತು. ಬಾಂಬ್ ಸಿಡಿದಾಗ ಮೊಳೆಗಳು, ನಟ್​​ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೆ ಪಕ್ಕಕ್ಕೆ ಸಿಡಿದಿದ್ದರೆ ಬಹಳ‌ ಜನರ ಪ್ರಾಣಾಪಾಯ ಆಗುತ್ತಿತ್ತು. ಅದೃಷ್ಟವಶಾತ್ ಮೊಳೆಗಳು ಮೇಲೆ ಹೋಗಿವೆ.

ಪಾಕಿಸ್ತಾನ ಜಿಂದಾಬಾದ್ ಎಂಬ ಪ್ರಕರಣದಲ್ಲಿ ಎಫ್​ಎಸ್​ಎಲ್​​ ವರದಿ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವತ್ತೂ 48 ಗಂಟೆಯಲ್ಲಿ ವರದಿ ಬರುತ್ತೆ ಅಂತಾ ಹೇಳಿಲ್ಲ. 5-6 ಆಯಾಮಗಳಲ್ಲಿ ಪರಿಶೀಲನೆ ಮಾಡಬೇಕಾಗುತ್ತೆ. ಎಫ್​ಎಸ್​ಎಲ್​​ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತೆ. ಎಲ್ಲಾ ಕೆಲಸ ಬಿಟ್ಟು ಇದನ್ನೇ ಮೊದಲು ಮಾಡಿ ಎಂದು ಹೇಳಿದ್ದೇನೆ ಎಂದು ತಿಳಸಿದರು.

ಇನ್ನು ಶರಣಪ್ರಕಾಶ ಪಾಟೀಲ್​ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನೀವೆಲ್ಲ ಹೋಗಿ ಕೇಳಿದಾಗ ಹೇಳಿರುತ್ತಾರೆ. ಅದು ಅಧಿಕೃತ ಅಂತ ಅನ್ನಿಸುವುದಿಲ್ಲ. ಅವರ ದೃಷ್ಟಿಕೋನದಲ್ಲಿ ಅವರು ಹೇಳಿರುತ್ತಾರೆ. ನಾವು ಅನೇಕ ಮಾಹಿತಿಯನ್ನು ಇಟ್ಟುಕೊಂಡು ಹೇಳಿರುತ್ತೇವೆ. ನಾನು, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹೇಳಿದಾಗ ಜವಾಬ್ದಾರಿಯಿಂದ ಹೇಳಿರುತ್ತೇವೆ‌. ಎಲ್ಲರಿಗೂ ವಿನಂತಿ ಮಾಡಿಕೊಳ್ಳುತ್ತೇನೆ, ಮುಖ್ಯಮಂತ್ರಿಗಳು, ನಾನು ಅಥವಾ ಗೃಹ ಇಲಾಖೆ ಹೇಳಿದರೇ ಮಾತ್ರ ಅಧಿಕೃತ ಹೇಳಿಕೆ ಅಂತ ಪರಿಗಣಸಿಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:13 am, Sun, 3 March 24

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ