AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಮತ್ತೆ ಏರುಪೇರು, ಐಸಿಯುನಲ್ಲಿ ಚಿಕಿತ್ಸೆ!

ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಕೂಡಲೇ ಅವರನ್ನು ಬೆಳಗಾವಿ ಕೆಎಲ್​ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ತಿಳಿಸಿದ್ದಾರೆ.

ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಮತ್ತೆ ಏರುಪೇರು, ಐಸಿಯುನಲ್ಲಿ ಚಿಕಿತ್ಸೆ!
ರಮೇಶ ಜಿಗಜಿಣಗಿ
Sahadev Mane
| Edited By: |

Updated on:Mar 03, 2024 | 11:35 AM

Share

ವಿಜಯಪುರ, (ಮಾರ್ಚ್ 03): ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ (BJP MP ramesh jigajinagi) ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ (ಮಾರ್ಚ್​ 2) ತಡ ರಾತ್ರಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಕಳೆದ ಜನವರಿ 28ರಂದು ಸಹ ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ದಿಢೀರ್ ಉಸಿರಾಟ ಸಮಸ್ಯೆಯಾಗಿತ್ತು. ಕೂಡಲೇ ಅವರನ್ನು ಬಾಗಲಕೋಟೆ ‌ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮತ್ತೆ ರಮೇಶ್ ಜಿಗಜಿಣಗಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಇದನ್ನೂ ಓದಿ: ವಿಜಯಪುರ ಸಂಸದ‌ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ನಿನ್ನೆ ತಡ ರಾತ್ರಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ, ಆಸ್ಪತ್ರೆ ವೈದ್ಯರು, ಯಾರ ಭೇಟಿಗೂ ಅವಕಾಶ ಮಾಡಿಕೊಡುತ್ತಿಲ್ಲ. ನಿನ್ನೆ ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಒಳಗಡೆ ಬಿಟ್ಟಿಲ್ಲ. ಇಂದು ಮತ್ತೆ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತೇವೆ ಎಂದ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ತಿಳಿಸಿದ್ದಾರೆ.

ಜನವರಿಯಲ್ಲೂ ಆರೋಗ್ಯ ಸಮಸ್ಯೆ

ಕಳೆದ ಜನವರಿ 28ರಂದು ಅಷ್ಟೇ ರಮೇಶ್ ಜಿಗಜಿಣಗಿ ವಿಜಯಪುರದಿಂದ ಬೆಳಗಾವಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಏಕಾಏಕಿ ಉಸಿರಾಟ ಸಮಸ್ಯೆಯಾಗಿತ್ತು. ಆಗ ಜಿಗಜಿಣಗಿರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಪಾಸಣೆ ಮಾಡಿ ಅಕ್ಸಿಜನ್ ಲೇವಲ್ ಕಮ್ಮಿ ಆಗಿತ್ತು. ಈ ಹಿನ್ನೆಲೆಯಲ್ಲಿ ಹಾರ್ಟ್ ಬಿಟ್ ವ್ಯತ್ಯಾಸ ಆಗಿತ್ತು ಎಂದು ಹೇಳಿದ್ದರು. ಇದೀಗ ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆದ್ರೆ, ಈ ಬಾರಿ ಏನಾಗಿದೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಈ ಬಗ್ಗೆ ಕುಟುಂಬಸ್ಥರು, ವೈದ್ಯರಾಗಲಿ ಇನ್ನೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಚುನಾವಣಾ ಹೊತ್ತಿಲ್ಲೇ ಕೈಕೊಡುತ್ತಿರುವ ಆರೋಗ್ಯ

ವಿಜಯಪುರ ಎಸ್​​ಸಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ರಮೇಶ್ ಜಿಗಜಿಣಗಿ ಅವರು ಈ ಬಾರಿಯೂ ಮತ್ತೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೊನ್ನೇ ಅಷ್ಟೇ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದರು. ಆದ್ರೆ, ಇದೀಗ ಅವರಿಗೆ  ಪದೇ ಪದೇ ಆರೋಗ್ಯ ಕೈಕೊಡುತ್ತಿದೆ. ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಆರೋಗ್ಯ ಕೈಕೊಟ್ಟಿದೆ.  ಹೀಗಾಗಿ ಆರೋಗ್ಯ. ಮತ್ತು ವಯಸ್ಸಿನ   ದೃಷ್ಟಿಯಿಂದ ಈ ಬಾರಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುವುದು ಅನುಮಾನ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:23 am, Sun, 3 March 24

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ