ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟೆ, (ಜನವರಿ 28): ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ (BJP MP ramesh jigajinagi) ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಕುಮಾರೇಶ್ವರ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ಜಿಗಜಿಣಗಿ ಆರೋಗ್ಯ ಬಗ್ಗೆ ವೀರಣ್ಣ ಚರಂತಿಮಠ ಮಾಹಿತಿ
ರಮೇಶ್ ಜಿಗಜಿಣಗಿ ಸ್ಥಿರವಾಗಿದೆ, ಯಾವ ತೊಂದರೆ ಇಲ್ಲ. ವಿಜಯಪುರದಿಂದ ಬೆಳಗಾವಿಗೆ ರಮೇಶ್ ಜಿಗಜಿಣಗಿ ಹೋಗುತ್ತಿದ್ದರು. ಬಳಿಕ ಬೆಳಗಾವಿಯಿಂದ ಕೇಂದ್ರ ಬಜೆಟ್ ಅಧಿವೇಶನಕ್ಕೆ ಹೊರಟಿದ್ದರು. ಆದ್ರೆ, ಮಾರ್ಗ ಮಧ್ಯೆ ಜಿಗಜಿಣಗಿಗೆ ಉಸಿರಾಟ ಸಮಸ್ಯೆಯಾಗಿದೆ. ಆಗ ಜಿಗಜಿಣಗಿರನ್ನು ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು,
ರಮೇಶ್ ಜಿಗಜಿಣಗಿ ಆರೋಗ್ಯದ ವೈದ್ಯ ಡಾ: ಸುಭಾಷ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರಮೇಶ್ ಜಿಗಜಿಣಗಿ ಅವರು ಮಧ್ಯಾಹ್ನ 3.30ಕ್ಕೆ ಆಸ್ಪತ್ರೆಗೆ ಬಂದಿದ್ದಾರೆ. ಉಸಿರಾಟದಲ್ಲಿ ಏರುಪೇರು ಆಗಿತ್ತು. ಅಕ್ಸಿಜನ್ ಲೇವಲ್ ಕಮ್ಮಿ ಆಗಿತ್ತು, ಹಾರ್ಟ್ ಬಿಟ್ ವ್ಯತ್ಯಾಸ ಆಗಿತ್ತು. ಇಲ್ಲಿಗೆ ಬಂದ ಮೇಲೆ ಅಕ್ಸಿಜನ್ ಕೊಟ್ಟು ಸಿಟಿ, ಸ್ಕ್ಯಾನ್ ಇಸಿಜಿ ಮಾಡಿ ತಪಾಸಣೆ ಮಾಡಲಾಗಿದೆ. ಸ್ವಲ್ಪ ಪ್ರಮಾಣ ವಾಟರ್ ಕಂಟೆಂಟ್ ಸ್ಟೋರ್ ಆಗಿತ್ತು. ಟ್ರೀಟ್ಮೆಂಟ್ ಕೊಟ್ಟ ಮೇಲೆ ಎಲ್ಲಾ ಸ್ಟೇಬಲ್ ಆಗಿದೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ, ಹೃದಯಾಘಾತ ಆಗಿಲ್ಲ. ಮೊದಲಿಂದಲೂ ಕೂಡ ಪ್ರಾಬ್ಲಂ ಇತ್ತು. ಇಸಿಜಿ, ಚಸ್ಟ್ ಸಿಟಿ ಸ್ಕ್ಯಾನ್ ಎಲ್ಲ ಮಾಡಲಾಗಿದೆ. ಸದ್ಯ ಈಗ ನಾರ್ಮಲ್ ಇದ್ದಾರೆ ಭಯ ಪಡುವ ಅವಶ್ಯಕತೆಇಲ್ಲ. ಎರಡು ದಿನಗಳಲ್ಲಿ ಡಿಸ್ಚಾರ್ಜ್ ಅಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
Published On - 3:59 pm, Sun, 28 January 24