Post Budget Webinar: ಇಂದು ಮಹಿಳೆಯರ ಆರ್ಥಿಕ ಸಬಲೀಕರಣ ಕುರಿತು ಪ್ರಧಾನಿ ಮೋದಿ ಭಾಷಣ

|

Updated on: Mar 10, 2023 | 7:14 AM

PM Modi talk Economic Empowerment of Women: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಮಾ.10) ಬೆಳಿಗ್ಗೆ 10 ಗಂಟೆಗೆ ಪೋಸ್ಟ್​ ಬಜೆಟ್​ ವೆಬಿನಾರ್​​ನ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ "ಮಹಿಳೆಯರ ಆರ್ಥಿಕ ಸಬಲೀಕರಣ" ವಿಷಯದ ಮೇಲೆ ಮಾತನಾಡಲಿದ್ದಾರೆ.

Post Budget Webinar: ಇಂದು ಮಹಿಳೆಯರ ಆರ್ಥಿಕ ಸಬಲೀಕರಣ ಕುರಿತು ಪ್ರಧಾನಿ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಂದು (ಮಾ.10) ಬೆಳಿಗ್ಗೆ 10 ಗಂಟೆಗೆ ಪೋಸ್ಟ್​ ಬಜೆಟ್​ ವೆಬಿನಾರ್​​ನ (Post Budget Webinar) ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ “ಮಹಿಳೆಯರ ಆರ್ಥಿಕ ಸಬಲೀಕರಣ” (Economic Empowerment of Women) ವಿಷಯದ ಮೇಲೆ ಮಾತನಾಡಲಿದ್ದಾರೆ. ಇದು ಕೇಂದ್ರ ಸರ್ಕಾರವು (Central Governemnt) ಆಯೋಜಿಸುತ್ತಿರುವ ಬಜೆಟ್ ನಂತರದ ವೆಬಿನಾರ್‌ ಸರಣಿಯ ಭಾಗವಾಗವಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ವೆಬಿನಾರ್ ಅನ್ನು ಆಯೋಜಿಸಿದೆ. “ಮಹಿಳಾ ಮಾಲೀಕತ್ವದ ಮತ್ತು ಮಹಿಳಾ ನೇತೃತ್ವದ ವ್ಯಾಪಾರ ಉದ್ಯಮಗಳ ಸುಸ್ಥಿರ ಬೆಳವಣಿಗೆಯನ್ನು ಖಾತರಿಪಡಿಸುವ ಮಾರ್ಗಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ. ಹಾಗೂ ಬಜೆಟ್‌ ಘೋಷಣೆಗಳ ಅನುಷ್ಠಾನಕ್ಕಾಗಿ ಕಾರ್ಯತಂತ್ರ ಮತ್ತು ನೀಲನಕ್ಷೆಯನ್ನು ಅಭಿವೃದ್ಧಿಪಡಿಸುವುದು ಈ ವೆಬಿನಾರ್‌ನ ಉದ್ದೇಶವಾಗಿದೆ.

ಇದನ್ನೂ ಓದಿ: ರುಪೇ ಮತ್ತು ಯುಪಿಐ ಜಾಗತಿಕವಾಗಿ ಭಾರತದ ಗುರುತು ಎಂದ ಪ್ರಧಾನಿ ಮೋದಿ

ಈ ವೆಬಿನಾರ್​ನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಮಹೇಂದ್ರಭಾಯಿ ಮುಂಜಪಾರ ಮತ್ತು ಇತರ ಗಣ್ಯರು ಹಾಗೂ ಸಾರ್ವಜನಿಕ ಮತ್ತು ಖಾಸಗಿ ವಲಯದ ಅಧಿಕಾರಿಗಳು ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ವೆಬಿನಾರ್​ನಲ್ಲಿ ಸ್ವಸಹಾಯ ಗುಂಪುಗಳನ್ನು ದೊಡ್ಡ ವ್ಯಾಪಾರ ಉದ್ಯಮಗಳು ಹಾಗೂ ಸಮೂಹಗಳಾಗಿ ಉನ್ನತೀಕರಿಸುವುದು, ತಂತ್ರಜ್ಞಾನ ಮತ್ತು ಹಣಕಾಸು ಬಳಕೆ, ಮಾರುಕಟ್ಟೆಗಳು ಮತ್ತು ವ್ಯವಹಾರ ವಿಸ್ತರಣೆ ಎಂಬ 3 ವಿಷಯಗಳ ಅಡಿಯಲ್ಲಿ 3 ಪ್ರತ್ಯೇಕ ಅಧಿವೇಶನಗಳು ನಡೆಯಲಿವೆ. ಈ ಕ್ಷೇತ್ರಗಳ ತಜ್ಞರು, ಮಹಿಳಾ ಸ್ವಸಹಾಯ ಗುಂಪು ಒಕ್ಕೂಟಗಳು ಮತ್ತು ಇತರ ಮಧ್ಯಸ್ಥಗಾರರಿಂದ ವಿಷಯಗಳ ಮೇಲೆ ವ್ಯಾಪಕ ಚರ್ಚೆಗಳಾಗಲಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ