Manish Sisodia: ಜಾಮೀನು ವಿಚಾರಣೆಗೆ ಮುನ್ನ ಮನೀಶ್ ಸಿಸೋಡಿಯಾ ಬಂಧಿಸಿದ ಜಾರಿ ನಿರ್ದೇಶನಾಲಯ

ಸಿಬಿಐ ನ್ಯಾಯಾಲಯದಿಂದ ಜಾಮೀನು ಕೋರಿ ಬಂದಿರುವ ಸಿಸೋಡಿಯಾ ಅವರಿಗೆ ಇಡಿ ಬಂಧನವು ವಿಷಯಗಳನ್ನು ಸಂಕೀರ್ಣಗೊಳಿಸಲಿದೆ. ನಾಳೆ ಅವರನ್ನು ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಅದೇ ದಿನ ಜಾಮೀನು ಅರ್ಜಿ ವಿಚಾರಣೆ ಬರುವ ಸಾಧ್ಯತೆ ಇದೆ.

Manish Sisodia: ಜಾಮೀನು ವಿಚಾರಣೆಗೆ ಮುನ್ನ ಮನೀಶ್ ಸಿಸೋಡಿಯಾ ಬಂಧಿಸಿದ ಜಾರಿ ನಿರ್ದೇಶನಾಲಯ
ಮನೀಶ್ ಸಿಸೋಡಿಯಾ
Follow us
ರಶ್ಮಿ ಕಲ್ಲಕಟ್ಟ
|

Updated on:Mar 09, 2023 | 8:57 PM

ದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ (Delhi liquor policy case )ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಒಂದು ದಿನ ಮೊದಲು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಗುರುವಾರ ಇಡಿ (Enforcement Directorate) ಬಂಧಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರರು ದೆಹಲಿ ಮದ್ಯ ನೀತಿ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ ನಂತರ ಸರ್ಕಾರ ಪ್ರಸ್ತುತ ನೀತಿಯನ್ನು ಹಿಂಪಡೆದುಕೊಂಡಿತ್ತು. ನೀತಿ ರಚನೆ ಮಾಡುವಾಗ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದಡಿಯಲ್ಲಿ ಇಡಿ ಸಿಸೋಡಿಯಾ ಅವರನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದೆ. ಸಿಬಿಐ ನ್ಯಾಯಾಲಯದಿಂದ ಜಾಮೀನು ಕೋರಿ ಬಂದಿರುವ ಸಿಸೋಡಿಯಾ ಅವರಿಗೆ ಇಡಿ ಬಂಧನವು ವಿಷಯಗಳನ್ನು ಸಂಕೀರ್ಣಗೊಳಿಸಲಿದೆ. ನಾಳೆ ಅವರನ್ನು ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಅದೇ ದಿನ ಜಾಮೀನು ಅರ್ಜಿ ವಿಚಾರಣೆ ಬರುವ ಸಾಧ್ಯತೆ ಇದೆ.

ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಬಂಧಿಸಿದ ನಂತರ ಸಿಬಿಐನ ಕಸ್ಟಡಿ ಮುಗಿದ ನಂತರ ನ್ಯಾಯಾಂಗ ಬಂಧನದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಡಿ ಕ್ರಮವು ತಮ್ಮ ಪಕ್ಷದ ಸಹೋದ್ಯೋಗಿ ಸಿಸೋಡಿಯಾ ಅವರನ್ನು ಹೇಗಾದರು ಮಾಡಿ ವಶಕ್ಕೆ ತೆಗೆದುಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮನೀಶ್ ಅವರನ್ನು ಮೊದಲು ಸಿಬಿಐ ಬಂಧಿಸಿತ್ತು. ಸಿಬಿಐಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ, ದಾಳಿಯಲ್ಲಿ ಹಣ ಸಿಕ್ಕಿಲ್ಲ. ನಾಳೆ ಜಾಮೀನು ಅರ್ಜಿ ವಿಚಾರಣೆ ಇದೆ. ಮನೀಶ್ ನಾಳೆ ಬಿಡುಗಡೆಯಾಗಬೇಕಿತ್ತು. ಹೀಗಾಗಿ ಇಂದು ಇಡಿ ಅವರನ್ನು ಬಂಧಿಸಿದೆ. ಅವರಿಗೆ ಇರುವುದು ಒಂದೇ ಗುರಿ. ಪ್ರತಿದಿನ ಹೊಸ ಹೊಸ ನಕಲಿ ಪ್ರಕರಣಗಳನ್ನು ಸೃಷ್ಟಿಸುವ ಮೂಲಕ ಮನೀಶ್‌ನನ್ನು ಹೇಗಾದರೂ ಮಾಡಿ ಒಳಗೆ ಇಡುವುದು. ಜನ ನೋಡುತ್ತಿದ್ದಾರೆ. ಜನರೇ ಉತ್ತರಿಸುತ್ತಾರೆ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸಿಸೋಡಿಯಾ ಮತ್ತು ಇತರರು ಮದ್ಯದ ಕಾರ್ಟೆಲೈಸೇಶನ್ ಅನ್ನು ಅನುಮತಿಸಿದ ಆರೋಪಗಳನ್ನು ಎದುರಿಸುತ್ತಾರೆ. ದೆಹಲಿ ಮದ್ಯ ನೀತಿಯನ್ನು ರೂಪಿಸುವಲ್ಲಿ ಕೆಲವು ವಿತರಕರಿಗೆ ಅನುಕೂಲವಾಗಿದ್ದಾರೆ ಎಂಬ ಆರೋಪವೂ ಇವರ ಮೇಲಿದೆ. ವ್ಯಾಪಾರಿಗಳು ಅಥವಾ ರಾಜಕಾರಣಿಗಳಿಂದ ಎಎಪಿ ಲಂಚ ಸ್ವೀಕರಿಸಿದೆ ಎಂಬ ಆರೋಪವನ್ನು ಪಕ್ಷ ನಿರಾಕರಿಸಿದೆ.

ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸವಿದ್ದರೆ ಎಎಪಿ ಮದ್ಯ ನೀತಿಯನ್ನು ಹಿಂಪಡೆಯುತ್ತಿರಲಿಲ್ಲ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ:ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸದಸ್ಯರು ನಕಲಿ ಸುದ್ದಿ ಹರಡುತ್ತಿದ್ದಾರೆ: ತಮಿಳುನಾಡು ಸಿಎಂ ಸ್ಟಾಲಿನ್

ಜೈಲಿನಲ್ಲಿದ್ದಾಗ ಸಿಸೋಡಿಯಾ ಅವರು ಶಿಕ್ಷಣದ ರಾಜಕೀಯ vs ಜೈಲಿನ ರಾಜಕೀಯ ಎಂಬುದರ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ಬಂಧನಕ್ಕಿಂತ ಮುನ್ನ ಸಿಸೋಡಿಯಾ ದೆಹಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು ಅಬಕಾರಿ ಸೇರಿದಂತೆ ಹಲವಾರು ಖಾತೆಗಳನ್ನು ಹೊಂದಿದ್ದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಿಂತ ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕುವುದು ತುಂಬಾ ಸುಲಭ. ಶಿಕ್ಷಣದ ರಾಜಕೀಯದಲ್ಲಿ ಬಿಜೆಪಿಯ ನಿಜವಾದ ಸಮಸ್ಯೆ ಎಂದರೆ ಅದು ರಾಷ್ಟ್ರಗಳನ್ನು ನಿರ್ಮಿಸುತ್ತದೆಯೇ ಹೊರತು ನಾಯಕರಲ್ಲ.

ಶಿಕ್ಷಣದ ರಾಜಕೀಯವು ಸುಲಭದ ಕೆಲಸವಲ್ಲ ಮತ್ತು ಖಂಡಿತವಾಗಿಯೂ ರಾಜಕೀಯ ಯಶಸ್ಸಿನ ಸೂತ್ರವಲ್ಲ. ಇಂದು ಬಿಜೆಪಿಯ ಆಡಳಿತದಲ್ಲಿ ಜೈಲಿನ ರಾಜಕಾರಣ ಗೆಲ್ಲುತ್ತಿರಬಹುದು, ಆದರೆ ಭವಿಷ್ಯ ಶಿಕ್ಷಣದ ರಾಜಕೀಯಕ್ಕೆ ಸೇರಿದೆ ಎಂದು ಸಿಸೋಡಿಯಾ ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Thu, 9 March 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ