ಪಂಜಾಬ್ ನ ನ್ಯೂ ಚಂಡೀಗಢದ ಮುಲ್ಲಾನ್ಪುರದಲ್ಲಿ ನಿರ್ಮಿಸಲಾಗಿರುವ ಹೋಮಿ ಭಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ನ್ನು (Homi Bhabha Cancer Hospital Research Centre) ಬುಧವಾರ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಆಸ್ಪತ್ರೆಯ ನಿರ್ಮಾಣಕ್ಕಾಗಿಕೇಂದ್ರ ಸರ್ಕಾರ ಸುಮಾರು ರೂ. 660 ಕೋಟಿ ವ್ಯಯಿಸಿದೆ. ಕ್ಯಾನ್ಸರ್ ಆಸ್ಪತ್ರೆಯು 300 ಹಾಸಿಗೆ ಸಾಮರ್ಥ್ಯ ಹೊಂದಿದ್ದು ಲಭ್ಯವಿರುವ ಎಲ್ಲಾ ಚಿಕಿತ್ಸಾ ವಿಧಾನಗಳಾದ ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ವೈದ್ಯಕೀಯ ಆಂಕೊಲಾಜಿ, ಕೀಮೋಥೆರಪಿ, ಇಮ್ಯುನೊಥೆರಪಿ ಮತ್ತು ಮೂಳೆ ಮಜ್ಜೆಯ ಕಸಿ ಬಳಸಿಕೊಂಡು ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಪಂಜಾಬ್‌ನ ಕೆಲವು ಭಾಗಗಳಲ್ಲಿ ಕ್ಯಾನ್ಸರ್ ರೋಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದಲ್ಲದೆ ದುಬಾರಿಯಲ್ಲದ ಕ್ಯಾನ್ಸರ್ ಚಿಕಿತ್ಸೆಗಾಗಿ ಜನರು ಇತರ ರಾಜ್ಯಗಳಿಗೆ ಹೋಗಲೇ ಬೇಕಾಗಿರುವುದರಿಂದ ಈ ಯೋಜನೆ ಮಹತ್ವದ್ದಾಗಿದೆ. ಈ ಸಮಸ್ಯೆಯು ಎಷ್ಟು ಗಂಭೀರವಾಗಿದೆಯೆಂದರೆ ಬಟಿಂಡಾದಿಂದ ಬಂದ ರೈಲನ್ನು ಕ್ಯಾನ್ಸರ್ ರೈಲು ಎಂದು ಕರೆಯಲಾಗುತ್ತಿತ್ತು.
ನ್ಯೂ ಚಂಡೀಗಢದಲ್ಲಿರುವ ಈ ಆಸ್ಪತ್ರೆಯು ಕ್ಯಾನ್ಸರ್ ಆರೈಕೆಯ ಕೇಂದ್ರವನ್ನು ಹೊಂದಿದೆ. ಕೇಂದ್ರ ಸರ್ಕಾರದಿಂದ 100 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯು 2018 ರಿಂದ ಸಂಗ್ರೂರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಈಗ ಈ ಆಸ್ಪತ್ರೆಯ ಭಾಗವಾಗಿ ಕಾರ್ಯನಿರ್ವಹಿಸುತ್ತದೆ. ನೆರೆಯ ರಾಜ್ಯಗಳ ರೋಗಿಗಳಿಗೂ ಈ ಆಸ್ಪತ್ರೆ ನೆರವಾಗಲಿದೆ.
2014 ರಿಂದ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಕೈಗೆಟುಕುವಂತೆ ಮತ್ತು ಸುಲಭವಾಗಿ ಹೇಗೆ ಮಾಡಲಾಗುತ್ತಿದೆ:
ಆಯುಷ್ಮಾನ್ ಭಾರತ್ ಅಡಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಯು ಹೊರೆಯಾಗದಂತೆ ಹೆಚ್ಚಿನ ಗಮನ ನೀಡಲಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ.. ಕಿಮೊಥೆರಪಿ ಮತ್ತು ರೇಡಿಯೊಥೆರಪಿ ಪ್ಯಾಕೇಜುಗಳು, ಶಸ್ತ್ರಚಿಕಿತ್ಸಾ ಆಂಕೊಲಾಜಿಯೊಂದಿಗೆ ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಪಟ್ಟಿ ಮಾಡಿದ ಆಸ್ಪತ್ರೆಗಳಲ್ಲಿ ಈ ಯೋಜನೆ ಇದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಒಟ್ಟು 435 ಕಾರ್ಯವಿಧಾನಗಳನ್ನು ವ್ಯಾಖ್ಯಾನಿಸಲಾಗಿದೆ.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ (PMSSY) ಆಶ್ರಯದಲ್ಲಿ ಸ್ಥಾಪಿಸಲಾಗುತ್ತಿರುವ ನೂತನ ಏಮ್ಸ್ ನಲ್ಲಿ ಅದರ ವಿವಿಧ ಅಂಶಗಳಲ್ಲಿ ಆಂಕೊಲಾಜಿಗೆ ಗಮನವನ್ನು ಖಾತ್ರಿಪಡಿಸಲಾಗಿದೆ. PMSSY ಅಡಿಯಲ್ಲಿ ಇತರ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್ ಆರೈಕೆ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA), 2019 ರಲ್ಲಿ ಶೇ 87ವರೆಗೆ ಎಂಆರ್ ಪಿ ಕಡಿತದೊಂದಿಗೆ 390 ಕ್ಯಾನ್ಸರ್ ವಿರೋಧಿ ನಾನ್-ಶೆಡ್ಯೂಲ್ಡ್ ಔಷಧಿಗಳ ಪಟ್ಟಿಯನ್ನು ನೀಡಿದೆ.
ಕ್ರಿಯಾತ್ಮಕ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (AB-HWCs) ಬಾಯಿಯ ಕ್ಯಾನ್ಸರ್‌ಗಾಗಿ 10.33 ಕೋಟಿಗೂ ಹೆಚ್ಚು ಸ್ಕ್ರೀನಿಂಗ್‌ಗಳನ್ನು ಮಾಡಿದೆ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ಗಾಗಿ 3.41 ಕೋಟಿಗೂ ಹೆಚ್ಚು ಸ್ಕ್ರೀನಿಂಗ್‌ಗಳನ್ನು ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ಗಾಗಿ 5.06 ಕೋಟಿಗೂ ಹೆಚ್ಚು ಸ್ಕ್ರೀನಿಂಗ್‌ಗಳನ್ನು ಮಾಡಿದೆ. (ಏಪ್ರಿಲ್ 2022 ಮಾಹಿತಿಯಂತೆ )
ಇತ್ತೀಚೆಗೆ ಪ್ರಧಾನಿ ಉದ್ಘಾಟಿಸಿದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳು
ಪ್ರಿಲ್ 28, 2022 ರಂದು ದಿಬ್ರುಗಢದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿ ಏಳು ಕ್ಯಾನ್ಸರ್ ಆಸ್ಪತ್ರೆಗಳನ್ನು ದೇಶಕ್ಕೆ ಸಮರ್ಪಿಸಿದರು. ಈ ಕ್ಯಾನ್ಸರ್ ಆಸ್ಪತ್ರೆಗಳನ್ನು ದಿಬ್ರುಗಢ್, ಕೊಕ್ರಜಾರ್, ಬಾರ್ಪೇಟಾ, ದರ್ರಾಂಗ್, ತೇಜ್‌ಪುರ, ಲಖಿಂಪುರ ಮತ್ತು ಜೋರ್ಹತ್‌ನಲ್ಲಿ ನಿರ್ಮಿಸಲಾಗಿದೆ. ಸಮಾರಂಭದಲ್ಲಿ ಪ್ರಧಾನಿ ಮೋದಿ ಧುಬ್ರಿ, ನಲ್ಬರಿ, ಗೋಲ್ಪಾರಾ, ನಾಗಾಂವ್, ಶಿವಸಾಗರ್, ತಿನ್ಸುಕಿಯಾ ಮತ್ತು ಗೋಲಾಘಾಟ್‌ನಲ್ಲಿ ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ಮಾಡಿದರು.
2022 ಜನವರಿ 7ರಂದು, ಕೋಲ್ಕತ್ತಾದ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಎರಡನೇ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದು 460 ಹಾಸಿಗೆಗಳ ಆಸ್ಪತ್ರೆಯಾಗಿದೆ.