ಮೋದಿ ಕುಟುಂಬಕ್ಕೆ ಹೊಸ ಸದಸ್ಯೆ; ದೀಪಜ್ಯೋತಿಗೆ ಮುತ್ತಿಡುವ ವಿಡಿಯೊ ಶೇರ್ ಮಾಡಿದ ಪ್ರಧಾನಿ

|

Updated on: Sep 14, 2024 | 2:00 PM

ದಿಸಿ ಹೂಮಾಲೆ ಹಾಕುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದು, ನಮ್ಮ ಗ್ರಂಥಗಳಲ್ಲಿ ಗಾವಃ ಸರ್ವಸುಖ ಪ್ರದಾಃ ಎಂದು ಹೇಳಲಾಗಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿ  ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಮಂಗಳಕರ ಆಗಮನವಾಗಿದೆ. ಪ್ರಧಾನಿ ನಿವಾಸದಲ್ಲಿ ಪ್ರೀತಿಯ ತಾಯಿ ಹಸು ಹೊಸ ಕರುವಿಗೆ ಜನ್ಮ ನೀಡಿದ್ದು, ಹಣೆಯ ಮೇಲೆ ಬೆಳಕಿನ ಗುರುತು ಇದೆ. ಹಾಗಾಗಿ ಇದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ ಮೋದಿ.

ಮೋದಿ ಕುಟುಂಬಕ್ಕೆ ಹೊಸ ಸದಸ್ಯೆ; ದೀಪಜ್ಯೋತಿಗೆ ಮುತ್ತಿಡುವ ವಿಡಿಯೊ ಶೇರ್ ಮಾಡಿದ ಪ್ರಧಾನಿ
ನರೇಂದ್ರ ಮೋದಿ
Follow us on

ದೆಹಲಿ ಸೆಪ್ಟೆಂಬರ್ 14: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಲೋಕ ಕಲ್ಯಾಣ ಮಾರ್ಗದಲ್ಲಿರುವ (Lok Kalyan Marg) ತಮ್ಮ ನಿವಾಸಕ್ಕೆ ಹೊಸ ಸದಸ್ಯೆ ಬಂದಿದ್ದಾರೆ. ಈಕೆಯ ಹೆಸರು ದೀಪಜ್ಯೋತಿ (Deepjyoti). ಪ್ರಧಾನಿಯವರ ಮನೆಯ ಆವರಣದಲ್ಲಿರುವ ಹಸು ಕರು ಹಾಕಿದ್ದು, ಆ ಕರುವಿನ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕರುವಿನ ಹಣೆ ಮೇಲೆ ವಿಶಿಷ್ಟವಾದ ಗುರುತು ಇದು, ಇದು ಬೆಳಕಿನ ಸಂಕೇತವನ್ನು ಹೋಲುತ್ತದೆ. ಈ ವಿಶಿಷ್ಟ ವೈಶಿಷ್ಟ್ಯವನ್ನು ಗುರುತಿಸಿ, ಪ್ರಧಾನಿ ಮೋದಿ ಅವರು ಕರುವಿಗೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದಾರೆ.

ಪ್ರಧಾನಮಂತ್ರಿಯವರು ಕರುವನ್ನು ಮನೆಯೊಳಗೆ ಕರೆತಂದು ಅದಕ್ಕೆ ಶಾಲು ಹೊದಿಸಿ ಹೂಮಾಲೆ ಹಾಕುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದು, ನಮ್ಮ ಗ್ರಂಥಗಳಲ್ಲಿ ಗಾವಃ ಸರ್ವಸುಖ ಪ್ರದಾಃ ಎಂದು ಹೇಳಲಾಗಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿ  ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಮಂಗಳಕರ ಆಗಮನವಾಗಿದೆ. ಪ್ರಧಾನಿ ನಿವಾಸದಲ್ಲಿ ಪ್ರೀತಿಯ ತಾಯಿ ಹಸು ಹೊಸ ಕರುವಿಗೆ ಜನ್ಮ ನೀಡಿದ್ದು, ಹಣೆಯ ಮೇಲೆ ಬೆಳಕಿನ ಗುರುತು ಇದೆ. ಹಾಗಾಗಿ ಇದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ.

ಮೋದಿ ಟ್ವೀಟ್ ಮಾಡಿದ ವಿಡಿಯೊ

ದೀಪಜ್ಯೋತಿ ಜತೆ ಮೋದಿ


ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಪ್ರಧಾನಿ ಮೋದಿ ಅವರು ಕರುವನ್ನು ಪ್ರಾರ್ಥನೆ ಮಾಡಿ ಪ್ರೀತಿಯಿಂದ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಪ್ರಧಾನಿ ಕರುವನ್ನು ಮುದ್ದಾಡುವುದು ಮತ್ತು ಆಟವಾಡುವುದು, ಅದರ ಹಣೆಯ ಮೇಲೆ ಮುತ್ತಿಡುವ ವಿಡಿಯೊದಲ್ಲಿ ಕಾಣಬಹುದು.

ಇದನ್ನೂ ಓದಿ: ಲಂಡನ್​: ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ದಶಮಾನೋತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ಇನ್ನೊಂದು ಟ್ವೀಟ್  ನಲ್ಲಿ ಅವರು ಕರುವನ್ನು ಮುದ್ದಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:45 pm, Sat, 14 September 24