ಇಂದು (ನವೆಂಬರ್ 19) ಬೆಳಗ್ಗೆ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯವು ಟ್ವೀಟ್ ಮಾಡಿದ್ದು, ಮಾಹಿತಿ ಹಂಚಿಕೊಂಡಿದೆ. ಪ್ರಧಾನ ಮಂತ್ರಿಗಳ ಇಂದಿನ ಕಾರ್ಯಾಲಾಪಗಳ ಪಟ್ಟಿ ಬಿಡುಗಡೆ ಮಾಡಿರುವ ಪಿಎಮ್ಒ, ಉತ್ತರ ಪ್ರದೇಶ ಪ್ರವಾಸದ ಮಾಹಿತಿ ಹಂಚಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಿ, ನಂತರ ಝಾನ್ಸಿಯಲ್ಲಿ ‘ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ’ನಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ಭಾರತದಲ್ಲೇ ತಯಾರಿಸಲಾದ ರಕ್ಷಣಾ ಸಾಮಗ್ರಿಗಳನ್ನು ಸೇನೆಗೆ ಹಸ್ತಾಂತರಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮುನ್ನ ಪ್ರಧಾನಿ ಇಂದು ಬೆಳಗ್ಗೆ 9ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಗುರು ನಾನಕ್ ಅವರ ಜಯಂತಿಯ ಕುರಿತೂ ತಿಳಿಸಲಾಗಿದೆ.
ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
Today is the Parkash Purab of Sri Guru Nanak Dev Ji.
Today PM will inaugurate key schemes relating to irrigation in Mahoba, Uttar Pradesh.
Then, he will go to Jhansi for the ‘Rashtra Raksha Samparpan Parv.’
Before all of these programmes, he will address the nation at 9 AM.
— PMO India (@PMOIndia) November 19, 2021
ಇಂದು ಝಾನ್ಸಿಯಲ್ಲಿ ಸಶಸ್ತ್ರ ಪಡೆಗಳಿಗೆ ಭಾರತದಲ್ಲೇ ತಯಾರಾದ ಹೆಲಿಕಾಫ್ಟರ್, ಡ್ರೋನ್ಗಳನ್ನು ಹಸ್ತಾಂತರಿಸಲಿರುವ ಪ್ರಧಾನಿ:
ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಭಿಯಾನವನ್ನು ಸರ್ಕಾರ ನಡೆಸುತ್ತಿದೆ. ಇದರ ಅಂಗವಾಗಿ ಝಾನ್ಸಿಯಲ್ಲಿ ನಡೆಯುತ್ತಿರುವ ‘ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ’ದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು, ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿರುವ ಯುದ್ಧ ಹೆಲಿಕಾಪ್ಟರ್ಗಳನ್ನು ವಾಯುಪಡೆ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಇದರೊಂದಿಗೆ ಭಾರತದ ನವೋದ್ಯಮ ಅಭಿವೃದ್ಧಿಪಡಿಸಿರುವ ಡ್ರೋಣ್ ಮತ್ತು ಮಾನವ ರಹಿತ ವೈಮಾನಿಕ ಉಪಕರಣಗಳನ್ನು ಸೇನಾ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳನ್ನು ನೌಕಾಪಡೆ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಇದನ್ನೂ ಓದಿ:
Tirupathi: ಭಾರಿ ಮಳೆಯಿಂದ ಟಿಟಿಡಿಯ 2 ಘಾಟ್ಗಳು ಕ್ಲೋಸ್; ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ
Published On - 8:32 am, Fri, 19 November 21