Tirupathi: ಭಾರಿ ಮಳೆಯಿಂದ ಟಿಟಿಡಿಯ 2 ಘಾಟ್​ಗಳು ಕ್ಲೋಸ್; ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ

TTD: ತಿರುಮಲ ತಿರುಪತಿಯಲ್ಲಿ ಭಾರಿ ಮಳೆಯ ಕಾರಣ, ಯಾತ್ರಾರ್ಥಿಗಳು ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ದೇವಸ್ಥಾನದ ಕಛೇರಿಗೆ ರಜೆ ಘೋಷಿಸಲಾಗಿದೆ.

Tirupathi: ಭಾರಿ ಮಳೆಯಿಂದ ಟಿಟಿಡಿಯ 2 ಘಾಟ್​ಗಳು ಕ್ಲೋಸ್; ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ
ತಿರುಮಲ- ತಿರುಪತಿಯಲ್ಲಿ ಭಾರಿ ಮಳೆ
Follow us
TV9 Web
| Updated By: shivaprasad.hs

Updated on: Nov 19, 2021 | 7:54 AM

ತಿರುಪತಿ: ಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಗುರುವಾರ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಅಸ್ತಗೊಂಡಿದೆ. ಟಿಟಿಡಿಯ ಎರಡು ಘಾಟ್ ರಸ್ತೆಗಳ ಮೇಲೆ ಕಲ್ಲುಬಂಡೆಗಳು ಉರುಳಿಬಿದ್ದಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎರಡು ದಿನಗಳ ಕಾಲ ಪಾದಚಾರಿ ಮಾರ್ಗವನ್ನೂ ಟಿಟಿಡಿ ಮುಚ್ಚಿದೆ. ತಿರುಪತಿಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ನೀರು ನುಗ್ಗಿದೆ. ಟಿಟಿಡಿಯ ಎಲ್ಲ ಸರ್ವರ್, ನೆಟ್‌ವರ್ಕ್ ಕೂಡ ಸ್ಥಗಿತವಾಗಿದ್ದು, ನಗರದಲ್ಲಿ ರೈಲ್ವೆ ಅಂಡರ್‌ಪಾಸ್‌ಗಳು ಮುಳುಗಡೆಯಾಗಿವೆ. ರೇಣಿಗುಂಟ ಏರ್‌ಪೋರ್ಟ್‌ನಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಸ್ತಬ್ಧವಾಗಿದೆ. ಭಾರಿ ಮಳೆಯಿಂದ ಅಪಾಯದ ಮುನ್ಸೂಚನೆ ಇರುವ ಕಾರಣ, ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ ನೀಡಲಾಗಿದೆ.

ತಿರುಪತಿಗೆ ಹೋಗುವ ಪಾದಾಚಾರಿ ಮಾರ್ಗ ಅಪಾಯದ ಸ್ಥಿತಿಯಲ್ಲಿರುವುದು

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ ರೆಡ್ಡಿ ತಿರುಪತಿಯ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ, ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಎಎನ್​ಐ ಮಾಹಿತಿ ಹಂಚಿಕೊಂಡಿದೆ.

ಟಿಟಿಡಿಯಲ್ಲಿ ಭಾರಿ ಮಳೆಯ ಕಾರಣ, ದೇವರ ದರ್ಶನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ವರ್ಚುಯಲ್ ಮುಖಾಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ದೇವಸ್ಥಾನದ ಆಡಳಿತ ಮಂಡಳಿ ಮಳೆಯಿಂದ ಸಿಲುಕಿಕೊಂಡಿರುವ ಯಾತ್ರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡಿದೆ. ಇಂದು (ಶುಕ್ರವಾರ) ದೇವಸ್ಥಾನದ ಕಛೇರಿಗೆ ರಜೆ ಘೋಷಿಸಲಾಗಿದೆ ಎಂದು ಟಿಟಿಡಿ ಅಧಿಕಾರಿ ಕೆಎಸ್ ಜವಾಹರ್ ರೆಡ್ಡಿ ತಿಳಿಸಿದ್ದಾರೆ.

ಇಂದು ಕೂಡ ಆಂಧ್ರಪ್ರದೇಶದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.  ಅದರಲ್ಲೂ ಅನಂತಪುರ ಹಾಗೂ ಕಡಪ ಜಿಲ್ಲೆಗಳಲ್ಲಿ ಶುಕ್ರವಾರ ಮುಂಜಾನೆ ಪ್ರವಾಹದ ಪರಿಸ್ಥಿತಿಯ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ:

Karnataka Weather Today: ಬೆಂಗಳೂರು, ಮಲೆನಾಡು ಸೇರಿ 11 ಜಿಲ್ಲೆಗಳಲ್ಲಿ ಇಂದು ವಿಪರೀತ ಮಳೆ; ಆರೆಂಜ್ ಅಲರ್ಟ್​ ಘೋಷಣೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರಂತರ ಮಳೆ: ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ